Advertisement
ಪ್ರಮುಖ

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

Share

ಅಡಿಕೆಗೆ  ಉತ್ತಮ ಧಾರಣೆ ಇದ್ದರೂ ಕಳೆದ ಕೆಲವು ಸಮಯಗಳಿಂದ ಅಡಿಕೆ ಬೆಳೆಗಾರರಿಗೆ ಆತಂಕ ಕಾಡುತ್ತಿದೆ. ಅಡಿಕೆ ಹಾನಿಕಾರಕ, ಅಡಿಕೆ ಆಮದು, ಗುಟ್ಕಾ ನಿಷೇಧ ಇತ್ಯಾದಿಗಳು ಮಾರುಕಟ್ಟೆಯ ಭಾಗವಾದರೆ, ಹವಾಮಾನ, ಮಳೆ ಕೊರತೆ, ಕೊಳೆರೋಗ, ಎಲೆಚುಕ್ಕಿ ರೋಗ.. ಹೀಗೇ ರೋಗಗಳ ಕಾಟವೂ ಇನ್ನೊಂದು ಕಡೆಯಿಂದ ಕಾಡುತ್ತಿದೆ. ಈ ಆತಂಕಗಳು ಕರ್ನಾಟಕದ, ಭಾರತದ ಅಡಿಕೆ ಬೆಳೆಗಾರರಿಗೆ ಮಾತ್ರವಲ್ಲ. ವಿದೇಶದಲ್ಲೂ ಅಡಿಕೆ ಬೆಳೆಗಾರರಿಗೆ ಆತಂಕ ಎದರುರಾಗುತ್ತಲೇ ಇದೆ. ವಿಯೆಟ್ನಾಂನಲ್ಲಿ ಕೂಡಾ ಅಡಿಕೆ ಕೊಯ್ಲಿನ ಈ ಸಂದರ್ಭ ಬೆಲೆ ಕುಸಿತದ ಆತಂಕ ಎದುರಾಗಿದೆ.

ವಿಯೆಟ್ನಾಂನ ಕ್ವಾಂಗ್ ನ್ಗೈಯ  ಪ್ರಾಂತ್ಯದಲ್ಲಿ ಪ್ರಸಕ್ತ ಅಡಿಕೆ ಕೊಯ್ಲು ಆರಂಭವಾಗಿದ್ದು, ಹಸಿ ಅಡಿಕೆಯ ಬೆಲೆ ಸುಮಾರು 20,000 ವಿಯೆಟ್ನಾಂ ಡಾಂಗ್ (VND) ಪ್ರತಿ ಕೆ.ಜಿ.ಗೆ ತಲುಪಿದೆ. ಇದರಿಂದ ರೈತರಿಗೆ ಉತ್ತಮ ಆದಾಯದ ನಿರೀಕ್ಷೆ ಮೂಡಿದೆ. ಆದರೆ ಮಾರುಕಟ್ಟೆಯ ಸ್ಥಿರತೆ, ಹಣ್ಣಿನ ಗುಣಮಟ್ಟದ ಆಧಾರದ ಮೇಲೆ ಖರೀದಿ ಮತ್ತು ಚೀನಾದ ಮಾರುಕಟ್ಟೆಯ ಮೇಲಿನ ಹೆಚ್ಚಿನ ಅವಲಂಬನೆ ರೈತರ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷವೂ ಆರಂಭದಲ್ಲಿ ಅಡಿಕೆಯ ಬೆಲೆ ಸುಮಾರು 20,000 ವಿಯೆಟ್ನಾಂ ಡಾಂಗ್ (VND) ಪ್ರತಿ ಕೆ.ಜಿ.ಗೆ ಇತ್ತು. ಬಳಿಕ ಅದು 40,000 VND ವರೆಗೆ ಏರಿಕೆಯಾಗಿತ್ತು. ಆದರೆ ಆ ಬೆಲೆ ಕೇವಲ ಒಂದು ತಿಂಗಳಷ್ಟು ಕಾಲ ಉಳಿದು, ನಂತರ 10,000–14,000 VND ಗೆ ಕುಸಿದಿತ್ತು ಎಂದು ವರದಿ ತಿಳಿಸಿದೆ. ಹೀಗಾಗಿ ಈಗ  20,000 VND/kg ಬೆಲೆ ಸಿಕ್ಕರೂ ರೈತರು ಇದು ಎಷ್ಟು ದಿನ ಉಳಿಯುತ್ತದೆ? ಎಂಬ ಪ್ರಶ್ನೆಯಲ್ಲಿದ್ದಾರೆ.

