ದೇಸಿ ತಳಿ ಹಸುಗಳು ರೈತರಿಗೆ ಭಾರವೇ…… !? | ಯಾಕೆ ಈ ಪ್ರಶ್ನೆ ಗೊತ್ತೇ….? |

November 22, 2023
1:19 PM
ನಿಸರ್ಗದ ಜೀವಿಗಳಾದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಉಳಿಯಬೇಕು. ಅದು ಹೇಗೆ..?. ದೇಸೀ ದನಗಳ ಸಗಣಿ, ಗೋಮೂತ್ರದ ಮೌಲ್ಯಕ್ಕೆ ನಾವು ಬೆಲೆ ಕೊಡುವಂತಾಗಬೇಕು.

ಕೃಷಿಕರಿಗೆ(Farmer) ಬಹಳಷ್ಟು ವಿಚಾರದಲ್ಲಿ ಹಾಕಿದ ಶ್ರಮಕ್ಕೆ ನೇರವಾಗಿ ಹಣ ಬರುವುದಿಲ್ಲ. ‌ಅದರಲ್ಲಿ ಈ ಹೋರಿ ಬರಡು ಹಸುಗಳ(barren Cattle) ಸಾಕಣೆಯೂ ಒಂದು. ಇವುಗಳ ಸಗಣಿ(Cow dung) ಮೌಲ್ಯಕ್ಕೆ ನಾವು ಬೆಲೆ ಕೊಟ್ಟರೆ ನಾವು ಇಚ್ಚೆ ಪಟ್ಟು ಗೋವು ಪಾಲನೆ ಮಾಡುತ್ತೇವೆ. ಈ ಸಗಣಿ ಗೋಮೂತ್ರದ(Gomutra) ಬೆಲೆ ನಮ್ಮ ಕಣ್ಣಿಗೆ ಕಾಣಿಸದು. ಹಾಗಾಗಿ ಹೆಚ್ಚು ಹಾಲು ಕೊಡದ ದೇಸಿ ಹಸುಗಳು(Desi cow) ಅನುತ್ಪಾದಕ ‌. ಆದ್ದರಿಂದ ದೇಸಿ ಹಸುಗಳನ್ನು ಬಹಳಷ್ಟು ರೈತರು ತಮ್ಮ ಮನೆ ಬಾಗಿಲಿಗೆ ಬರುವ ಕಸಾಯಿಗೆ(slaughterhouse) ತಮ್ಮ ಹೋರಿ ಹಸುಗಳನ್ನು ನೀಡುವುದೇ ಸುಲಭದ ಪರಿಹಾರವಾಗಿದೆ. ಅದನ್ನು ಸಮರ್ಥಿಸಿಕೊಳ್ಳಲು ಬಲವಾದ ಕಾರಣಗಳು ಸಿಗುತ್ತದೆ. ‌ಆ ಕಾರಣಗಳೇ ಮೇಲಾಗುತ್ತಾ ಹೋಗಿ ಇನ್ನೇನು ಕೆಲ ವರ್ಷಗಳಲ್ಲಿ ಮಲೆನಾಡು ಕರಾವಳಿಯಲ್ಲಿ ಉಳಿಸಲು ಅಥವಾ ಸಾಕಲು ಮಲೆನಾಡು ಗಿಡ್ಡ ಹಸುಗಳೇ ಇರುವುದಿಲ್ಲ….

Advertisement
Advertisement

ನನ್ನ‌ ಕಣ್ಣೆದುರೇ ನಮ್ಮ ಮಲೆನಾಡಿನಲ್ಲಿ ಇಂತಹ ಹಲವಾರು ನಾಮಾವಶೇಷವಾದ ಅಮೂಲ್ಯ ಸಸ್ಯ ಪ್ರಾಣಿ ಜೀವ ಸಂಕುಲಗಳಿವೆ. ಈ ಭೂಮಿಯ ಮೇಲೆ ನಾಗರಿಕತೆ ಆರಂಭ ವಾಗಿ ನಾಲ್ಕೈದು ಸಾವಿರ ದಲ್ಲಿ ಮನುಷ್ಯ ಜೀವಿ ಯುದ್ದ, ಕ್ಷಾಮ ಡಾಂಬರದಾಚೆಯೂ ಈ ಹಿಂದಿನ ಶತಮಾನದ ತನಕವೂ ತನ್ನ ಎಲ್ಲಾ ಸಹಜೀವಿಗಳ ಜೊತೆಗೆ ಬಾಳುವೆ ಮಾಡಿಕೊಂಡು ಬಂದಿದ್ದ. ಆದರೆ ಯಾವಾಗ ಮನುಷ್ಯ ತಂತ್ರಜ್ಞಾನದ ಹಿಂದೆ ಬಿದ್ದನೋ ಆಗಿನಿಂದ ಭೂಮಿಯ ಮೇಲಿನ ಒಂದೊಂದೇ ಸಸ್ಯ ಪ್ರಾಣಿಗಳನ್ನು ನಾಶ ವಾಗುತ್ತಾ ಹೋಗಿ ಇನ್ನೊಂದು ನೂರು ವರ್ಷಗಳಲ್ಲಿ ಈ ತಂತ್ರಜ್ಞಾನವೇ ಮನುಷ್ಯ ಸಂಕುಲವನ್ನೇ ನಾಮಾವಶೇಷ ಮಾಡುತ್ತದೆ ಎಂಬುದು ಕ್ರೂರ ಸತ್ಯ…

Advertisement

ಆ ನಡುವೆ ನಮ್ಮಂಥವರದ್ದು ನಮ್ಮ ಕೈಲಾದ ಮಟ್ಟದ ಅಂತಿಮ ಹೋರಾಟ…. ಕಾರಣ, ನಮ್ಮಷ್ಟೇ ಈ ಭೂಮಿಯ ಮೇಲಿನ ಬದುಕುವ ಹಕ್ಕು ಇರುವ ಈ ನಿಸರ್ಗದ ಜೀವಿಗಳಾದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಉಳಿಯಬೇಕು… ಇದು ಎಲ್ಲರ ಆಶಯವಾಗಲಿ ಎಂಬುದು ನಮ್ಮ ಬಯಕೆ….

An easy solution is to give the desi cows to the slaughterhouse that many farmers come to their doorstep. There are strong reasons to justify it. Those reasons are increasing and in a few years there will be no Malnadu young cows to save or rear in the Malnadu coast....
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror