ಅಡಿಕೆ ಧಾರಣೆ ಸದ್ಯ ಸ್ಥಿರವಾಗಿದೆ. ಅಡಿಕೆಗೆ ಬೇಡಿಕೆ ಈಗಲೂ ಇದೆ. ಆದರೆ ಅಡಿಕೆ ಆಮದು ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಬ್ರೇಕ್ ಬೀಳುತ್ತಿದೆ. ಇದೀಗ ಮತ್ತೆ ಅಸ್ಸಾಂ ಮೂಲಕ ದಾಖಲೆ ರಹಿತವಾಗಿ ಬಂದ 72 ಮೆಟ್ರಿಕ್ ಟನ್ ಅಡಿಕೆಯನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಇದರ ಮೌಲ್ಯ ಸುಮಾರು 2.74 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
Advertisement
ಮ್ಯಾನ್ಮಾರ್ ನಿಂದ ಅಡಿಕೆಯನ್ನು ದಾಖಲೆ ರಹಿತವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ಗುಹವಾಟಿಯ ಖಾನಾಪರಾ ಪ್ರದೇಶದಲ್ಲಿ 3 ಲಾರಿಗಳನ್ನು ವಶಪಡಿಕೊಂಡ ಬಳಿಕ ನಡೆಸಿದ ತನಿಖೆಯಿಂದ ಸುಮಾರು 2.76 ಕೋಟಿ ರೂ ಗಳ ಅಡಿಕೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
Advertisement
ಮಿಜೋರಾಂನಿಂದ ಅಡಿಕೆಯನ್ನು ಪಶ್ಚಿಮ ಬಂಗಾಳಕ್ಕೆ ಸಾಗಾಟ ಮಾಡಿ ಅಲ್ಲಿಂದ ನಂತರ ವಿವಿದೆಡೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು. ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಅಡಿಕೆ ಸಾಗಣೆಯಾಗುತ್ತಿದೆ. ಹೀಗಾಗಿ ಈಗ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇರಿಸಿ ತನಿಖೆ ಮಾಡುತ್ತಿದ್ದು ಅಡಿಕೆ ಅಕ್ರಮವಾಗಿ ದೇಶದೊಳಗೆ ನುಸುಳದಂತೆ ಕ್ರಮ ಕೈಗೊಂಡಿದ್ದಾರೆ.
ಅಡಿಕೆಗೆ ಬೇಡಿಕೆ ಇದೆ
ಇದುವರೆಗೆ ಅಡಿಕೆ ಅಕ್ರಮವಾಗಿ ಸಾಗಾಟದ ಅನೇಕ ಪ್ರಕರಣಗಳು ದಾಖಲಾಗಿದೆ. ಸೂಕ್ತ ಕ್ರಮಗಳಿಂದಾಗಿ ಅಡಿಕೆ ಧಾರಣೆ ಇಳಿಕೆಯಾಗದಂತೆ ಅಡಿಕೆ ಬೆಳೆಗಾರರಿಗೆ ತೀರಾ ಪ್ರಯೋಜನವಾಗಿದೆ. ಅಡಿಕೆಗೆ ಈಗಲೂ ಉತ್ತರ ಭಾರತದಲ್ಲಿ ಬೇಡಿಕೆ ವ್ಯಕ್ತವಾಗುತ್ತಿದೆ. ಆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ವಿರುದ್ಧ ಅಪಪ್ರಚಾರವೂ ಸಾಕಷ್ಟು ನಡೆಯುತ್ತಿದೆ ಎಂದು ಅಡಿಕೆ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಸದ್ಯಕ್ಕೆ ಅಡಿಕೆ ಧಾರಣೆ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement