ಜಾಗತಿಕ ಅಡಿಕೆ ಮಾರುಕಟ್ಟೆ ಮುಂದಿನ ಹತ್ತು ವರ್ಷಗಳಲ್ಲಿ ಸ್ಥಿರ ಬೆಳವಣಿಗೆಯನ್ನು ಕಾಣಲಿದೆ ಎಂಬ ಮಹತ್ವದ ವರದಿ ಹೊರಬಿದ್ದಿದೆ. Future Market Insights ವರದಿ ಪ್ರಕಾರ, 2026ರಲ್ಲಿ ಸುಮಾರು 1.20 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಮಾರುಕಟ್ಟೆ, 2036ರ ವೇಳೆಗೆ 1.95 ಬಿಲಿಯನ್ ಡಾಲರ್ ಮೌಲ್ಯ ತಲುಪುವ ಸಾಧ್ಯತೆ ಇದೆ. 2026–2036 ಅವಧಿಯಲ್ಲಿ ಸರಾಸರಿ 5% ವಾರ್ಷಿಕ ವೃದ್ಧಿದರದ (CAGR) ಬೆಳವಣಿಗೆ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವಾದ್ಯಂತ ಹಾಲಿ ಇರುವ ಬೆಳೆ, ವ್ಯವಹಾರ ಮತ್ತು ಸಂಸ್ಕರಣಾ ಚಟುವಟಿಕೆಗಳಲ್ಲಿ ಕಂಡುಬರುತ್ತಿರುವ ಈಗಿನ ಮಾರುಕಟ್ಟೆ 2036 ರವರೆಗೆ ಸುಮಾರು USD 1.95 ಬಿಲಿಯನ್ ಮೌಲ್ಯಕ್ಕೆ ಬೆಳೆಯುವುದಾಗಿ ಅಂದಾಜಿಸಲಾಗಿದೆ. ವರ್ಷಕ್ಕೆ ಸುಮಾರು 5% CAGR ದಾಖಲಾಗಿದೆ.
ಮಾರುಕಟ್ಟೆ ವಿಸ್ತರಣೆಗೆ ಪ್ರಮುಖ ಕಾರಣಗಳು ಅಡಿಕೆಯ ಪ್ರಮಾಣಿತ ಸಂಸ್ಕರಣಾ ಮಾರ್ಗಗಳ, ಪ್ಯಾಕೇಜಿಂಗ್ ಮತ್ತು ಆಲ್ಕಲೊಯ್ಡ್ ನಿಯಂತ್ರಿತ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಹೆಚ್ಚು ಬಳಕೆ ಹಾಗೂ ರಸಶಾಸ್ತ್ರ ಸಂಶೋಧನೆಗಳಿಗೆ ಅಡಿಕೆ ವೇದಿಕೆಯಾಗುತ್ತಿರುವುದು. ಫಾರ್ಮಾ, ಕೈಗಾರಿಕಾ ಹಾಗೂ ಇತರ ಬಳಕೆಯ ವ್ಯಾಪ್ತಿ ವಿಸ್ತಾರವಾಗುತ್ತಿರುವುದು ಅಡಿಕೆ ಮಾರುಕಟ್ಟೆ ವಿಸ್ತರಣೆಗೆ ಪ್ರಮುಖ ಕಾರಣ. ಮುಂದಿನ ದಿನಗಳಲ್ಲಿ ಕೆಂಪಡಿಕೆಯ ಮಾರುಕಟ್ಟೆ ಸ್ಥಿರ ಬೆಳವಣಿಗೆ ಕಂಡರೆ, ಬಿಳಿ ಅಥವಾ ಚಾಲಿ ಅಡಿಕೆ ಸಂಸ್ಕರಿತ ಉತ್ಪನ್ನವಾಗಿ ಮಾರುಕಟ್ಟೆ ವೇಗ ಪಡೆಯಲಿದೆ.
ಇದೇ ವೇಳೆ ಅಡಿಕೆ ಮಾರುಕಟ್ಟೆಗೆ ಸವಾಲುಗಳೂ ಕೂಡಾ ಹೇಳಲಾಗಿದೆ. ಆರೋಗ್ಯ-ಸಂಬಂಧಿ ಬಳಕೆ ವಿಷಯವಾಗಿ ಹೆಚ್ಚುತ್ತಿರುವ ನಿಯಂತ್ರಣಗಳು ಮತ್ತು ಸಾರ್ವಜನಿಕ ಆರೋಗ್ಯ ಗಮನವು ಕೆಲವು ಮಾರುಕಟ್ಟೆ ವಿಭಾಗಗಳಲ್ಲಿ ಬೇಡಿಕೆಯನ್ನು ಮಿತಿಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಈ ಕಡೆಗೆ ಹೆಚ್ಚಿನ ಗಮನ ಅಗತ್ಯ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ಅಡಿಕೆ ಮಾರುಕಟ್ಟೆಯು ಈಗ ಒಂದು ಪರಿವರ್ತನಾ ಹಂತದಲ್ಲಿದೆ. ಸಾಂಪ್ರದಾಯಿಕ ಬಳಕೆಯಿಂದ ಹೊರಬಂದು, ಮೌಲ್ಯವರ್ಧಿತ ಮತ್ತು ಸಂಸ್ಕರಿತ ಉತ್ಪನ್ನಗಳತ್ತ ಮಾರುಕಟ್ಟೆ ಸಾಗುತ್ತಿದೆ. ವಿಶೇಷವಾಗಿ ಭಾರತ, ಇಂಡೋನೇಷ್ಯಾ, ಮ್ಯಾನ್ಮಾರ್ ದೇಶಗಳು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತ ರಫ್ತು ಕ್ಷೇತ್ರದಲ್ಲಿಯೂ ತನ್ನ ಹಿಡಿತವನ್ನು ಬಲಪಡಿಸಿದೆ.
ಭವಿಷ್ಯದಲ್ಲಿ ಬ್ರ್ಯಾಂಡ್ ಮಾಡಿದ, ಪ್ರಮಾಣಿತ ಗುಣಮಟ್ಟದ ಪ್ಯಾಕೇಜ್ಡ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ, ಆರೋಗ್ಯ ಸಂಬಂಧಿತ ನಿಯಂತ್ರಣಗಳು ಮಾರುಕಟ್ಟೆಗೆ ಸವಾಲಾಗಬಹುದು. ಆದರೂ, 5% CAGR ಸ್ಥಿರ ಬೆಳವಣಿಗೆ ದರವು ಅಡಿಕೆ ಉದ್ಯಮಕ್ಕೆ ದೀರ್ಘಾವಧಿಯ ಸ್ಥಿರತೆ ನೀಡುವ ಸೂಚನೆ ನೀಡುತ್ತಿದೆ.
The global areca nut market is forecasted to grow from approximately USD 1.20 billion in 2026 to USD 1.95 billion by 2036, registering a 5% CAGR. Industry dynamics are shifting toward certified processed formats and new applications in food, pharmaceutical, and industrial sectors, with India playing a dominant production and export role.

