ಅಡಿಕೆ ರೇಟ್ ಜಂಪ್‌ | ದಾಖಲೆ ಧಾರಣೆ | ಒಮ್ಮೆಲೇ 15 ರೂಪಾಯಿ ಏರಿಕೆ ಕಂಡ ಮಾರುಕಟ್ಟೆ

October 16, 2020
11:02 AM

ಪುತ್ತೂರು: ಅಡಿಕೆ ಮಾರುಕಟ್ಟೆ ಒಮ್ಮೆಲೇ ಏರಿಕೆ ಕಂಡಿದೆ. ಹೊಸ ಅಡಿಕೆ , ಹಳೆ ಅಡಿಕೆ ಹಾಗೂ ಡಬ್ಬಲ್‌ ಚೋಲ್‌ ಧಾರಣೆಯಲ್ಲೂ ಏರಿಕೆಯಾಗಿದೆ. ‌

ಈಗ ಅಧಿಕೃತವಾಗಿ 400  ರೂಪಾಯಿ ಧಾರಣೆಯನ್ನು ಅಡಿಕೆ ಕಂಡಿದೆ. ಹೊಸ ಅಡಿಕೆ 330 ರೂಪಾಯಿ, ಹಳೆ ಅಡಿಕೆ 400 ರೂಪಯಿ ಹಾಗೂ ಡಬ್ಬಲ್‌ ಚೋಲ್ 410  ರೂಪಾಯಿಗೆ ಏರಿಕೆಯಾಗಿದೆ.

ಗುರುವಾರ ಹೊಸ ಅಡಿಕೆ 300  ರೂಪಾಯಿ, ಹಳೆ ಅಡಿಕೆ 383 ರೂಪಯಿ ಹಾಗೂ ಡಬ್ಬಲ್‌ ಚೋಲ್ 400  ರೂಪಾಯಿ ಧಾರಣೆ ಇದ್ದರೆ ಶುಕ್ರವಾರ ಒಮ್ಮೆಲೇ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆಗೆ  30  ರೂಪಾಯಿಯಷ್ಟು ಏರಿಕೆಯಾಗಿದೆ. ಇದುವರೆಗಿನ ದಾಖಲೆಗಳ ಪ್ರಕಾಋ ಈ ರೀತಿಯ ಏರಿಕೆ ಮೊದಲ ಬಾರಿಯಾಗಿದೆ. ಧಾರಣೆ ಏರಿಕೆಯಾಗುತ್ತಲೇ ಅಡಿಕೆ ಮಾರುಕಟ್ಟೆ ವಲಯದಲ್ಲಿ  ಸಂಚಲನ ಮೂಡಿಸಿದೆ. ಕಳೆದ ಒಂದು ವಾರದಿಂದ ಖಾಸಗಿ ವಲಯದಲ್ಲಿ  ಧಾರಣೆ ಏರಿಕೆಯಾಗುತ್ತಲೇ ಇತ್ತು. ಇದೀಗ ಕ್ಯಾಂಪ್ಕೋ ಕೂಡಾ ಧಾರಣೆ ಏರಿಕೆ ಮಾಡಿದೆ. ಈ ಮೂಲಕ ಅಧಿಕೃತವಾಗಿ ಸಾರ್ವಕಾಲಿಕ ದಾಖಲೆಯ ಧಾರಣೆ ಕಂಡಿದೆ. ಮುಂದೆ ಏರಿಕೆಯ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಅಡಿಮೆ ಆಮದು ಆಗದೇ ಇದ್ದರೆ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror