ಅಸ್ಸಾಂನಲ್ಲಿ 68 ಮೆಟ್ರಿಕ್ ಟನ್ ವಿದೇಶಿ ಮೂಲದ ಅಡಿಕೆ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

Advertisement
Advertisement
ಡಿಕೆ ಆಮದು ಮತ್ತೆ ತಡೆಯಲಾಗಿದೆ. 68 ಮೆಟ್ರಿಕ್ ಟನ್ ವಿದೇಶಿ ಮೂಲದ  ಅಡಿಕೆಯನ್ನು ಅಸ್ಸಾಂನ ಕಸ್ಟಮ್ಟ್‌ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಮ್ಯಾನ್ಮಾರ್‌ನಿಂದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಗೆ  ಕಳ್ಳಸಾಗಣೆ ಮಾಡಲಾದ ಅಡಿಕೆಯನ್ನು ಕಂಟೈನರ್ ಟ್ರಕ್‌ ಮೂಲಕ ಪಶ್ಚಿಮ ಬಂಗಾಳದ ವಿವಿದೆಡೆಗೆ ಅಡಿಕೆಯನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಮಿಜೋರಾಂ ಗೆ ಬಂದ ಅಡಿಕೆಯನ್ನು ಕಂಟೈನರ್ ಟ್ರಕ್‌ ಸಾಗಾಟ ಮಾಡುವ ವೇಳೆ ಅಸ್ಸಾಂನ ಗುವಾಹಟಿಯ ಖಾನಾಪುರದಲ್ಲಿ ಕಸ್ಟಮ್ಟ್‌ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಮಾರು 2.55 ಕೋಟಿ ರೂ.ಮೌಲ್ಯದ ಅಡಿಕೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 3 ಜನರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.

Advertisement
Advertisement

ಅಡಿಕೆಗೆ ಕಳೆದ ಕೆಲವು ಸಮಯಗಳಿಂದ ಮತ್ತೆ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಪೂರೈಕೆ ಸರಿಯಾಗದ ಕಾರಣದಿಂದ ವಿದೇಶಿ ಅಡಿಕೆಯನ್ನು ಕಳ್ಳದಾರಿಯ ಮೂಲಕ ಸಾಗಾಟ ಮಾಡಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಈಗಲೂ ಉತ್ತಮ ಧಾರಣೆ ಅಡಿಕೆ ಲಭ್ಯವಾಗುತ್ತಿದೆ. ಇದೀಗ ಧಾರಣೆಯೂ ಏರಿಕೆಯಾಗಿದೆ. ಹೊಸ ಅಡಿಕೆ ಧಾರಣೆ  270  ರೂಪಾಯಿಗಿಂತ ಅಧಿಕವಾಗಿದ್ದು ನವರಾತ್ರಿವರೆಗೆ ಈ ಏರಿಕೆ ಇರಲಿದೆ. ನಂತರ  15  ದಿನಗಳ ವರೆಗೆ ಸ್ಥಿರತೆ ಇದ್ದು ಬಳಿಕ  ಧಾರಣೆ ಏರಿಕೆಯಾಗಬಹುದು  ಎಂಬುದು ಈಗಿನ ಮಾರುಕಟ್ಟೆ ನಿರೀಕ್ಷೆ.

 

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಸ್ಸಾಂನಲ್ಲಿ 68 ಮೆಟ್ರಿಕ್ ಟನ್ ವಿದೇಶಿ ಮೂಲದ ಅಡಿಕೆ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು"

Leave a comment

Your email address will not be published.


*