ಕ್ಯಾನ್ಸರ್‌ ಜೀವಕೋಶ ತಡೆಗೆ ಅಡಿಕೆ ಔಷಧಿ – ಅಡಿಕೆ ಪುಸ್ತಕದಲ್ಲಿ ವಿಶೇಷ ಉಲ್ಲೇಖ | ಅಡಿಕೆ ಬೆಳೆಗಾರರಿಗೆ ಇನ್ನೊಂದು ಬಲ |

October 16, 2021
11:25 AM

ಅಡಿಕೆಯಲ್ಲಿನ ಅರೆಕಾಲಿನ್‌ ಎಂಬ ಅಂಶವು ಕ್ಯಾನ್ಸರ್‌ ಜೀವಕೋಶಗಳ ವಿಸ್ತರಣೆ ತಡೆಯುತ್ತದೆ ಎಂಬ ಅಧ್ಯಯನ ವರದಿ ಇದೀಗ ಗಮನ ಸೆಳೆದಿದೆ. ಅಡಿಕೆ ಪುಸ್ತಕದಲ್ಲಿ ಈ ಅಂಶ ಬಹಿರಂಗವಾಗಿದ್ದು ಅಡಿಕೆ ಬೆಳೆಗಾರರಿಗೆ ಇದೊಂದು ಅಂಶ ಬಲವಾಗಲಿದೆ. ಈವರೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಗುಮ್ಮ ಆಗಾಗ ಹರಿದಾಡುತ್ತಿತ್ತು.ಅದಕ್ಕೆ ತಾತ್ಕಾಲಿಕ ಉತ್ತರ ದೊರೆತಂತಾಗಿದ್ದು, ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.

Advertisement
Advertisement
Advertisement
Advertisement

ಅಮೆರಿಕದ ಅಟ್ಲಾಂಟಾದ ಎಮರಿ ವಿಶ್ವವಿದ್ಯಾಲಯದ ವಿನ್‌ಶಿಪ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಇತ್ತೀಚಿನ ಅಧ್ಯಯನದಲ್ಲಿ, ಅರೆಕೋಲಿನ್ ಹೈಡ್ರೋಬ್ರೊಮೈಡ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬ ಅಂಶ ಕಂಡುಬಂದಿದೆ. ಈ ಆಧಾರದಲ್ಲಿ ಅಡಿಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ದೃಢಪಡಿಸುವ ಅಧ್ಯಯನ ವರದಿ ಇದೀಗ ಬಹಿರಂಗಗೊಂಡಿದೆ.

Advertisement

ಅಡಿಕೆ” ಪುಸ್ತಕದಲ್ಲಿ ಸಿಪಿಸಿಆರ್‌ ಐ ಮಾಜಿ ನಿರ್ದೇಶಕ ಡಾ. ಪಿ ಚೌಡಪ್ಪ ಅವರ ಸಂಪಾದಕತ್ವದಲ್ಲಿ  ಈ ಪುಸ್ತಕ ಹೊರಬರುತ್ತಿದೆ. ಪ್ರಮುಖವಾಗಿ ಈ ಪುಸ್ತಕದಲ್ಲಿ , ಅಡಿಕೆಯಲ್ಲಿನ ಅರೆಕೋಲಿನ್ ಹೈಡ್ರೋಬ್ರೋಮೈಡ್‌ ಅಂಶವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಹೇಳಿದೆ.  ಈ  ಪುಸ್ತಕದಲ್ಲಿ ಕೃಷಿ ವಿಜ್ಞಾನಿಗಳಾದ ಎಂ. ಅರಿವಳಗನ್, ಸೆಂಥಿಲ್ ಅಮುಧನ್ ಎಂ. ಮತ್ತು ಕೆಬಿ ಹೆಬ್ಬಾರ್ ಅಡಿಕೆಯ ಬಗ್ಗೆ ಬರೆದಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಚೆಗೆ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.

Advertisement

ಈ ಪುಸ್ತಕದ ಪ್ರಕಾರ ಅಡಿಕೆಯು ಮೂಲ ರೂಪದಲ್ಲಿ ಅಪಾಯಕಾರಿಯಲ್ಲ. ಅಡಿಕೆಗೆ ಅಲ್ಸರ್, ಗಾಯಗಳು ಮತ್ತು ಕ್ಯಾನ್ಸರ್ ಅನ್ನು ಸಹ ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಿನ ಜಾನಪದ ಔಷಧಿಗಳ ಚಿಕಿತ್ಸೆ ಹಾಗೂ ಅದರ ಗುಣಗಳು ಈಗ ವೈಜ್ಞಾನಿಕ ಪುರಾವೆಗಳಿಂದ  ಬೆಳಕಿಗೆ ಬಂದಿವೆ ಕೂಡಾ. ಈ ಎಲ್ಲಾ ಗುಣಲಕ್ಷಣಗಳು ಮತ್ತು ಅವುಗಳ ಮೇಲಿನ ಕ್ಲಿನಿಕಲ್ ಪ್ರಯೋಗಗಳಿಗೆ ಕಾರಣವಾಗಿರುವ  ವಿವರವಾದ ಅಧ್ಯಯನಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಬಹುತೇಕ ದೇಶಗಳಲ್ಲಿ  ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ ಹಾಗೂ ಬಳಕೆಯನ್ನೂ ಮಾಡಲಾಗಿದೆ.  ಆದ್ದರಿಂದ, ಅಡಿಕೆಗಳನ್ನು ಕಾರ್ಸಿನೋಜೆನಿಕ್ ಎಂದು ಅನಗತ್ಯವಾಗಿ ಹೇಳುವ ಬದಲು ಸರಿಯಾದ ವೈಜ್ಞಾನಿಕ ಸಂಶೋಧನೆ ನಡೆಸುವ ಅವಶ್ಯಕತೆಯಿದೆ ಎನ್ನುದು ಉಲ್ಲೇಖ.

ಅಡಿಕೆ ಟಾಸ್ಕ್‌ ಫೋರ್ಸ್ ನ  ಸಮಿತಿಯ ಸದಸ್ಯರೂ ಆಗಿರುವ ಸಿಪಿಸಿಆರ್‌ ಐ ಮಾಜಿ ನಿರ್ದೇಶಕ ಡಾ. ಪಿ ಚೌಡಪ್ಪ ಅವರು, ಅಡಿಕೆಯನ್ನು  ಕ್ಯಾನ್ಸರ್ ಕಾರಕ ಎಂದು ಅನಗತ್ಯ ಹೇಳುವ ಬದಲು ಸರಿಯಾದ ಅಧ್ಯಯನವಾಗಬೇಕಿದೆ ಎಂದು  ಹೇಳುತ್ತಾರೆ. ಇದೀಗ ಅನೇಕ ಅಧ್ಯಯನಗಳ ಪ್ರಕಾರ ಅಡಿಕೆಯ ಮೂಲ ಸ್ವರೂಪ ಆರೋಗ್ಯದ ಮೇಲೆ ಹಾನಿಕಾರಕವಾಗಿಲ್ಲ ಎನ್ನುತ್ತಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror