Advertisement
ಕೃಷಿ-ಮಾರುಕಟ್ಟೆ

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

Share

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ 1971 ರಲ್ಲಿ ಸರಾಸರಿ ಕ್ವಿಂಟಾಲ್ ಒಂದರ ರೂಪಾಯಿ 664 ಇತ್ತು.ಇದು 1981 ರಲ್ಲಿ ರೂಪಾಯಿ 1384 ಆಗಿ 1989 ರಲ್ಲಿರೂಪಾಯಿ 2080 ಆಯಿತು.ಆಗ ಅಡಿಕೆ ಹೆಚ್ಚಾಗಿ ಬೀಡಾದ ತಯಾರಿಯಲ್ಲಿ ಬಳಕೆ ಆಗುತ್ತಿತ್ತು. ಇದೇ ಸಂದರ್ಭದಲ್ಲಿ ಗುಟ್ಕಾ ಮಾರುಕಟ್ಟೆ ವಿಸ್ತರಿಸಲಾರಂಬಿಸಿತು.ಪರಿಣಾಮವಾಗಿ ಕೆಂಪು ಅಡಿಕೆಗೆ ಬೇಡಿಕೆ ಹೆಚ್ಚಾಗಿ ಅಲ್ಲಿ ಉತ್ಪಾಡಿಸುತ್ತಿದ್ದ ಚಾಲಿ ಪ್ರಮಾಣ ಕಡಿಮೆ ಆಗಿ ಕರಾವಳಿ ಬಾಗದ ಚಾಲಿಗೆ ಬೇಡಿಕೆ ಹೆಚ್ಚಾಗಿ ಧಾರಣೆಯ ಹೆಚ್ಚಳಕ್ಕೆ ದಾರಿ ಆಗಿ 1990 ರಲ್ಲಿ ಅದು ಕ್ವಿಂಟಾಲ್ ಒಂದರ ರೂಪಾಯಿ 4024 ಆಗಿ ಮುಂದೆ ಅದು ತಾತ್ಕಾಲಿಕವಾಗಿ ಆಗೊಮ್ಮೆ ಈಗೊಮ್ಮೆ ಇಳಿಕೆ ಕಂಡರೂ ಸರಾಸರಿ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂದಿದೆ. ಇದೇ ಪ್ರವೃತ್ತಿ ಕೆಂಪು ಅಡಿಕೆಯಲ್ಲೂ ಕಂಡು ಬರುತ್ತಿದೆ.…..ಮುಂದೆ ಓದಿ….

Advertisement
Advertisement

2001 ರ ಬಳಿಕ ಈ ಸರಾಸರಿ ಧಾರಣೆ ಏರುತ್ತಾ ಹೋಯಿತು. ಇದೇ ಸಂದರ್ಭದಲ್ಲಿ ನಮ್ಮಲ್ಲಿ ಇದರ ವಿಸ್ತೀರ್ಣ ಮತ್ತು ಉತ್ಪಾದನೆಯೂ ಹೆಚ್ಚಾಗಿ ಹೋಯಿತು. ಉದಾಹರಣೆಗೆ 1970-71 ಅಲ್ಲಿ ವಿಸ್ತೀರ್ಣ ಸುಮಾರು 1,67,300 ಹೆಕ್ಟೇರ್ ಆಗಿದ್ದರೆ ಈಗ ಇದು ಸುಮಾರು ಎಂಟು ಲಕ್ಷ ಹೆಕ್ಟೇರ್ ದಾಟಿದೆ. ಉತ್ಪಾದನೆ ದೃಷ್ಟಿಯಿಂದ ನೋಡುವುದಾದರೆ ಇದೇ ಅವಧಿಯಲ್ಲಿ ಅದು 1,41,000 ಟನ್ ಇದ್ದುದು ಈಗ ಸುಮಾರು ಹದಿನಾರು ಲಕ್ಷ ಟನ್ ಆಗಿದೆ.

ಇನ್ನು ಕರ್ನಾಟಕದಲ್ಲಿ ಅಡಿಕೆ ವಿಸ್ತೀರ್ಣ ವೇಗವಾಗಿ ಹೆಚ್ಚುತ್ತಿದ್ದು ಇದೀಗ 28 ಜಿಲ್ಲೆಗಳಿಗೆ ವ್ಯಾಪಿಸಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಇದರ ವ್ಯಾಪ್ತಿ ಹೆಚ್ಚಾಗುತ್ತಿದೆ.ಕೇರಳದ 14 ಜಿಲ್ಲೆಗಳು ಮತ್ತು ತಮಿಳ್ನಾಡಿನ 27 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ವ್ಯಾಪಿಸಿದ್ದು, ಇದೇ ಪ್ರವೃತ್ತಿ ಕನಿಷ್ಟ ಎಂಟು ರಾಜ್ಯಗಳಲ್ಲಿ ಕಂಡು ಬರುತ್ತಿದೆ.

ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣ 1985 ಇಂದ ಅಡಿಕೆ ಮಾರುಕಟ್ಟೆ ಪ್ರವೇಶಿಸಿ ಬಳಿಕ ಅಗಾದವಾಗಿ ಬೆಳವಣಿಗೆ ತೋರಿಸುತ್ತಿರುವ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳೂ. ಇದರಿಂದಾಗಿಯೇ ಇವನ್ನು ಇಂದು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಎನ್ನುವುದು.  ಈ ಕೋಳಿಗಳಿಂದಾಗಿ ಅಡಿಕೆ ಕ್ಷೇತ್ರಕ್ಕೆ ಹಲವು ಲಾಭಗಳು ಆಗಿವೆ.ಇದರೊಂದಿಗೆ ನಷ್ಟಗಳು ಆಗುತ್ತಲಿದೆ.ಹಲವು ವರವಾಗಿದ್ದಾರೆ ಇನ್ನು ಕೆಲವು ಶಾಪವಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ವರಗಳು: ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳಿಂದ ಬೆಳೆಗಾರರಿಗಲ್ಲದೆ ಆರ್ಥಿಕತೆಗೆ ಕೂಡ ಹಲವು ಲಾಭಗಳಾಗಿವೆ.ಇವುಗಳೆಂದರೆ….…..ಮುಂದೆ ಓದಿ….

  1. ಬೆಳೆಗಾರರ ಜೀವನ ಮಟ್ಟದಲ್ಲಿ ಸುದಾರಣೆ.
  2. ಕೃಷಿಕಾರ್ಮಿಕರ ಜೀವನ ಮಟ್ಟದಲ್ಲಿ ಸುಧಾರಣೆ.
  3. ಮೊದಲು ಐಶಾರಾಮಿ ಎಂದು ಪರಿಗಣಿಸಲ್ಪಟ್ಟ ಉತ್ಪನ್ನಗಳೂ ಇಂದು ಅಗತ್ಯ ಉತ್ಪನ್ನ ಆಗಿ ಪರಿವರ್ತನೆ ಆದ್ದು.
  4. ಶಾಲಾ,ಕಾಲೇಜ್ ಸಂಖ್ಯೆಗಳ ಹೆಚ್ಚಳ
  5. ಹಣಕಾಸಿನ ಸಂಸ್ಥೆಗಳ ಸುಧಾರಣೆ.
  6. ಕುಟುಂಬದ ಮಕ್ಕಳ ಶಿಕ್ಷಣದಲ್ಲಿ ಸುಧಾರಣೆ ಾಗುವುದರೊಂದಿಗೆ ಅವಲಂಬಿತರು ಹೆಚ್ಚಿನ ಶಿಕ್ಷಣ ಪಡೆಯಲು ಅವಕಾಶ.
  7. ಸರಕಾರಕ್ಕೆ ಹೆಚ್ಚಿನ ಆದಾಯ.
  8. ನಾನಾ ರೀತಿಯ ರಸಗೊಬ್ಬರ, ಕೀಟನಾಶಕ, ಸಾವಯವ ಗೊಬ್ಬರ ಇತ್ಯಾದಿಗಳಿಗೆ ಹೆಚ್ಚಿದ ಬೇಡಿಕೆ.
  9. ಯಂತ್ರ ಮತ್ತು ತಂತ್ರಗಳಿಗೆ ಹೆಚ್ಚಿದ ಬೇಡಿಕೆ.
  10. ಕೃಷಿ ತಂತ್ರಜ್ನಾನದ ಬೆಳವಣಿಗೆ.
  11. ನೀರಾವರಿ ವ್ಯವಸ್ಥೆಗಳ ಸುಧಾರಣೆ.
  12. ಅಡಿಕೆ ಬೆಳೆಗಾರರ ವ್ಯವಹಾರಗಳು ನೂರು,ಇನ್ನೂರು,ಸಾವಿರಗಳಿಂದ ಲಕ್ಷಗಳಿಗೆ ಪರಿವರ್ತನೆಗೆ ಅವಕಾಶ.
  13. ಭೂಮಿಯ ದರದ ಹೆಚ್ಚಳ.
  14. ಪಟ್ಟಣಗಳ ಬೆಳವಣಿಗೆ. ಇಷ್ಟು ಮಾತ್ರವಲ್ಲದೆ ಇನ್ನೂ ಹಲವು ಪ್ರಯೋಜನಗಳು ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಯಿಂದಾಗಿ ಆರ್ಥಿಕತೆಗೆ ಆಗಿದೆ.

ಶಾಪಗಳೇನು? :

  1. ಆಂತರಿಕ ಹಾಗೂ ಬಾಹ್ಯ ಜಗತ್ತಿನಲ್ಲಿ ಅಡಿಕೆಯ ಮಾನ ಹರಾಜು.
  2. ಅಧ್ಯಯನಗಳ ಆಧಾರದಲ್ಲಿ ಗುಟ್ಕಾ ಕ್ಯಾನ್ಸರಿಗೆ ಕಾರಣ ಎಂಬ ಹಣೆಪಟ್ಟಿ.
  3. ಅಡಿಕೆ ಕ್ಯಾನ್ಸರಿಗೆ ಕಾರಣ ಎಂಬ ಅಪವಾದ.
  4. ಅಡಿಕೆಯ ದರ ಹೆಚ್ಚಳವಾಗಿ ಕಾರ್ಮಿಕರ ವೇತನದ ಹೆಚ್ಚಳ.
  5. ಕಾರ್ಮಿಕರ ಜೀವನ ಮಟ್ಟ ಸುದಾರಿಸಿ ಕಾರ್ಮಿಕರ ಅಭಾವ.
  6. ಅಡಿಕೆಯ ನಿಷೇಧದ ತೂಗು ಕತ್ತಿ
  7. ಆಮದಿಗೆ ಅವಕಾಶ
  8. ಪರಿಸರ ಮಾಲಿನ್ಯ
  9. ಅಡಿಕೆ ಬೆಳೆಯ ವಿಸ್ತರಣೆ ಹೆಚ್ಚಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಏರು ಪೇರು.

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು ಆಗಿ ಬದಲಾಗಿರುವುದು.ಪರಿಣಾಮವಾಗಿ ವಿಷಯುಕ್ತ ಆಹಾರದ ಸೇವನೆಗೆ ದಾರಿ ಆಗಿರುವುದು. ಒಟ್ಟಾರೆಯಾಗಿ ಚಿನ್ನದ ಮೊಟ್ಟೆ ಇಡುವ ಕೋಳಿ ನಾನಾ ರೀತಿಯ ಲಾಭಗಳನ್ನು ಈ ಕ್ಷೇತ್ರಕ್ಕೆ ತಂದು ಕೊಟ್ಟಿದ್ದರೂ ಇವು ಮುಂದಿನ ದಿನಗಳಲ್ಲಿ ನಷ್ಟಕ್ಕೆ ಎಡೆ ಮಾಡಿಕೊಡಬಹುದು ಎಂಬ ಬಲವಾದ ಶಂಕೆ ಮೂಡುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

44 minutes ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

59 minutes ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

11 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

11 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

11 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

11 hours ago