ಇನ್ನು ಮುಂದೆ ಔಷಧ ಪ್ಯಾಕೆಟ್’ಗಳ ಮೇಲೆ ಇರುವ ಕ್ಯೂಆರ್ ಕೋಡ್ ಸಹಾಯದಿಂದ ಔಷಧಗಳು ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯಬಹುದು. ಮೊದಲ ಹಂತದಲ್ಲಿ ಮಂಗಳವಾರದಿಂದ ಆರಂಭಗೊಂಡು, ಶೆಲ್ಕಾಲ್, ಕಾಲ್ಬಾಲ್, ಡೊಲೊ ಸೇರಿದಂತೆ 300 ಪ್ರಮುಖ ಬ್ಯಾಂಡ್‌ಗಳ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ.
ಮುಂದಿನ 20 ದಿನಗಳಲ್ಲಿ ಈ ಔಷಧಗಳು ಮಾರುಕಟ್ಟೆಗೆ ಬರಲಿವೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲಾ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅವಳಡಿಸಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಯಾವುದೇ ಆ್ಯಪ್ಅ ನ್ನು ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಕೇವಲ ಸ್ಕ್ಯಾನ್ ಮಾಡಿದರೆ ಸಾಕು. ಅಲ್ಲಿ ನೀಡಿರುವ ಲಿಂಕ್, ಔಷಧದ ಮಾಹಿತಿ ನೀಡಲು ವಿಫಲವಾದರೆ ಅಥವಾ ಪ್ಯಾಕೆಟ್ ಮೇಲೆ ಹಾಕಿರುವ ವಿವರಕ್ಕೆ ಹಾಗೂ ಅದರಲ್ಲಿರುವ ವಿವರಕ್ಕೂ ಹೊಂದಿಕೆಯಾಗದಿದ್ದರೆ, ಆ ಔಷಧವು ನಕಲಿ ಎಂದು ತಿಳಿಯಬಹುದು.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…