ಅಡಿಕೆ ಹಳದಿ ಎಲೆ ರೋಗ ಈಗ ವೇಗವಾಗಿ ವಿಸ್ತರಣೆಯಾಗುತ್ತಿದೆ. ಸಂಪಾಜೆ ಪ್ರದೇಶದಲ್ಲಿ ಮಾತ್ರಾ ಕಂಡುಬರುತ್ತಿದ್ದ ರೋಗ ಈಗ ಮರ್ಕಂಜ ಸೇರಿದಂತೆ ಹಲವು ಕಡೆಗಳಲ್ಲಿ ಕಂಡುಬಂದಿದೆ. ಈ ರೋಗ ನಿಯಂತ್ರಣಕ್ಕೆ ಹಲವು ಕೃಷಿಕರು ವಿವಿಧ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಮರ್ಕಂಜದ ಬಾಲಕೃಷ್ಣ ಅವರು ಸಾವಯವ ಕೃಷಿಯ ಪ್ರಯತ್ನ ಮಾಡಿದ್ದಾರೆ. ಇದರಿಂದ ಹರಡುವಿಕೆ ನಿಧಾನವಾಗಿದೆ ಎನ್ನುತ್ತಾರೆ.
ಅಡಿಕೆ ಹಳದಿ ಎಲೆ ರೋಗ ನಿವಾರಣೆಗೆ ವಿವಿಧ ಪ್ರಯತ್ನ ಕೃಷಿಕರೇ ಮಾಡಿದ್ದಾರೆ. ಕೃಷಿ ವಿಜ್ಞಾನಿಗಳ ರೀತಿಯಲ್ಲಿಯೇ ಹಲವು ಪ್ರಯತ್ನ ಮಾಡಿದವರು ಇದ್ದಾರೆ. ಅದರಲ್ಲಿ ಸಾವಯವ ಕೃಷಿಯೂ ಒಂದು ವಿಧಾನ.ಸಾವಯವ ಕೃಷಿಯಿಂದ ರೋಗ ವಿಸ್ತರಣೆಯ ಪ್ರಭಾವ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅಡಿಕೆ ಹಳದಿ ಎಲೆ ರೋಗವು ಇಂತಹ ತೋಟಗಳಿಗೆ ನಿಧಾನವಾಗಿ ಬರುತ್ತದೆ ಮತ್ತು ಹರಡುತ್ತವೆ ಎಂದು ಹೇಳುತ್ತಾರೆ. ಇಂತಹ ಕೃಷಿ ಕೂಡಾ ಇಂದು ಹಳದಿ ಎಲೆ ರೋಗ ಪೀಡಿತ ಪ್ರದೇಶದಲ್ಲಿ ಅಗತ್ಯವಾಗಿದೆ. ರೋಗ ವಿಸ್ತರಣೆಯನ್ನು ಸ್ವಲ್ಪ ನಿಧಾನವಾಗಿಸಬಹುದು ಎಂಬುದು ಸಾವಯವ ಕೃಷಿಕರ ಸಲಹೆಯಾಗಿದೆ.
ಮರ್ಕಂಜದ ಕೃಷಿಕ ಬಾಲಕೃಷ್ಣ ಅವರ ತೋಟದಲ್ಲಿ ಕಳೆದ ಐದು ವರ್ಷದ ಹಿಂದೆ ರೋಗ ಕಂಡುಬಂದಿತ್ತು. ಆಗಲೇ ವಿಸ್ತರಣೆಯಾಗಿತ್ತು, ತಕ್ಷಣವೇ ಸಾವಯವ ಕೃಷಿ ಆರಂಭಿಸಿದರು. ಆ ತೋಟದಲ್ಲಿ ರೋಗ ವಿಸ್ತರಣೆ ಕಡಿಮೆಯಾಗಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ ರೋಗವೇ ಬರುವುದಿಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…