ಅರೆಭಾಷಾ ಸಾಹಿತ್ಯ | ಪ್ರಾಣಿಗಳ ಕಥೆ… |

April 13, 2022
12:35 PM

ಪ್ರಾಣಿಗ ನಮ್ಮ ಮನುಷ್ಯನ ಇನ್ನೊಂದು ರೂಪಂತಾ ಹೇಳಕ್. ಅದ್ ಹೆಂಗೆಂತಾ ಹೇಳಿರೆ, ನಾವು ಮನ್ಷಗ… ನಾವುಗೆ ಎರಡ್ ಕಾಲ್ ಎರಡ್ ಕೈ ಉಟ್ಟು ಪ್ರಾಣಿಗಳಿಗು ಹಂಗೆನೇ ಇರ್ದು. ಆದರೆ, ನಾವು ಬರೀ ಎರಡ್ ಕಾಲ್ಲಿ ಮಾತ್ರ ನಡ್ದವೆ ಪ್ರಾಣಿಗ ಎರಡ್ ಕಾಲ್ ಮತ್ತು ಎರಡ್ ಕೈ ನ ಕುಡ ಸೇರ್ಸಿ ನಡ್ದವೆ. ನಮ್ಮಲ್ಲಿ ಮಕ್ಕ ಅಂಬೆ ಕಾಲ್ಲಿ ಹೋದವೆ ಅಂತಾ ಹೇಳುವೆ ಅಲ ಅದೇ ರೀತಿ ಅವು ನಡೆದರ ಹೇಳಕ್. ಪ್ರಾಣಿಗಳಿಗೆ ನಮ್ಮಂತ ಮನುಷ್ಯರಿಂದ ಬುಧ್ಧಿ ಮತ್ತ್ ನೆನ್ಫುನ ಶಕ್ತಿ ಜಾಸ್ತಿ ಇದ್ದದೆ. ಯಾಕೆಂತಾ ಹೇಳಿರೆ ಪ್ರಾಣಿಗ ಒಮ್ಮೆ ಆದ ಘಟನೆನ ಹಂಗೆನೇ ಒಮ್ಮೆ ನೋಡ್ದರ ಅವು ಯಾಗೋಲು ನೆನ್ಫುಲಿ ಇಸಿಕಂದವೇ. ಅವು ನಮ್ಮಂಗೆ ಬಾಯಿ ಬುಟ್ಟು ಮಾತಡ್ದುಲೆ ಅಷ್ಟೆ.

Advertisement
Advertisement

ಉದಾಹರಣೆಗೆ : ನಾಯಿ , ಕೊತ್ತಿ , ದನಗ. ಇವು ಎಲ್ಲಾ ತಿಂಬೊಕೆ ಅಂತಾ ಹೊರಗಡೆ ಇದ್ದಬದ್ದವರ ಮನೆ ಕಾಡ್ ಸೈಡ್ ಎಲ್ಲಾ ಹೋಕಂಡ್ ಇದ್ದವೆ ಹಂಗೆ ಹೋಕನ ಒಬ್ಬ ಮನುಷ್ಯ ನಾಯಿಗಳಿಗೆ , ಕೊತ್ತಿಗಳಿಗೆ , ದನಗಳಿಗೆ ತಿಂಬೊಕೆ ಕುಡೆಕೆ ಏನಾರ್ ಕೊಟ್ಟರೆ ಅದರ ನೆನ್ಫುಲಿ ಇಸಿಕಂಡ್ ಅವುಕೆ ಏನ್ ಉಪ್ಪದ್ರ ಮಾಡದೇ ಮರ್ದಿನ ಕೂಡ ಅವರ ಮನೆ ಎದ್ರಿಲಿ ಹೋಗಿ ಕಾಯತ ಇದ್ದವೆ ಎಷ್ಟೋತ್ತಿಗೆ ಬಂದವೆ ತಿಂಬೊಕೆ ಎಂತಾ ಕೊಟ್ಟವೆ ಅಂತಾ.

ನಾಯಿಗಳ ಬಗ್ಗೆ ಹೇಳ್ದಾರ್… ನಾಯಿಗಳ ಎಲ್ಲಾ ಮನುಷ್ಯಂಗ ತುಂಬಾ ಇಷ್ಟ ಪಟ್ಟವೆ. ಪ್ರೀತಿ ಮಾಡುವೆ. ಅದ್ ಒಂದು ಕಾರಣ ಮನೆ ಕಾದದೆ ಅಂತಾ ಉದ್ದೇಶಂದ ಮತ್ತೊಂದು ನಾಯಿಗಳಿಗೆ ಇರುವ ಬುಧ್ಧಿ ಎಲ್ಲಾ ಮನುಷ್ಯರ್ಗಳಿಗೆ ಇಲ್ಲೆಂತಾ ಹೇಳಕ್.
ನಾಯಿಗಳ ಎಲ್ಲವು ನಾರಾಯಣ ದೇವ್ರು ಅಂತಾ ಪೂಜೆಮಾಡುವೆ. ನಮ್ಮ ಮನೆಲಿ ಮುಂದೆ ಏನಾರ್ ಭಂಗ ಆಗುವಂತದ್ ಸುರು ಆದೆಂತಾ ಮುಂದೆ ಗೊತ್ತಾದು ನಮ್ಮ ನಾಯಿಗಳಿಗೆ. ಅದ್ ನಾವುಗೆ ಹೆಂಗೆ ಗೊತ್ತಾದು ಅಂತಾ ಹೇಳಿರೆ ಅದರ ತಡ್ಕಂಕೆ ಆಗದೆ ಕೆಲವು ನಾಯಿಗ ಸತ್ತವೆ, ಉಳ್ದ ಕೆಲವು ನಾಯಿಗ ಪಾಂಗ್ ಕೊರ್ದು ಅಂತಾ ಹೇಳುವೆ ಅಲಾ ಆ ರೂಪಲಿ ಇಲ್ಲರ್ ಮನುಷ್ಯನ ಎಲ್ಲಿಗಾರ್ ಕರ್ಕಂಡ್ ಹೋಗಿ ನಾವುಗೆ ಬರುವ ಭಂಗಗಳ ತಪ್ಪುಸುವೆ ಅಂತಾ ಹೇಳಕ್.

ಇನ್ನ್ ,ಕೊತ್ತಿಗ ಹೆಚ್ಚಾಗಿ ಮಕ್ಕಳೊಟ್ಟಿಗೆ ತುಂಬಾ ಹೊಂದಿಕಂಡ್ ಇದ್ದವೆ ಯಾಕೆಂತಾ ಹೇಳಿರೆ ಮಕ್ಕಳ ಕೈ ತುಂಬಾ ಮೆತ್ತನೆಯಾಗಿ ಇದ್ದದೆ ಮಕ್ಕ ಹಿಡೆಕನ ಕೊತ್ತಿಗಳಿಗೆ ಬೇನೆ ಆದುಲೆ ಅಂತಾ ಹೇಳಕ್ ಅವು ಅದರ ಅಮ್ಮ ಮಕ್ಕಳ ಆರೈಕೆ ಮಾಡ್ದಂಗೆ ಕೊತ್ತಿನ ಮೀಸುದು, ಹಿಡ್ಕಂಡ್ ಮಲ್ಗುದು ಹಂಗೆನೇ ತುಂಬಾ ಲಾಯಿಕ್ ಪ್ರೀತಿಲಿ ನೋಡಿಕಂದವೆ. ಕೊತ್ತಿಗಳಿಗೆ ಕೂಡ ಮಕ್ಕಂತಾ ಹೇಳಿರೆ ತುಂಬಾ ಇಷ್ಟ. ಮನೆವು ಎಷ್ಟ್ ಬೊಡ್ದು ಮನೆಂದ ಹೊರಗೆ ಓಡ್ಸಿರು ಮಕ್ಕ ಮನೆಗೆ ಕರ್ಕಂಡ್ ಬಂದ್ ಲಾಯ್ಕ್ ನಮ್ಮೊಟ್ಟಿಗೆನೆ ಬೆಡ್ಶೀಟ್ ಒಳಗೆ ಬೆಚ್ಚ ಆಗುವಂಗೆ ಮಲ್ಗಿಸಿಕಂದವೆ . ಅಂತಾ ಕೊತ್ತಿಗನೂ ತುಂಬಾ ಮಕ್ಕಳ ಇಷ್ಟ ಪಟ್ಟವೆ . ಮಕ್ಕ ಮನೆಲಿ ಒಂದು ನಾಲ್ಕ್ ದಿನ ಇತ್ಲರ್ ಕೊತ್ತಿಗ ಮನೆಲಿ ಇದ್ರು ಏನ್ ತಿನ್ನದೆ ಮಕ್ಕಳ ದಾರಿಕಾದ್ಕಂಡ್ ಇದ್ದವೆ. ಅಷ್ಟೊತ್ತು ಮುಟ್ಟ ಮನೆಲಿ ಇರುವವರ ಕೂಡ ನೆಮ್ಮದಿಲಿ ಇರ್ಕೆ ಬುಡ್ದುಲೆ, ಮರ್ಟ್ಕಂಡ್, ಕಚ್ಚಿಕಂಡ್ ಇದ್ದವೆ. ಹಂಗೆ ಕಾದ್ ಕಾದ್ ಕೊತ್ತಿಗ ಬೊಚ್ಚಿ ಹಂಗೆಂತಾ ಹೇಳಿರೆ ಈಗ ನಾವು ಸಪುರ ಆದ್ , ಸಣ್ಣ ಆದ್ ಅಂತಾ ಹೇಳ್ದುಲೆನ ಅದುವೇ. ಹಂಗೆ ಆಗಿದ್ದ ಕೊತ್ತಿಗಳ ನೋಡಿ ಬುಡಿಕೆ ಆದುಲೆ . ಅದೇ ಹೊತ್ಲಿ ಮಕ್ಕ ಮನೆಗೆ ಎತ್ತಿ ಆಕನ ಕೊತ್ತಿನ ಮುಖಲಿ ಒಂದು ಖುಷಿ ಖಂಡದೆ ಮಕ್ಕ ಬಂದಂಗೆ ಕೊತ್ತಿಗ ಸರೀ ತಿಂದ್ ಮಕ್ಕಳೊಟ್ಟಿಗೆ ಆಡಿಕಂಡ್ ಮತ್ತೇ ಮುಂದೆ ಹೆಂಗೆ ಇದ್ದ ಹಂಗೆನೇ ಆದವೇ ಅಂತಾ ಹೇಳಕ್. ಮಕ್ಕ ಎಲ್ಲಾ ಚಿನ್ನು, ಪಪ್ಪು, ಮುದ್ದು, ಬಾಬೆ ಅಂತಾ ಅಮ್ಮಂದಿರ್ ಮಕ್ಕಳ ಕರೆಯುವಂಗೆ ಮಕ್ಕ ಕೂಡ ಕರ್ಕಂಡ್,ನೋಡಿಕಂಡ್ ಆಟಡ್ಸುವೆ.

ಇನ್ನೊಂದು ದನಗ ಇವು ಕೂಡ ತುಂಬಾ ಬುದ್ಧಿವಂತದ್ ಅಂತಾ ಹೇಳಕ್. ದನಗಳ ಎಲ್ಲವು ದೇವ್ರು ಅಂತಾ ಪೂಜಿಸುವೆ. ಸತ್ಯನಾರಾಯಣ ಪೂಜೆಲಾ ಮಾಡ್ದರ್ ಪೂಜೆಗೆ ದನದ ಉಚ್ಚೆ, ದನದ ಸೆಗ್ಣಿ, ಹಾಲ್ ಇಲ್ಲದೆ ಪೂಜೆ ನಡೆಲ್ಲೆ ಅಂತಾ ಹಿಂದೆಂದಲೇ ಬಂದ ಪದ್ಧತಿ ಆಗುಟು. ದನಗಳ ನಮ್ಮ ಹಿಂದೂಗಳ ಹಬ್ಬದ ದೀಪಾವಳಿ ಹಬ್ಬಗಲ್ಲಿ ಎಲ್ಲವು ದನಗಳ ತೊಳ್ದ್ ಪೂಜೆ ಮಾಡುವೆ. ಅದ್ ಹೆಂಗೆಂತಾ ಹೇಳಿರೆ _ ದನಗಳಿಗೆ ಬೆಳ್ಕ್ ನ ತೋರಿಸಿ, ತಿಂಬೊಕೆ ತೊಡ್ಪೆಲಿ ಕೊಡಿ ಬಾಳ್ಳೆಲೆ ಇಸಿ ಅದರ ಮೇಲೆ ಒಂದು ದೀಪ ಹೊತ್ತಿಸಿ , ಬಾಳೆಹಣ್ಣ್ , ಅವಲಕ್ಕಿ , ದೋಸೆ ಹಂಗೆನೇ ಬೇರೆ ಬೇರೆ ಹಿಟ್ಟ್ ಗಳ, ಪಿಂಗಾರ, ಹಂಗೆ ಮನೆಲಿ ಆದ ಹೂಗಳ ಎಲ್ಲಾ ಮಾಲೆ ಮಾಡಿ ದನಗಳ ಕುತ್ತಿಗೆಗೆ ಹಾಕುವೆ. ದನಗಳ ಮೂರ್ ಅಲ್ಲರ್ ಐದ್ ಹೆಣ್ಣ್ ಮಕ್ಕ ಆರ್ತಿ ಮಾಡಿ ಶೋಭಾನೆ ಪದ್ಯ ಹೇಳಿ ದನಗಳ ಖುಷಿ ಪಡ್ಸುವೆ.

Advertisement
ದನಗ ಕರ್ ಹಾಕುದು ಹೆಚ್ಚಾಗಿ ಒಂಭತ್ತ್ ತಿಂಗ ಆದ ಮೇಲೆ ಕೆಲವು ದನಗ ಮಾತ್ರ ಏನಾರ್ ತೊಂದರೆ ಇದ್ದ್ ಏಳ್ ಎಂಟ್ ತಿಂಗಳಲ್ಲಿ ಹಾಕುವೆ. ಕರ್ ಹಾಕಿದ ಮೇಲೆ ಹಸ್ ನ ಕರ್ ನ ತೊಳ್ದವೆ. ಒಳ್ಳೆ ಮೆಣ್ಸ್ ಅರ್ಶಿನ ಎಣ್ಣೆಗಳ ಸೇರ್ಸಿ ಒಂದ್ ಮದ್ದ್ ಮಾಡಿ ಹಸಿಗೆ ಪೂಜುವೆ. ಮತ್ತೆ ಅದ್ ಆದ ಮೇಲೆ ಹಸ್ ಗೆ ತಿಂಬೊಕೆ, ಕುಡೆಕೆ ಕೊಟ್ಟವೆ. ಮತ್ತೆ ಹದ್ನಾರ್ ದಿನ ಹಾಲ್ ಕರ್ದವೆ. ಅದರ ಯಾವುದಕ್ಕೂ ಬಳ್ಸುದ್ಲೆ ಕರಿಗೆ ಜಾಸ್ತಿ ಆದೆಂತಾ ಮಾತ್ರ ಹಾಲ್ ಕರೆದು. ಆ ಹಾಲ್ನ ಕೆಲವು ಚಾಲೆ ಬುಡಕೆ ಹಾಕುವೆ. ಇಲ್ಲರ್ ಹರ್ದ್ ಹೋವ ನೀರ್ಗೆ ಹೊಯ್ದವೆ ಇಲ್ಲರ್ ಹಸಿಗೆ ಕೊಡುವ ಮಡ್ಡಿಗೆ ಹಾಕಿ ಹಸಿಗೆನೆ ಕೊಟ್ಟವೆ. ಹಸ್ ನ ಕೆಚ್ಚಲಿಗೆ ಒಮ್ಮೆ ಸುರುಗೆ ಯಾರ್ ಕೈ ಹಾಕುವೆ ಅವ್ರನೇ ಹಸ್ ತುಂಬಾ ಗುರ್ತಲಿ ಇಸಿಕಂಡ್ ಇದ್ದದೆ. ಹಂಗೆ ಅವರ ಬುಟ್ಟು ಬೇರೆಯಾರರ್ ಕೈ ಹಾಕಿರೆ ಮೆಟ್ಟುವ ಕೆಲ ದನಗ. ಹಸ್ ಗಳಿಗೆ ಹದ್ನಾರ್ ದಿನ ಆದ ಮೇಲೆ ಈಶ್ವರ ದೇವಸ್ಥಾನ, ಪಂಜ ಸೇರಿ ಅದರ ನೆರೆಕರೆಯ ಜನಗ ಎಲ್ಲ ನಾಲ್ಕೂರು ಕಯ ಎಂಬಲ್ಲಿಗೆ ಹಾಲ್ನ ಕೊಟ್ಟವೆ. ಕೆಲವು ಬೇರೆ ಹರ್ಕೆಂತಾ ಹೇಳ್ಕಂಡ್ ಇದ್ದರೆ ಅದರಂಗೆ ಮಾಡುವೆ. ಅದರ ಮೇಲೆ ಮರ್ದಿನಂದ ಹಾಲ್ ಕರ್ದ್ ಅಂಗಾರಕಲ್ಲಿಗೆ ಹಿಂದೆನ ದಿನದ ಹಾಲ್ನ ಮೊಸ್ರು ಮಾಡಿ ತಣ್ಣನೆ ಗಂಜಿನ ಕೊಡಿ ಬಾಳ್ಳೆಲೆ ಇಸಿ ಕಾಯಿ ಒಡ್ದ್ ಕೈ ಮುಗ್ದ್ ಏನಾರ್ ಒಂದು ಸಣ್ಣ ಎಲೆಲಿ ಅಂಗಾರಕಲ್ಲಿಗೆ ಹಾಲ್ ಇಸಿ ಹಾಲ್ನ ಮನೆ ಒಳಗೆ ತಕಂಡ್ ಹೋಗಿ ದೇವರ ಮನೆಲಿ ಇಸುವೆ. ಮತ್ತೆ ಹಾಲ್ನ ಬಿಸಿ ಮಾಡಿ ಮನೆ ಮಕ್ಕಳಿಗೆ ಎಲ್ಲ ಕುಡೆಕೆ ಕೊಟ್ಟವೆ ಮತ್ತೇ ಚಾಯ ಮಾಡಿಕೊಂಡ್ ಕುರ್ದವೆ. ದನದ ಹಟ್ಟಿಲಿ ಇರುವ ಸೊಪ್ಪು ಗೊಬ್ಬರಗಳ ತೋಟಕ್ಕೆ ಕಮ್ಮು ದೈಗಳಿಗೆ , ಚಾಲೆ ಗಳಿಗೆ ಹಾಕುದರಿಂದ ಫಲಬೇಗ ಲಾಯಿಕ್ ಲಿ ಕೊಟ್ಟದೆ ಅಂತಾ ನಂಬಿಕಂಡ್ ಹೆಚ್ಚಿನವು ದನ ಸಾಕುವೆ.

ನಾಯಿಗ, ಕೊತ್ತಿಗ, ದನಗಳ ಬುಟ್ಟು ಇನ್ನೂ ತುಂಬಾ ಪ್ರಾಣಿಗ ಒಳ ಅವು ಕೂಡ ಇವರ ಹಂಗೆನೇ ಮನುಷ್ಯಂಗೆ ಒಂದೊಂದು ರೀತಿಲಿ ಉಪಕಾರ ಮಾಡುವೆ ಅಂತಾ ಹೇಳಕ್. ಪ್ರಾಣಿಗಳಿಂದ ನಮ್ಮ ಜೀವನಕ್ಕೆ ಒಳ್ಳೆದು ಉಟ್ಟು ಹಾಲ್ ಉಟ್ಟು…

# ಅನನ್ಯ ಹೆಚ್, ವಿದ್ಯಾರ್ಥಿನಿ, ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅನನ್ಯ ಎಚ್‌ ಸುಬ್ರಹ್ಮಣ್ಯ

ಅನನ್ಯ ಎಚ್ ಸುಬ್ರಹ್ಮಣ್ಯ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ವಿದ್ಯಾರ್ಥಿನಿ. ಸಾಹಿತ್ಯ , ಕವನಗಳನ್ನು ಬರೆಯುವುದು, ನಿರೂಪಣೆ ಮಾಡುವುದು, ಹಾಡುವುದು, ನೃತ್ಯದಲ್ಲಿ  ತೊಡಗಿಕೊಳ್ಳುವುದು ಇವರ ಹವ್ಯಾಸ. ಪ್ರತಿಭಾವಂತ ವಿದ್ಯಾರ್ಥಿನಿ.

ಇದನ್ನೂ ಓದಿ

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!
May 25, 2025
6:00 AM
by: ನಾ.ಕಾರಂತ ಪೆರಾಜೆ
ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group