ಈಚೆಗೆ ಜಾರ್ಖಂಡ್ ಸಂಸದ ನಿಶಿಕಾಂತ್ ಅವರು ‘ಅಡಿಕೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಹಾನಿಕಾರಕ’ ಎಂದು ಹೇಳಿರುವುದು ಖಂಡಿನೀಯ. ಕಳೆದ ಹಲವು ವರ್ಷಗಳಿಂದ ಇಂತಹ ಹೇಳಿಕೆಗಳು ಆಗಾಗ ಕೇಳಿಬರುತ್ತಿದೆ. ಭಾರತೀಯ ಪರಂಪರೆಯಲ್ಲಿ ಅಡಿಕೆಯು ಪರಂಪರಾಗತವಾಗಿ ಬಳಕೆಯಾಗುತ್ತಿದೆ. ಅನ್ಯಾನ್ಯ ವೈಜ್ಞಾನಿಕ ವರದಿಗಳು ‘ಅಡಿಕೆ ಮಾತ್ರವೇ ಹಾನಿಕಾಕರವಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ವರದಿಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ‘ವೈಜ್ಞಾನಿಕವಾದ ಸಂಶೋಧನೆ’ ನಡೆಯಬೇಕು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.
ಭಾರತದಲ್ಲಿ ಸುಮಾರು ಐದರಿಂದ ರಿಂದ ಆರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಏಳರಿಂದ ಎಂಟು ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ದೇಶದಲ್ಲಿ ಸುಮಾರು ಐದು ಲಕ್ಷ ಕೃಷಿಕರು ಅಡಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ಅಡಿಕೆ ಮಾರುಕಟ್ಟೆಯ ಮೂಲಕವೂ ಲಕ್ಷಾಂತರ ಮಂದಿ ಬದುಕು ಸಾಗಿಸುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಕರ್ನಾಟಕದ ಶೇ 60 ಭಾಗದಲ್ಲಿ ಅಡಿಕೆ ಬೆಳೆಯು ವಿಸ್ತಾರಗೊಂಡಿದೆ. ಅಡಿಕೆಯಿಂದಾಗಿ ಸರಕಾರಕ್ಕೂ ತೆರಿಗೆ ಹಾಗೂ ಇತರ ಮೂಲಗಳಿಂದ ಆದಾಯವೂ ಸಂದಾಯವಾಗುತ್ತಿದೆ.
ಭಾರತೀಯ ಪರಂಪರೆಯಲ್ಲಿ #ಅಡಿಕೆ ಯು ಪರಂಪರಾಗತವಾಗಿ ಬಳಕೆಯಾಗುತ್ತಿದೆ. ಅನ್ಯಾನ್ಯ ವೈಜ್ಞಾನಿಕ ವರದಿಗಳು‘ಅಡಿಕೆ ಮಾತ್ರವೇ ಹಾನಿಕಾಕರವಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ವರದಿಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ‘ವೈಜ್ಞಾನಿಕವಾದ ಸಂಶೋಧನೆ’ ನಡೆಯಬೇಕು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತಿದೆ.
— All India Areca Growers Association, Puttur (@AIAGAssociation) November 12, 2021
Advertisement
ಇದೀಗ ‘ಅಡಿಕೆ ಹಾನಿಕಾರಕ’ ಎನ್ನುವ ವರದಿಗಳಿಂದ ಅಡಿಕೆ ಬೆಳೆಗಾರರು ಗೊಂದಲಕ್ಕೀಡಾಗಿದ್ದಾರೆ. ಕೃಷಿ ಬದುಕಿನ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಹೀಗಾಗಿ ಸರಕಾರವು ಮಧ್ಯಪ್ರವೇಶ ಮಾಡಿ ಅಡಿಕೆಯ ಬಗ್ಗೆ ಸರಿಯಾದ ವೈಜ್ಞಾನಿಕ ಸಂಶೋಧನೆ ನಡೆಸಿ ರೈತರಿಗೆ ಧೈರ್ಯ ತುಂಬಬೇಕು ಎಂದು ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.