ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ

May 18, 2025
8:00 AM
ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ ಆದಾಯದ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ. ಆದರೆ ಸಕಾಲದಲ್ಲಿ ಸೂಕ್ತ ತಂತ್ರಜ್ಞಾನ, ಹೊಸ ಮಾರುಕಟ್ಟೆ ಮತ್ತು ಸರ್ಕಾರದ ಸಹಾಯದಿಂದ ಈ ಅಪಾಯವನ್ನು ತಡೆಯಬಹುದು. 

ಅಡಿಕೆ ಹಾಳೆಯಿಂದ  ತಯಾರಿಸಲಾದ ಡಿನ್ನರ್‌ವೇರ್‌ (Palm Leaf Dinnerware) ಉತ್ಪನ್ನಗಳ ಮಾರಾಟವು ಅಂತಾರಾಷ್ಟ್ರೀಯ ಮಾರುಕಟ್ಟೆ, ವಿಶೇಷವಾಗಿ ಅಮೆರಿಕ, ಕೆನಡಾ, ಯುರೋಪ್, ಆಸ್ಟ್ರೇಲಿಯಾ ಮೊದಲಾದ ಪರಿಸರ ಸಂವೇದನಾಶೀಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಇತ್ತು.

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪ್ರಮುಖ ಕಾರಣಗಳು:

Eco-Friendly products  (ಪರಿಸರ ಸ್ನೇಹಿ ಉತ್ಪನ್ನಗಳಿಗೆ  ದೊಡ್ಡ ಬೇಡಿಕೆ) :  ಪ್ಲಾಸ್ಟಿಕ್ ನಿಷೇಧ ಮತ್ತು ಪರಿಸರ ಸಂರಕ್ಷಣೆಯ ಅರಿವಿನ ಬೆಳವಣಿಗೆಯೊಂದಿಗೆ, developed ರಾಷ್ಟ್ರಗಳಲ್ಲಿ ಬಯೋಡೀಗ್ರೇಡಬಲ್ ಮತ್ತು ಕಂಪೋಸ್ಟಬಲ್ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ಇದೆ.

Sustainability Marketing  (ಸುಸ್ಥಿರ ಮಾರುಕಟ್ಟೆ) : ಅಡಿಕೆ ಹಾಳೆಡಿನ್ನರ್‌ವೇರ್ ಉತ್ಪನ್ನಗಳನ್ನು “zero-waste,” “natural,” “chemical-free” ಎಂದು ಮಾರುಕಟ್ಟೆಗಿಳಿಸಲಾಗುತ್ತಿತ್ತು, ಇದು ಗ್ರಾಹಕರ ವಿಶ್ವಾಸವನ್ನು ಗಳಿಸಿತು.

High Profit Margins & Export ಇಂಸೆಂಟಿವ್ಸ್ (ಹೆಚ್ಚಿನ ಲಾಭ ಮತ್ತು ರಫ್ತು ಪ್ರೋತ್ಸಾಹಕಗಳು): ಈ ಉತ್ಪನ್ನಗಳಿಗೆ ಗರಿಷ್ಠ ರಫ್ತು ಮೌಲ್ಯವಿದ್ದು, ಹಲವಾರು ಲಾಭಗಳಿವೆ (Duty-free under GSP schemes), ಇದರಿಂದಾಗಿ ಅಡಿಕೆ ಹಾಳೆ  ಉತ್ಪಾದನೆ ಗ್ರಾಮೀಣ ಕೈಗಾರಿಕೆಗಳಿಗೆ ಆದಾಯದ ಮೂಲವಾಯಿತು.

Advertisement

ಇದನ್ನು ಈ ಕೆಳಗಿನಂತೆ ಹೋಲಿಕೆ ಮಾಡಬಹುದು :

  1. ರಫ್ತು ಮತ್ತು ಆಮದು ಪ್ಯಾಟರ್ನ್ (Export Trends) :  ಅಡಿಕೆ ಹಾಳೆಯಿಂದ  ತಯಾರಾದ ಉತ್ಪನ್ನಗಳ 80%  ಭಾಗವನ್ನು ರಫ್ತು ಮಾಡಲಾಗುತ್ತಿತ್ತು, ಅದರಲ್ಲಿ ಸುಮಾರು60% ಕೇವಲ ಅಮೆರಿಕಕ್ಕೆ, ಉಳಿದವು ಇತರೆ ಯುರೋಪ್, ಆಸ್ಟ್ರೇಲಿಯಾ, ಕೆನಡಾ ಮಾರುಕಟ್ಟೆಗಳಿಗೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆ ನಿಯಮಿತವಾಗಿದ್ದು, ಹೆಚ್ಚಿನ ಬಳಕೆ ಮದುವೆ, ಇವೆಂಟ್, ಡಿಸ್ಪೋಜೇಬಲ್ ಬೇಡಿಕೆಗಳು ಇರುವ ನಗರ ಪ್ರದೇಶಗಳಿಗೆ ಮಾತ್ರ ಸೀಮಿತ.
  2. ಗ್ರಾಹಕರ ಮನಸ್ಥಿತಿ
ಅಂಶ ಅಂತರರಾಷ್ಟ್ರೀಯ ಮಾರುಕಟ್ಟೆ ಭಾರತೀಯ ಮಾರುಕಟ್ಟೆ
ಗ್ರಾಹಕರ ಮನಸ್ಥಿತಿ ಪರಿಸರಪರ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೌಲ್ಯಪರ, ( ಕಡಿಮೆ ದರದಲ್ಲಿ ವಸ್ತು  ಸಿಗಬೇಕು)
ಮಾರಾಟದ ಪ್ರಮಾಣ ಹೆಚ್ಚು (B2B, B2C) ಸೀಮಿತ (Urban niche)
ಬೆಲೆ ಮತ್ತು ಲಾಭ ಹೆಚ್ಚಿನ ಮಾರ್ಜಿನ್ ಕಡಿಮೆ ಬೆಲೆ ಸ್ಪರ್ಧೆ
ಬಳಕೆಯ ಸಂದರ್ಭ ಗೃಹಬಳಕೆ, ಬೇಕರಿ, ಹೋಟೆಲ್‌ಗಳು ಇವೆಂಟ್ಸ್, ಮದುವೆಗಳು, ಹೆಚ್ಚು ನಿಯಮಿತ
ನೀತಿ ಬದಲಾವಣೆ ಪರಿಣಾಮ ಹೆಚ್ಚು ತೀವ್ರ (FDA ನಿಷೇಧ ಇತ್ಯಾದಿ) ಮಿತವ್ಯಾಪ್ತಿಯ ಪರಿಣಾಮ
  1. ಮಾರುಕಟ್ಟೆ ಮೌಲ್ಯ (Market Value) – 2024 ಅಂದಾಜುಗಳ ಪ್ರಕಾರ- ಆದಾಯ ಮತ್ತು ಮಾರ್ಜಿನ್ ಹೋಲಿಕೆ (Revenue & Profit Margins)
ಅಂಶಗಳು   ಅಂತರರಾಷ್ಟ್ರೀಯ ಮಾರುಕಟ್ಟೆ ಭಾರತೀಯಮಾರುಕಟ್ಟೆ
ಅಂದಾಜಿತ ಮಾರುಕಟ್ಟೆ ಮೌಲ್ಯ (2024) USD 300-350 million (₹2500+ ಕೋಟಿ)  ₹ 800-1000 ಕೋಟಿ
ಮಾರಾಟದ ವಾರ್ಷಿಕ ದರ (YoY Growth)- “year-over-year” 8–10% CAGR -Compound Annual Growth Rate   (ಸಂಯೋಜಿತ ವಾರ್ಷಿಕ ಬೆಳವಣಿಗೆ ದರ) 10–12% CAGR (low base effect)

Compound Annual Growth Rate   (ಸಂಯೋಜಿತ ವಾರ್ಷಿಕ ಬೆಳವಣಿಗೆ ದರ

(ಕಡಿಮೆ ಬೇಸ್ ಪರಿಣಾಮ)

 

Advertisement

 

ಪ್ರಮುಖ ಮಾರುಕಟ್ಟೆಗಳು USA, UK, Germany, Canada, Australia Bengaluru, Mumbai, Delhi NCR, Kerala, Goa

 

 

ಒಬ್ಬ ಉತ್ಪಾದಕರಿಗೆ ಪ್ರತಿ ತಿಂಗಳು ಆದಾಯ         )

 

₹5–10 ಲಕ್ಷ (ಮಧ್ಯಮ ಪರಿಗಣನೆ) ₹1–3 ಲಕ್ಷ (ಸ್ಥಳೀಯ ಮಾರಾಟದ ಆಧಾರದಲ್ಲಿ
ಮಾರ್ಜಿನ್ ಶೇಕಡಾವಾರು 30–40% 15–20 %

 

ಪ್ರಮುಖ ವಿತರಣಾ ಮಾದರಿ B2B (bulk to retailers, hotels) B2C (event-based, urban organic stores)

Advertisement

 

ಈ FDA ಪ್ರಕಟಣೆಯ ನಂತರ Areca catechu (ಅಡಿಕೆ) ಅಡಿಕೆ ಹಾಳೆ  ಗಳಿಂದ ತಯಾರಿಸಲಾದ ಡಿನ್ನರ್‌ವೇರ್‌ಗಳ ಮೇಲೆ ಅಮೆರಿಕದ ಮಾರುಕಟ್ಟೆಯಲ್ಲಿ ನಿಷೇಧ ವಿಧಿಸಲಾಗಿರುವುದು ಅಡಿಕೆ ಬೆಳೆಗಾರರ ಮೇಲೆ ಕೆಲವು ಪ್ರಮುಖ ಪರಿಣಾಮಗಳನ್ನು ಉಂಟುಮಾಡಬಹುದು.

  1. ಆಮದು ನಿಷೇಧದಿಂದ ವಾಣಿಜ್ಯ ಹಾನಿ : ಅಮೆರಿಕವು ಅಡಿಕೆ ಹಾಳೆ  ಡಿನ್ನರ್‌ವೇರ್‌ಗಳ ಪ್ರಮುಖ ಮಾರುಕಟ್ಟೆಯಾಗಿದ್ದು, ಈ ಉತ್ಪನ್ನಗಳಿಗೆ ಈಗ ಪ್ರವೇಶ ನಿರಾಕರಿಸಲಾಗಿದೆ. ಇದರ ಪರಿಣಾಮವಾಗಿ ಇವುಗಳಿಗೆ ಸಂಬಂಧಿಸಿದ   ಉತ್ಪಾದಕರು ನಷ್ಟಕ್ಕೆ ಒಳಗಾಗುತ್ತಾರೆ.  ಪರಿಣಾಮವಾಗಿ ಅಡಿಕೆ ಹಾಳೆಗಳ  ಮಾರಾಟದಿಂದ ಹೆಚ್ಚುವರಿ ಆದಾಯ ಸಂಪಾದಿಸುತ್ತಿದ್ದ ಕೃಷಿಕರಿಗೆ ಇನ್ನು ಮುಂದೆ ಆ ಆದಾಯಕ್ಕೆ ಅಪಾಯ ಉಂಟಾಗಬಹುದು
  1. ಗ್ರಾಮೀಣ ಉದ್ಯಮಗಳ ಮೇಲೆ ಪರಿಣಾಮ: ಕೆಲವು ಗ್ರಾಮೀಣ ಸ್ವಯಂ ಸಹಾಯ ಗುಂಪುಗಳು ಮತ್ತು ಕೈಗಾರಿಕೆಗಳು ಈ ಹಾಳೆಗಳಿಂದ  ಡಿನ್ನರ್‌ವೇರ್‌ ತಯಾರಿಸುತ್ತಿದ್ದವು. ಈಗ ಈ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶ ಕಡಿಮೆಯಾಗುವುದರಿಂದ ಈ ಉದ್ಯಮಗಳು ಸ್ಥಗಿತಗೊಳ್ಳಬಹುದು.
  1. ಪರ್ಯಾಯ ಮಾರ್ಗಗಳ ಹುಡುಕಾಟ : ಈ ಹಿನ್ನೆಲೆಯಲ್ಲಿ, ಅಡಿಕೆ ಬೆಳೆಗಾರರು ಹಾಗೂ ಸಂಬಂಧಿತ ಉದ್ಯಮಗಳು ಹೊಸ ಮಾರುಕಟ್ಟೆಗಳು ಅಥವಾ ಆಮದು ಮಾಡಿಕೊಳ್ಳುವ ಇತರ ದೇಶಗಳನ್ನು ಹುಡುಕಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಅಡಿಕೆ ಹಾಳೆಗಳ ವಿಷಕಾರಕ  ಅಂಶಗಳನ್ನು ನಿಷ್ಕ್ರಿಯಗೊಳಿಸುವ ತಂತ್ರಜ್ಞಾನಗಳ ಬಗ್ಗೆ ಸಂಶೋಧನೆ ಮಾಡುವುದು. ಮತ್ತು ಪರ್ಯಾಯ ಮಾರುಕಟ್ಟೆ ಗಳಾದ  ಯುರೋಪ್ ಅಥವಾ ಏಷ್ಯನ್ ಮಾರುಕಟ್ಟೆಗಳಲ್ಲಿ ಈ ಉತ್ಪನ್ನಗಳ ಬೇಡಿಕೆಯನ್ನು ವಿಶ್ಲೇಷಿಸಿ ಹೊಸದಾಗಿ ರೂಪಿಸುವುದು.

ಈ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ ಆದಾಯದ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ. ಆದರೆ ಸಕಾಲದಲ್ಲಿ ಸೂಕ್ತ ತಂತ್ರಜ್ಞಾನ, ಹೊಸ ಮಾರುಕಟ್ಟೆ ಮತ್ತು ಸರ್ಕಾರದ ಸಹಾಯದಿಂದ ಈ ಅಪಾಯವನ್ನು ತಡೆಯಬಹುದು. ಈ ಪರಿಸ್ಥಿತಿಯಲ್ಲಿ, ಭಾರತೀಯ ಉತ್ಪಾದಕರು ಮತ್ತು ಕೃಷಿಕರು ತಮ್ಮ ಮಾರ್ಗವನ್ನೇ ಮರುಪರಿಶೀಲಿಸಿ, ದೇಶೀಯ ಮಾರುಕಟ್ಟೆಗೆ ಹೆಚ್ಚು ಒತ್ತುಕೊಡುವುದು,ಪಾರಂಪರಿಕ ಉತ್ಪನ್ನದ ಬಳಕೆಗೆ ಪ್ರೋತ್ಸಾಹ ನೀಡುವುದು,ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡಿಕೆ ಹಾಳೆಹೊರತುಪಡಿಸಿ ಬಿದಿರು, ಶೂಗರಕೇನ್ ಬ್ಯಾಗಾಸ್ ಮೊದಲಾದ ಪರ್ಯಾಯ ಉತ್ಪನ್ನಗಳತ್ತ ತಿರುಗುವುದು — ಎಂಬ ರೀತಿಯಲ್ಲಿ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಅಡಿಕೆ ಸಂಬಂಧಿತ ಉದ್ದಿಮೆದಾರರು ,ಬೆಳೆಗಾರರು ತಕ್ಷಣ ಎಚ್ಚೆತ್ತುಕೊಳ್ಳುವುದು ಜವಾಬ್ಧಾರಿಯುತ ನಡೆಯಾಗಬಹುದು.

ಬರಹ :
ಕುಮಾರ ಸುಬ್ರಹ್ಮಣ್ಯ ಮುಳಿಯಾಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group