ಎಲ್ಲಾ ಅಡಿಕೆಗೂ ಒಂದೇ ಬೆಲೆ ಇಲ್ಲ! :  ವಿಯೆಟ್ನಾಂನಲ್ಲೂ ಅಡಿಕೆ ಗುಣಮಟ್ಟದ ಆಧಾರದ ಮೇಲೆ ಖರೀದಿ ನಡೆಯುತ್ತದೆ.  ವರದಿ ಪ್ರಕಾರ, ಕೆಲವು ವ್ಯಾಪಾರಿಗಳು ಉದ್ದನೆಯ ಅಡಿಕೆಯನ್ನು ಮಾತ್ರ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. ದುಂಡನೆಯ ಅಡಿಕೆಯನ್ನು ಕೆಲವು ಸಂದರ್ಭಗಳಲ್ಲಿ ನಿರಾಕರಿಸಲಾಗುತ್ತಿದೆ ಅಥವಾ ಬಹಳ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ. ಅಂದರೆ ಮಾರುಕಟ್ಟೆ ಬೆಲೆ ಏರಿದೆ ಎಂಬ ಸುದ್ದಿ ಮಾತ್ರ ಸಾಕಾಗುವುದಿಲ್ಲ; ರೈತನ ತೋಟದಲ್ಲಿ ಉತ್ಪಾದನೆಯಾಗುವ ಅಡಿಕೆಯ ಯಾವ ಗುಣಮಟ್ಟಕ್ಕೆ ಎಷ್ಟು ಬೆಲೆ ಸಿಗುತ್ತದೆ ಎಂಬುದೂ ಮುಖ್ಯ.

ಹವಾಮಾನವೂ ಮತ್ತೊಂದು ಆತಂಕ :  ಬೆಲೆ ಮಾತ್ರವಲ್ಲ, ಈ ಬಾರಿ ಇಳುವರಿ ಕುರಿತೂ ರೈತರಿಗೆ ಚಿಂತೆ ಇದೆ. ಕ್ವಾಂಗ್ ನ್ಗೈಯಲ್ಲಿ ದೀರ್ಘಕಾಲದ ಬಿಸಿಗಾಳಿ ಅಡಿಕೆ ಮರಗಳ ಮೇಲೆ ಪರಿಣಾಮ ಬೀರಿದೆ. ಆರಂಭದ ಕೊಯ್ಲಿನಲ್ಲಿ ಉತ್ತಮ ಅಡಿಕೆ ಕಂಡುಬಂದಿದ್ದರೂ, ನಂತರದ ಗೊನೆಗಳಲ್ಲಿ ಹೂ ಒಣಗುವುದು ಮತ್ತು ಹಣ್ಣುಗಳು ಸಣ್ಣದಾಗುವುದು ಕಂಡುಬಂದಿದೆ ಎಂದು ರೈತರು ಹೇಳಿದ್ದಾರೆ. ಇದರಿಂದ ಒಟ್ಟಾರೆ ಇಳುವರಿ ಹಿಂದಿನ ವರ್ಷಕ್ಕಿಂತ ಕಡಿಮೆಯಾಗುವ ಆತಂಕವಿದೆ.

ಚೀನಾ ಮಾರುಕಟ್ಟೆಯ ಮೇಲಿನ ಅವಲಂಬನೆ ದೊಡ್ಡ ಅಪಾಯ :  ಕ್ವಾಂಗ್ ನ್ಗೈಯಲ್ಲಿ ಉತ್ಪಾದನೆಯಾಗುವ ತಾಜಾ ಅಡಿಕೆಯ ಬಹುಪಾಲು ವ್ಯಾಪಾರಿಗಳ ಮೂಲಕ ಚೀನಾಕ್ಕೆ ರಫ್ತಾಗುತ್ತದೆ. ಹೀಗಾಗಿ ಚೀನಾದ ಬೇಡಿಕೆ, ಆಮದು ನೀತಿ ಮತ್ತು ವ್ಯಾಪಾರ ಪರಿಸ್ಥಿತಿಗಳಲ್ಲಾಗುವ ಬದಲಾವಣೆಗಳು ಸ್ಥಳೀಯ ರೈತರ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಯೆಟ್ನಾಂನ ಇತರ ವರದಿಗಳಲ್ಲಿಯೂ ಇದೇ ಮಾರುಕಟ್ಟೆ ಅವಲಂಬನೆಯ ಪರಿಣಾಮ ಗೋಚರಿಸಿದೆ. 2024ರಲ್ಲಿ ಚೀನಾದ ಬೇಡಿಕೆಯಿಂದ ಕೆಲವು ಪ್ರದೇಶಗಳಲ್ಲಿ ತಾಜಾ ಅಡಿಕೆ ಬೆಲೆ 80,000–90,000 VND/kgವರೆಗೆ ಏರಿದ್ದರೆ, ನಂತರ ಬೇಡಿಕೆ ಕುಸಿದಾಗ ಬೆಲೆ ತೀವ್ರವಾಗಿ ಇಳಿದಿತ್ತು.

ವಿಯೆಟ್ನಾಂನ ಅನುಭವ ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಹೇಳುವುದೇನು? :  ಈ ವರದಿ ವಿಯೆಟ್ನಾಂನ ಅಡಿಕೆ ಮಾರುಕಟ್ಟೆಗೆ ಸಂಬಂಧಿಸಿದ್ದಾದರೂ, ಕರ್ನಾಟಕದ ಅಡಿಕೆ ಬೆಳೆಗಾರರೂ ಗಮನಿಸಬೇಕಾದ ಕೆಲವು ಅಂಶಗಳು ಇವೆ.  ಕೆಲವು ಪ್ರಮುಖ ಪಾಠಗಳನ್ನು ನೀಡುತ್ತದೆ.

ಬೆಲೆ ಏರಿಕೆ ಎಂದರೆ ಮಾರುಕಟ್ಟೆ ಸ್ಥಿರವಾಗಿದೆ ಎಂದಲ್ಲ ಎಂಬುದು ಇಲ್ಲಿಯೂ ಗಮನಿಸಬೇಕಾದ ಅಂಶ.  ಅಡಿಕೆಯ ಬೆಲೆ ಕೆಲಕಾಲ ವೇಗವಾಗಿ ಏರಬಹುದು. ಆದರೆ ರಫ್ತು ಬೇಡಿಕೆ, ಆಮದು ಮಾರುಕಟ್ಟೆ, ಸಂಗ್ರಹ, ಗುಣಮಟ್ಟ ಮತ್ತು ವ್ಯಾಪಾರಿಗಳ ಖರೀದಿ ನೀತಿ ಬದಲಾಗಿದರೆ ಬೆಲೆ ತೀವ್ರವಾಗಿ ಇಳಿಯಬಹುದು.

ಮುಂದಿನ ದಿನಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ಬರಲಿದೆ. ಒಂದೇ ಬೆಳೆಗೂ ಗುಣಮಟ್ಟ, ಗಾತ್ರ, ಸಂಸ್ಕರಣೆ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ಬೆಲೆ ವ್ಯತ್ಯಾಸವಾಗಬಹುದು. ಆದ್ದರಿಂದ ಗುಣಮಟ್ಟ ನಿರ್ವಹಣೆ ಮತ್ತು ವೈಜ್ಞಾನಿಕ ಸಂಸ್ಕರಣೆ ರೈತರ ಆದಾಯವನ್ನು ಸ್ಥಿರಗೊಳಿಸುವಲ್ಲಿ ಪ್ರಮುಖವಾಗಬಹುದು.

ಒಂದೇ ಮಾರುಕಟ್ಟೆಯ ಮೇಲಿನ ಅವಲಂಬನೆ ಅಪಾಯಕಾರಿ. ವಿಯೆಟ್ನಾಂನ ಕ್ವಾಂಗ್ ನ್ಗೈಯಲ್ಲಿ ಬಹುಪಾಲು ಅಡಿಕೆ ಚೀನಾಕ್ಕೆ ಹೋಗುತ್ತಿರುವುದರಿಂದ ಅಲ್ಲಿನ ಬೇಡಿಕೆಯ ಬದಲಾವಣೆ ಸ್ಥಳೀಯ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಇದೇ ರೀತಿಯ ಮಾರುಕಟ್ಟೆ ಅವಲಂಬನೆ ಯಾವುದೇ ಕೃಷಿ ಉತ್ಪನ್ನಕ್ಕೂ ಅಪಾಯ ಉಂಟುಮಾಡಬಹುದು. ಹೀಗಾಗಿ ಅಡಿಕೆಯೆ ಪರ್ಯಾಯ ಮಾರುಕಟ್ಟೆ ಕಂಡುಕೊಳ್ಳುವುದು ತೀರಾ ಅಗತ್ಯ ಇದೆ.

ಅಡಿಕೆ ಬೆಲೆ ಏರಿಕೆಯ ಜೊತೆಗೆ ಸ್ಥಿರ ಖರೀದಿ ವ್ಯವಸ್ಥೆ, ಗುಣಮಟ್ಟ ಆಧಾರಿತ ನ್ಯಾಯಯುತ ಬೆಲೆ, ಸಂಸ್ಕರಣೆ, ಮಾರುಕಟ್ಟೆ ವೈವಿಧ್ಯತೆ ಮತ್ತು ರೈತರ ಸಂಘಟಿತ ಮಾರಾಟ ವ್ಯವಸ್ಥೆ ಬಲವಾಗಬೇಕು.

ಏಕ ಬೆಳೆಯ ಅಪಾಯವೂ ಇಲ್ಲಿ ಗಮನಿಸಬೇಕು.  ಕ್ವಾಂಗ್ ನ್ಗೈಯ ಕೃಷಿ ಮತ್ತು ಪರಿಸರ ಇಲಾಖೆ ರೈತರಿಗೆ ಅಡಿಕೆಯನ್ನು ಸಂಪೂರ್ಣವಾಗಿ ಏಕಬೆಳೆಯಾಗಿ ಬೆಳೆಸುವ ಬದಲು ಇತರ ಬೆಳೆಗಳ ನಡುವೆ ಅಡಿಕೆಯನ್ನು ಬೆಳೆಸುವುದು ಅಥವಾ ಬೇಲಿ, ಖಾಲಿ ಜಾಗಗಳನ್ನು ಬಳಸುವುದು ಸೂಕ್ತ ಎಂದು ಸಲಹೆ ನೀಡಿದೆ.

ಅಡಿಕೆಯ ಜೊತೆಗೆ ಇನ್ನೊಂದು ಬೆಳೆಯ ಕಡೆಗೆ ಗಮನ ಅಗತ್ಯ :  ಅಡಿಕೆಯ ಸದ್ಯದ ಮಾರುಕಟ್ಟೆ ನೋಡಿ ಅಡಿಕೆ ಬೆಳೆ ವಿಸ್ತರಣೆ ಅಥವಾ ಒಂದೇ ಬೆಳೆ ಬೆಳೆಯುವುದು ಅಪಾಯಕಾರಿಯಾಗಿದೆ. ಅಡಿಕೆ ಮಾರುಕಟ್ಟೆಯೂ ಏಕಾಏಕಿ ನಿರೀಕ್ಷೆ ಮೀರಿ ಏರಿಕೆಯಾಗುವುದು ಕೂಡಾ ಅಪಾಯಕಾರಿಯಾಗಿದೆ.  ಹೀಗಾಗಿ ಉಪಬೆಳೆಯೂ ಅಡಿಕೆಯ ನಡುವೆ ಅಗತ್ಯವಾಗಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Despite the good prices for arecanut, growers have been facing growing concerns over the past few months. Issues such as health concerns surrounding arecanut, imports, and the possible ban on gutka are influencing the market, while climate-related challenges, inadequate rainfall, fruit rot, leaf spot disease, and other crop diseases are creating additional pressure on farmers.

These concerns are not limited to arecanut growers in Karnataka or India. Growers in other parts of the world are facing similar uncertainties. In Vietnam too, arecanut farmers are currently confronting fears of a price decline during the ongoing harvesting season.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

29 minutes ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

11 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

16 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

21 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

2 days ago