ಭಾರತ-ನೇಪಾಳ ಗಡಿಗೆ ಹೊಂದಿಕೊಂಡಿರುವ ಮೇಜರ್‌ಗಂಜ್‌ನಲ್ಲಿ ಸೋಮವಾರ ಅಡಿಕೆ ಕಳ್ಳಸಾಗಾಣಿಕೆ ಪತ್ತೆಯಾಗಿದೆ. ನೇಪಾಳದಿಂದ ತರಲಾದ ಸುಮಾರು 1 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂವರನ್ನು ಬಂಧಿಸಲಾಗಿದೆ. ಒಟ್ಟು 196 ಚೀಲಗಳು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಚೀಲವು ಸುಮಾರು 60 ಕೆಜಿ ತೂಕವಿತ್ತು ವಶಪಡಿಸಿಕೊಂಡ ಅಡಿಕೆ ಸುಮಾರು ₹1 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ನೇಪಾಳದಿಂದ ಅಡಿಕೆ ಆಮದು ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಭಾರತ-ನೇಪಾಳ ಮುಕ್ತವಾಗಿ ಸರಕು ಸಾಗಾಟ ಅನುಮತಿ ಇರುವುದರಿಂದ ದಾಖಲೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿತ್ತು. ಬೇರೆ ದೇಶಗಳಿಂದ ನೇಪಾಳದ ಮೂಲಕ ಅಡಿಕೆ ಸಾಗಾಣಿಕೆಯೇ ಇದರ ಉದ್ದೇಶವಾಗಿತ್ತು. ನೇಪಾಳಕ್ಕೆ ಯಾವುದೇ ಲಾಭವಿಲ್ಲದ ಕಾರಣದಿಂದ ಈ ರೀತಿಯ ಆಮದು-ರಫ್ತು ವಿರುದ್ಧ ಕ್ರಮ ಕೈಗೊಂಡಿತ್ತು. ಇದೀಗ ಮತ್ತೆ ಕಳ್ಳಸಾಗಾಣಿಕೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

