ಮ್ಯಾನ್ಮಾರ್‌ನಿಂದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಗೆ ಕಳ್ಳಸಾಗಣೆ ಮಾಡಲಾದ ಅಡಿಕೆಯನ್ನು ಕಂಟೈನರ್ ಟ್ರಕ್ ಮೂಲಕ ಪಶ್ಚಿಮ ಬಂಗಾಳದ ವಿವಿದೆಡೆಗೆ ಅಡಿಕೆಯನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಮಿಜೋರಾಂ ಗೆ ಬಂದ ಅಡಿಕೆಯನ್ನು ಕಂಟೈನರ್ ಟ್ರಕ್ ಸಾಗಾಟ ಮಾಡುವ ವೇಳೆ ಅಸ್ಸಾಂನ ಗುವಾಹಟಿಯ ಖಾನಾಪುರದಲ್ಲಿ ಕಸ್ಟಮ್ಟ್ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಮಾರು 2.55 ಕೋಟಿ ರೂ.ಮೌಲ್ಯದ ಅಡಿಕೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 3 ಜನರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಅಡಿಕೆಗೆ ಕಳೆದ ಕೆಲವು ಸಮಯಗಳಿಂದ ಮತ್ತೆ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಪೂರೈಕೆ ಸರಿಯಾಗದ ಕಾರಣದಿಂದ ವಿದೇಶಿ ಅಡಿಕೆಯನ್ನು ಕಳ್ಳದಾರಿಯ ಮೂಲಕ ಸಾಗಾಟ ಮಾಡಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಈಗಲೂ ಉತ್ತಮ ಧಾರಣೆ ಅಡಿಕೆ ಲಭ್ಯವಾಗುತ್ತಿದೆ. ಇದೀಗ ಧಾರಣೆಯೂ ಏರಿಕೆಯಾಗಿದೆ. ಹೊಸ ಅಡಿಕೆ ಧಾರಣೆ 270 ರೂಪಾಯಿಗಿಂತ ಅಧಿಕವಾಗಿದ್ದು ನವರಾತ್ರಿವರೆಗೆ ಈ ಏರಿಕೆ ಇರಲಿದೆ. ನಂತರ 15 ದಿನಗಳ ವರೆಗೆ ಸ್ಥಿರತೆ ಇದ್ದು ಬಳಿಕ ಧಾರಣೆ ಏರಿಕೆಯಾಗಬಹುದು ಎಂಬುದು ಈಗಿನ ಮಾರುಕಟ್ಟೆ ನಿರೀಕ್ಷೆ.