ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಅಸ್ಸಾಂನಲ್ಲಿ ಈ ವರ್ಷ 163 ಪ್ರಕರಣಗಳು ದಾಖಲು | ಅಡಿಕೆ ಕಳ್ಳಸಾಗಾಣಿಕೆಗೆ ಸತತ ತಡೆ |

ಅಸ್ಸಾಂ ಪೊಲೀಸರು ಈ ವರ್ಷದಲ್ಲಿ ಅಸ್ಸಾಂ ಭಾಗದಲ್ಲಿ  ನಡೆದ ಅಪರಾಧ ಪ್ರಕರಣಗಳ ವರದಿ ನೀಡಿದ್ದರು. ಇದರಲ್ಲಿ ಅಡಿಕೆ ಕಳ್ಳ ಸಾಗಾಣಿಕೆಗೆ ಸೇರಿದ 163 ಪ್ರಕರಣಗಳು ದಾಖಲಾದ ಬಗ್ಗೆ ವರದಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 182 ಮಂದಿಯನ್ನು ಬಂಧಿಸಿ 146 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಎಲ್ಲಾ ಕಳ್ಳ ಸಾಗಾಣಿಕೆಗಳು ಮ್ಯಾನ್ಮಾರ್‌ ಮೂಲಕ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

Advertisement
Advertisement

ಅಸ್ಸಾಂ ರಾಜ್ಯದಲ್ಲಿ ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಿದೆ. 11 ತಿಂಗಳಲ್ಲಿ  ಅಪರಾಧ ಪ್ರಕರಣಗಳಲ್ಲಿ ತೀವ್ರ ಇಳಿಕೆಯಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಪ್ರತಿ ತಿಂಗಳು ದಾಖಲಾಗುವ ಸರಾಸರಿ ಪ್ರಕರಣಗಳ ಸಂಖ್ಯೆ ಕಳೆದ ವರ್ಷ 11,103 ರಿಂದ ಈ ವರ್ಷ 6,247 ಕ್ಕೆ ಇಳಿದಿದೆ ಎಂದು ಅಸ್ಸಾಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ.

Advertisement

ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸಮ್ಮಿಶ್ರ ಸರ್ಕಾರವು ಆಡಳಿತ ನಡೆಸುತ್ತಿದ್ದು ಎಲ್ಲಾ ಅಪರಾಧಗಳಿಗೆ ಕಡಿವಾಣ, ಕಳ್ಳಸಾಗಾಣಿಕೆಗಳ ತಡೆಗೆ ಸತತ ಪ್ರಯತ್ನ ನಡೆಸುತ್ತಿದೆ. ಈ ಕಾರಣದಿಂದ ಅಡಿಕೆ ಕಳ್ಳ ಸಾಗಾಣಿಕೆ ಕೂಡಾ ಕಳೆದ ಹಲವು ಸಮಯಗಳಿಂದ ಬ್ರೇಕ್‌ ಬಿದ್ದಿದೆ. ಹಾಗಿದ್ದರೂ ಇಲಾಖೆಗಳ, ಪೊಲೀಸರ ಕಣ್ಣು ತಪ್ಪಿಸಿ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು, ಇದು ಕೂಡಾ ಈಚೆಗೆ ತಡೆಯಾಗುತ್ತಿದೆ.

ಕಳೆದ ವರ್ಷ ಮೇ ತಿಂಗಳಿನಿಂದ ಅಸ್ಸಾಂ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ 2,834 ಪ್ರಕರಣಗಳನ್ನು ದಾಖಲಿಸಿದ್ದಾರೆ, 4,838 ಕ್ಕೂ ಹೆಚ್ಚು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ ಮತ್ತು 548.53 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. 141 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಿದ್ದಾರೆ, 104 ಕ್ಕೂ ಹೆಚ್ಚು ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ ಮತ್ತು ಸುಮಾರು 250 ಜನರನ್ನು ರಕ್ಷಿಸಿದ್ದಾರೆ. ಇದೇ ಅವಧಿಯಲ್ಲಿ ಮ್ಯಾನ್ಮಾರ್‌ನಿಂದ ಅಡಿಕೆ ಸಾಗಾಟದ 163 ಪ್ರಕರಣಗಳು ದಾಖಲಾಗಿದ್ದು, 182 ಮಂದಿಯನ್ನು ಬಂಧಿಸಿ 146 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಅಸ್ಸಾಂನಲ್ಲಿ ಈ ವರ್ಷ 163 ಪ್ರಕರಣಗಳು ದಾಖಲು | ಅಡಿಕೆ ಕಳ್ಳಸಾಗಾಣಿಕೆಗೆ ಸತತ ತಡೆ |"

Leave a comment

Your email address will not be published.


*