#ಕೃಷಿಬದುಕು | ಅಡಿಕೆಗೊಂದು ಪಾಸಿಟಿವ್‌ ಚಿಂತನೆ | ಅಡಿಕೆ ಬೆಳೆಗಾರರ ಸಮಸ್ಯೆಯ ಆಳ ಆಡಳಿತ ಯಂತ್ರಕ್ಕೆ ಮನವರಿಕೆಯಾಗಲಿ |

October 5, 2021
8:09 PM

ಹೌದು.., ಅಡಿಕೆಯ ರಥವೇರಿದ ಮೇಲೆ ಇನ್ನೆಲ್ಲಾ ಗೌಣ…
ಆದರೆ…, ಅಡಿಕೆಗೆ ಹಳದಿ ರೋಗದ ಬಾಧೆ ಕಾಡುತ್ತಿದೆಯಲ್ಲಾ….ಹೌದು….ಈ ನಿಟ್ಟಿನಲ್ಲಿ ವಿಜ್ಞಾನ ,ತಂತ್ರಜ್ಞಾನ , ಅನುಭವ ಇತ್ಯಾದಿಗಳೆಲ್ಲ ತಮ್ಮ ಪ್ರಯತ್ನ ಮಾಡುವಲ್ಲಿ ,ಮಾಡಿಸುವಲ್ಲಿ ನಾವು ಕೃಷಿಕರು ಜಾಗೃತರಾಗಬೇಕು. ನಮ್ಮ ಸಮಸ್ಯೆಯ ಆಳವನ್ನು ಆಡಳಿತ ಯಂತ್ರಕ್ಕೆ ಮನವರಿಕೆ ಮಾಡಿ ಈ ಮೂಲಕ ವೈಜ್ಞಾನಿಕ ಅಧ್ಯಯನ ಅನುಸರಣಗಳನ್ನು ಮಾಡಿ ಯಶಸ್ಸಿನೆಡೆಗೆ ಮುನ್ನುಗ್ಗಬೇಕು.

Advertisement
Advertisement
Advertisement

ಹುಂ, ಇದೆಲ್ಲಾ ದೀರ್ಘ ಅವಧಿಯ ವಿಷಯ ಎಂದು 95 ಶೇಕಡಾ ಕೃಷಿಕರೂ ಈ ಬಗ್ಗೆ ಆಸಕ್ತಿ ಅಥವಾ ಹೋರಾಟದತ್ತ ಮನಮಾಡುತ್ತಿಲ್ಲ.
ನೋಡೋಣ…, ಈ ದಿನಮಾನ ಮೊದಲಿನಂತಲ್ಲ…ಮಾಧ್ಯಮಗಳು ಜನಾಭಿಪ್ರಾಯ ಕ್ರೋಢೀಕರಿಸುವಲ್ಲಿ ದೊಡ್ಡ ಶಕ್ತಿಯಾಗಿ ಮೂಡಿ ಬಂದು , ಯಾವುದೇ ಮೂಲೆಯ ಕಷ್ಟ ಕಾರ್ಪಣ್ಯಗಳನ್ನು ಕೂಡಲೇ ಜನದನಿಯಾಗಿ ಪ್ರತಿಫಲಿಸುವಲ್ಲಿ‌ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಈಗಾಗಲೇ ನಮಗೆಲ್ಲ ತಿಳಿದಂತೆ ಒಂದೆರಡು ತಿಂಗಳಿನಿಂದ ಈ ಹಳದಿ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಹಲವಾರು ಮಂದಿ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಾ , ವಿಜ್ಞಾನಿಗಳನ್ನೂ ಜತೆಗೂಡಿಸಿಕೊಂಡು ಸೂಕ್ತ ಪರಿಹಾರದತ್ತ. ಕಾರ್ಯೋನ್ಮುಖರಾಗಿದ್ದಾರೆ.

Advertisement

ಈ ಸಂದರ್ಭದಲ್ಲಿ ತೆರೆಮರೆಯಲ್ಲಿ ಈ ಕೆಲಸಗಳನ್ನು ಮಾಡುವವರಿಗೆ ಸಹಕಾರ ಸಹಯೋಗ ನೀಡುವರೇ ಗ್ರಾಮ ಗ್ರಾಮಗಳಲ್ಲಿ ಕಾರ್ಯಪಡೆ ರಚಿಸಿಕೊಂಡು ಮುನ್ನಡೆಯಬೇಕು. “ನಮ್ಮಲ್ಲಿ ಸಮಸ್ಯೆ ಇಲ್ಲ” ಎಂದು ಅಸಡ್ಡೆ ಮಾಡದೇ ಗ್ರಾಮ ಸಮಿತಿಗಳಿಗೆ ಸಹಕರಿಸಬೇಕು. ಈ ಬಗ್ಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗಗಳ ಸಹಕಾರಿ ಸಂಘಗಳು ಮುನ್ನೆಲೆಗೆ ಬರಬೇಕಿದೆ. ಪ್ರತೀ ಊರಲ್ಲಿ ಜನಾಭಿಪ್ರಾಯ ಕ್ರೋಢೀಕರಣಗೊಂಡು ಗ್ರಾಮಗಳಲ್ಲಿ ಸಮಸ್ಯೆ ಇರಬಹುದಾದ ತೋಟಗಳನ್ನು ಗುರುತಿಸಿ ವಿಜ್ಞಾನಿಗಳ ಮಾರ್ಗದರ್ಶನದಂತೆ ನಡೆಯಬೇಕು. ಖಂಡಿತಾ ಈ ವೈಜ್ಞಾನಿಕ ಯುಗದಲ್ಲಿ ಹಳದಿರೋಗಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿದೆ ಎಂಬ ಆಶಾಭಾವನೆ ನಮ್ಮದಾಗಲಿ. ಈಗಾಗಲೇ ಕೆಲವೊಂದು ಆಶಾದಾಯಕ ಬೆಳವಣಿಗೆ ಗೋಚರಿಸುತ್ತಿದ್ದು ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನ ಆಗಬೇಕಿದೆ. ಆದ್ದರಿಂದ ಜನಜಾಗೃತಿ ಒಂದೇ ಈಗ ಕೃಷಿಕರು ಮಾಡಬೇಕಾದ ಮೊದಲ ಕೆಲಸ.

ಈ ಮಧ್ಯೆ ಕೃಷಿಕರು ಈ ಕೆಲವು ಅನುಸರಣೆಗಳನ್ನು ಮಾಡಬಹುದು….
1. ಪೋಷಕಾಂಶಗಳ ಪೂರೈಕೆ
2. ಮಳೆಗಾಲದ ನೀರು ನಿರ್ವಹಣೆ
3.ಪ್ಲಾಸ್ಟಿಕ್ ಮಲ್ಚಿಂಗ್
4.ಬೇಸಿಗೆಯ ನೀರಾವರಿ ವ್ಯವಸ್ಥೆಗಳಲ್ಲಿ ಕೆಲವು ಮಾರ್ಪಾಡುಗಳು
5.ತಮ್ಮದೇ ತೋಟಗಳಲ್ಲಿ ಆರೋಗ್ಯಯುತ ಮರಗಳ ಗುರುತಿಸುವಿಕೆ ಮತ್ತು ಅದಕ್ಕೆ ಕಾರಣಗಳ ಬಗ್ಗೆ ಚಿಂತನೆ
6. ಯಾವುದೇ ಕಾರಣಕ್ಕೂ ಯಾವುದೇ ಗಿಡ,ಬೀಜ ,ಸಸ್ಯಗಳನ್ನು ಒಂದೂರಿಂದ ಇನ್ನೊಂದು ಊರಿಗೆ ಕೊಂಡೊಯ್ಯದಿರುವುದು
7. ಕೊರೋನಾ ಸಮಯದಲ್ಲಿ ಪಾಲಿಸಿದ ಸ್ಯಾನಿಟೇಷನ್ ನಿಯಮಗಳನ್ನು ನಮ್ಮ ತೋಟದಲ್ಲೂ ಪಾಲಿಸುವುದು
8. ಬೇರೇ ತೋಟಗಳಿಗೆ ಹೋಗಿ ನಮ್ಮ ತೋಟಗಳಿಗೆ ಬಂದಾಗಲೂ ಸ್ಯಾನಿಟೇಷನ್ ಬಗ್ಗೆ ಗಮನಹರಿಸುವುದು

Advertisement

ಹಾಗೆಯೇ….,  ರೋಗ ಪೀಡಿತ ತೋಟಗಳಲ್ಲಿ ಹೊಸ ಕೃಷಿಯನ್ನು ಯುದ್ಧದೋಪಾದಿಯಾಗಿ ಮಾಡುವುದು.
1 . ಕಾಳು ಮೆಣಸು ಬಳ್ಳಿಗಳನ್ನು ಪ್ರತೀ ಮರಕ್ಕೂ ಹಬ್ಬಿಸುವುದು. (ಕಸಿ ಬಳ್ಲಿ ಉತ್ತಮ)
2 . ಕಸಿ ಜಾಯಿಕಾಯಿ ಗಿಡ ಎಕರೆಗೆ ಇಪ್ಪತೈದಕ್ಕೆ ಮೀರದಂತೆ ನಡುವುದು
3 . ಬಾಳೆ, ಕೊಕ್ಕೋ, ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವುದು…
4. ತೆಂಗು / ತಾಳೆ ಕೃಷಿ ಮಾಡುವುದು.
5. ಇದೆಲ್ಲಕಿಂತಲೂ ಹೆಚ್ಚಾಗಿ ಹಳದಿರೋಗ ಇರುವ ತೋಟದವರು ಅಂಜದೆ ಅಳುಕದೆ ತಮ್ಮ ತೋಟದ ರೋಗ ವ್ಯಾಪ್ತಿಯ ಬಗ್ಗೆ ಹೇಳಬೇಕು. ಹಾಗೂ ಅಸ್ಪರ್ಷ್ಯ ಭಾವನೆಯನ್ನು ಬಿಡಬೇಕು.

ಇದೆಲ್ಲಾ ಒಂದಷ್ಟು ಆರ್ಥಿಕ ಭದ್ರತೆ ಒದಗಿಸಲು ಸಹಕಾರಿಯಾಗಬಹುದು. ಮುಂದೊಂದು ದಿನ ಈ ಹಳದಿ ರೋಗಕ್ಕೆ ಪರಿಹಾರ ಲಭಿಸಿದಾಗ ಕೊಕ್ಕೋ , ಬಾಳೆ ಇವುಗಳನ್ನೆಲ್ಲ ತೆಗೆದು ಅಡಿಕೆ ಕೃಷಿ ಮಾಡೋಣ. ಖಂಡಿತಾ ಭೂತಾಯಿ ಬಂಜೆಯಲ್ಲಾ.. ಕೊರೋನದಂತಹ ಮಹಾಮಾರಿಯನ್ನೇ ಇಡೀ ಜಗತ್ತೇ ಎದುರಿಸಿ ಜಯಗಳಿಸಿದೆ ಅಂತಿರುವಲ್ಲಿ ಈ  ಅಡಿಕೆ ಹಳದಿ ರೋಗ ಬಾಧೆಗೆ ಹೆದರದೆ ಧೈರ್ಯ ನಮ್ಮದಾಗಿರಲಿ.

Advertisement

ಹಾಗೆಯೇ, ದೃತಿಗೆಟ್ಟು ಯಾವುದೇ ಹೊಸತನದತ್ತ ಮುಖ ಮಾಡದಿದ್ದರೆ ಹೊಸ ಬೆಳಕು ಹೇಗೆ ಮೂಡಿತು, ಬಳ್ಳಿ ,ಗಿಡ ಖರೀದಿಗೆ ಆರ್ಥಿಕ ಸಮಸ್ಯೆ ಇದ್ದರೆ..
1. ಹಿಪ್ಪಲಿ ಕಡ್ಡಿಗಳನ್ನು ತಂದು ನಮ್ಮ ತೋಟಗಳಲ್ಲೇ ನರ್ಸರಿ ಮಾಡಿಕೊಂಡು ಕಸಿ ಕಾಳುಮೆಣಸು ಬಳ್ಳಿಗಳನ್ನು ಏಳೆಂಟು ತಿಂಗಳಲ್ಲಿ ತಯಾರು ಮಾಡಬಹುದು. ಕಸಿ ಮೆಣಸಿನ ಬಳ್ಲಿಗಳು ಎರಡು ಮೂರನೇ ವರ್ಷದಿಂದಲೇ ಫಸಲುಕೊಡಲು ಪ್ರಾರಂಬಿಸುತ್ತವೆ.
2. ಜಾಯಿಕಾಯಿ ಕಸಿ ಗಿಡವೂ ನಾವೇ ಸ್ವಲ್ಪ ಅಬ್ಯಸಿಸಿದರೆ ನಮ್ಮಲ್ಲೇ ಲಭ್ಯವಿರುವ ಊರ ತಳಿಯ ಗಿಡಗಳಿಗೆ ಸ್ವತಃ ಕಸಿಕಟ್ಟಿ ಗಿಡ ಮಾಡಿಕೊಳ್ಲಬಹುದು.
3. ಕೊಕ್ಕೋ ಗಿಡವೂ ಉತ್ತಮ ಬೀಜ ಆಯ್ಕೆ ಮಾಡಿ ಮಾಡಿಕೊಳ್ಲಬಹುದು.
4.ಬಾಳೆ ಗಡ್ಡೆ ಕೆಲವಷ್ಟು ತಂದರೆ ಒಂದು ವರ್ಷದಲ್ಲಿ ಬೇಕಾದಷ್ಟು ಗಡ್ಡೆಗಳು ನಮ್ಮಲ್ಲೇ ಆಗುತ್ತದೆ.

ಏನಿದ್ದರೂ ಧನಾತ್ಮಕವಾಗಿ ಚಿಂತನೆ ಮಾಡುತ್ತಾ ಕಾರ್ಯರೂಪಕ್ಕೆ ಇಳಿದರೆ ಯಶಸ್ಸು ನಮ್ಮದೇ….. ನಾಳೆಯೇ ಮುನ್ನಡೆಯೋಣವಲ್ಲವೇ… ದೇವರ ದಯ ಮತ್ತು ವಿಜ್ಞಾನದ ನಮ್ಮೊಂದಿಗಿದೆ….ಇದನ್ನು ಕಾರ್ಯರೂಪಕ್ಕೆ ತರಲು ಜಾಗೃತರಾಗೋಣ ಕಾರ್ಯೋನ್ಮುಖರಾಗೋಣ.

Advertisement

ಆಗದು ಎಂದೂ
ಕೈಲಾಗದು ಎಂದೂ
ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೇ
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದೂ
ಕೆಚ್ಚೆದೆ ಇರಬೇಕೆಂದೆಂದೂ….

#ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು
January 23, 2025
11:24 AM
by: ಪ್ರಬಂಧ ಅಂಬುತೀರ್ಥ
ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror