ಅಸ್ಸಾಂ(ಸುದ್ದಿಮೂಲ) : ಅಸ್ಸಾಂ ಗಡಿಭಾಗದಲ್ಲಿ ಭಾರತದ ಒಳಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ 1.25 ಕೋಟಿ ರೂಪಾಯಿ ಮೌಲ್ಯದ ಸುಮಾರು 563 ಚೀಲ ಅಡಿಕೆಯನ್ನು ಅಸ್ಸಾಂ ಗಡಿಭದ್ರತಾ ಪಡೆ ವಶಕ್ಕೆ ಪಡೆದು ಸಂಬಂಧಿತ ಇಲಾಖೆಗೆ ಹಸ್ತಾಂತರಿಸಿದೆ.
ಕಳಪೆ ಗುಣಮಟ್ಟದ ಅಡಿಕೆ ಕಳೆದ ಕೆಲವು ಸಮಯಗಳಿಂದ ಅಸ್ಸಾಂ ಗಡಿಯ ಮೂಲಕ ಭಾರತದೊಳಕ್ಕೆ ಬಂದು ಪಶ್ಚಿಮ ಬಂಗಾಳದ ದಾರಿಯಲ್ಲಿ ಭಾರತದ ವಿವಿದೆಡೆಗೆ ಸರಬರಾಜು ಆಗುತ್ತಿತ್ತು. ಈ ಅಕ್ರಮ ಸಾಗಾಟವನ್ನು ಅಸ್ಸಾಂ ಗಡಿ ಭದ್ರತಾ ಪಡೆ ಮಾಹಿತಿ ಲಭ್ಯವಾದ ತಕ್ಷಣವೇ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಲೇ ಇದೆ. ಬುಧವಾರ ಕೂಡಾ ಅಕ್ರಮ ಅಡಿಕೆ ಸಾಗಾಟದ ಮಾಹಿತಿ ಪಡೆದು ಅಸ್ಸಾಂ ಗಡಿ ಭದ್ರತಾ ಪಡೆ ಹಾಗೂ ಸ್ಟಮ್ ಪ್ರಿವೆಂಟಿವ್ ಫೋರ್ಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಚಂಪೈ ಜಿಲ್ಲೆಯಲ್ಲಿ ಅಡಿಕೆ ವಶಕ್ಕೆ ಪಡೆದಿದ್ದಾರೆ.
ಮುಂದೆ ವಿವಿಧ ರಾಜ್ಯಗಳ ಚುನಾವಣೆ ಇರುವುದರಿಂದ ದೇಶದ ಗಡಿ ಭದ್ರತೆ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಅಡಿಕೆ ಸೇರಿದಂತೆ ಇತರ ವಸ್ತುಗಳ ಅಕ್ರಮ ಪ್ರವೇಶಕ್ಕೆ ತಡೆ ಬೀಳಲಿದೆ. ಹೀಗಾಗಿ ಅಡಿಕೆ ಧಾರಣೆಯು ಕರ್ನಾಟಕದಲ್ಲಿ ಏರಿಕೆಯ ಹಾದಿ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel