ಅಡಿಕೆ ಎಲೆಚುಕ್ಕಿ ರೋಗದ ತೀವ್ರತೆ | ಸುಳ್ಯದಲ್ಲಿ ಅಡಿಕೆ ಬೆಳೆಗಾರರ ಸಭೆ | ಬಡ್ಡಿಮನ್ನಾ ಮತ್ತು ಸಾಲದ ಕಂತುಗಳ ವಿಸ್ತರಣೆಗೆ ಒತ್ತಾಯ

December 27, 2025
7:06 AM

ಸುಳ್ಯ ತಾಲೂಕಿನ ಹಲವು ಭಾಗಗಳಲ್ಲಿ ಅಡಿಕೆ ಬೆಳೆಗೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ರೋಗ ತೀವ್ರವಾಗಿ ಬಾಧಿಸಿದೆ. ಇದರ ಜೊತೆಗೆ ಈ ಬಾರಿ ಕೊಳೆರೋಗವೂ ವಿಪರೀತವಾಗಿ ಬಾಧಿಸಿದ್ದರಿಂದ ಅಡಿಕೆ ಬೆಳೆಗಾರರು ಇಳುವರಿ ಇಲ್ಲದೆ ಸಂಕಷ್ಟ ಪಡುವಂತಾಗಿದೆ. ಹೀಗಾಗಿ ಸರ್ಕಾರವು ತಕ್ಷಣವೇ ಗಮನಹರಿಸಿ  ಬೆಳೆಸಾಲ ಮನ್ನಾ ಹಾಗೂ ದೀರ್ಘಾವಧಿ ಸಾಲದ ಬಡ್ಡಿಮನ್ನಾ ಹಾಗೂ ಅವಧಿ ವಿಸ್ತರಣೆ ಮಾಡಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸಿದ್ದಾರೆ.

Advertisement
Advertisement

ಸುಳ್ಯದ ಎಪಿಎಂಸಿ ಸಭಾಗಂಣದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಅಡಿಕೆ ಬೆಳೆಗಾರರು ಈ ಒತ್ತಾಯವನ್ನು ಮಾಡಿದ್ದಾರೆ.  ಸುಳ್ಯ ತಾಲೂಕಿನ ಅಡಿಕೆ ಬೆಳೆಗಾರರು ಕಳೆದ ಹಲವು ಸಮಯಗಳಿಂದ ಹಳದಿ ಎಲೆರೋಗದಿಂದ ಬಳಲುತ್ತಿದ್ದಾರೆ. ಇದೀಗ ಎಲೆಚುಕ್ಕಿ ರೋಗವೂ ವ್ಯಾಪಕವಾಗಿದೆ. ಹೀಗಾಗಿ ಈಗ ಆರ್ಥಿಕ ಸಂಕಷ್ಟ ಎದುರಿಸುವ ಹಂತ ಬರುತ್ತಿದೆ. ಇದಕ್ಕಾಗಿ ಈಗ ಅನಿವಾರ್ಯವಾಗಿ ಸರ್ಕಾರವು ಸಾಲಮನ್ನಾ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ  ಸುಳ್ಯ ತಾಲೂಕಿನಲ್ಲಿ ಎಲೆಚುಕ್ಕಿ ರೋಗದ ಸರ್ವೇ ನಡೆಸುವುದು. ಇದಕ್ಕಾಗಿ ಸಹಕಾರಿ ಯೂನಿಯನ್ ನವರ ಸಹಕಾರ ಪಡೆದು ಸಹಕಾರ ಸಂಘಗಳ ಮುಖಾಂತರ ಕಾರ್ಯಕ್ರಮ ರೂಪಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ  ಬೆಳೆಸಾಲ ಮನ್ನಾಕ್ಕೆ ಆಗ್ರಹಿಸುವುದು ಹಾಗೂ ದೀರ್ಘಾವಧಿ ಸಾಲದ ಬಡ್ಡಿಮನ್ನಾ ಮತ್ತು ಕಂತುಗಳನ್ನು ವಿಸ್ತರಿಸಲು ಬೇಡಿಕೆ ಸಲ್ಲಿಸಲು ನಿರ್ಧರಿಸಲಾಯಿತು.

ಇದೇ ವೇಳೆ ಅಡಿಕೆಯ ಜೊತೆಗೆ ಉಪಬೆಳೆ, ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರಿಗೆ ಆಗುತ್ತಿರುವ ಸಮಸ್ಯೆ, ಕೋವಿ ಲೈಸನ್ಸ್‌ ರಿನೀವಲ್‌, ಪರ್ಯಾಯ ಕೃಷಿಯ ಬಗ್ಗೆ ಚಿಂತನೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆಗಳು ನಡೆದವು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ. 

ಈ ಸಂದರ್ಭ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ  ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಸಂಚಾಲಕ ಎಂ ಡಿ ವಿಜಯಕುಮಾರ್‌, ವಿಧಾನಪರಿಷತ್‌ ಮಾಜಿ ಸದಸ್ಯ  ಅಣ್ಣಾ ವಿನಯಚಂದ್ರ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಪ್ರಮುಖರುಗಳಾದ ನಿತ್ಯಾನಂದ ಮುಂಡೋಡಿ, ಎ ವಿ ತೀರ್ಥರಾಮ, ಪಿ ಸಿ ಜಯರಾಮ, ಡಿ ಎಸ್ ಗಿರೀಶ್, ಗಂಗಾಧರ ಪಿ ಎಸ್, ವೀರಪ್ಪ ಗೌಡ ಕಣಕಲ್, ಎನ್ ಜಿ ಲೋಕನಾಥ್ ರೈ, ಬಾಲಗೋಪಾಲ್ ಮೊಂಟಡ್ಕ ,ಸದಾನಂದ ಜಾಕೆ, ಪ್ರದೀಪ್ ಕುಮಾರ್ ಕೆ ಎಲ್, ನಾಗೇಶ್ ದೇವರಗುಂಡ, ಬಿಟ್ಟಿ ಬಿ ನೆಡುನೀಲಂ, ಕರುಣಾಕರ ಪಾರೆಪ್ಪಾಡಿ, ಸಚಿನ್ ಬಳ್ಳಡ್ಕ, ಉದಯಕುಮಾರ್ ಡಿ ಆರ್, ಸಾಯಿಶೇಖರ್ ಕರಿಕಳ, ಆದಿತ್ಯ ಕೆ ಮೊದಲಾದವರು  ಸಲಹೆ ಸೂಚನೆ ನೀಡಿದರು. …… ಮುಂದೆ ಓದಿ……

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror