ಅಡಿಕೆ ಕಳ್ಳಸಾಗಾಟಕ್ಕೆ ಸತತ ಪ್ರಯತ್ನ | ಅಸ್ಸಾಂ ಗಡಿಯಲ್ಲಿ ಹದ್ದಿನ ಕಣ್ಣು | ಮತ್ತೆ ವಶವಾಯ್ತು 235 ಚೀಲ ಅಡಿಕೆ |

March 24, 2021
2:25 PM

ಅಡಿಕೆ ಕಳ್ಳ ಸಾಗಾಟಕ್ಕೆ ಸತತ ಪ್ರಯತ್ನ ನಡೆಯುತ್ತಿದೆ. ಅಸ್ಸಾಂ ಗಡಿ ಭಾಗದಲ್ಲಿ ಮಾತ್ರಾ ಅಡಿಕೆ ಕಳ್ಳ ಸಾಗಾಟಕ್ಕೆ ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ. ಇದೀಗ ಮತ್ತೆ 235 ಚೀಲದ ಸುಮಾರು 52,64,000 ರೂಪಾಯಿ ಮೌಲ್ಯದ ಅಡಿಕೆಯನ್ನು ಅಸ್ಸಾಂ ಗಡಿ ಭದ್ರತಾ ಪಡೆಯ ಸಿಬಂದಿಗಳು ವಶಕ್ಕೆ ಪಡೆದಿದ್ದಾರೆ.

Advertisement
Advertisement

ಅಸ್ಸಾಂನ ಮಿಜೋರಾಂನ ಚಂಪೈ ಜಿಲ್ಲೆಯಿಂದ ದಾಸ್ತಾನು ಇರಿಸಿದ್ದ 235  ಚೀಲದ ಸುಮಾರು 52,64,000 ರೂಪಾಯಿ ಮೌಲ್ಯದ ಅಡಿಕೆಯನ್ನು ಮಂಗಳವಾರ ಅಸ್ಸಾಂ ಗಡಿ ಭದ್ರತಾ ಪಡೆಯ ಸಿಬಂದಿಗಳು ವಶಕ್ಕೆ ಪಡೆದಿದ್ದಾರೆ. ಇಷ್ಟೇ ಅಲ್ಲ, ಈ ಗಡಿ ಭಾಗದ ಮೂಲಕ ಅಕ್ರಮವಾಗಿ ಮರ ಸಾಗಾಟ, ಹೆರಾಯಿನ್‌ ಸೇರಿದಂತೆ ಮಾದಕ ವಸ್ತುಗಳ ಸಾಗಾಟವಾಗುತ್ತಿರುವ ಕಾರಣದಿಂದ ಅಸ್ಸಾಂ ಗಡಿಯಲ್ಲಿ ಗಡಿಭದ್ರತಾ ಸಿಬಂದಿಗಳು ಹದ್ದಿನ ಕಣ್ಣು ಇರಿಸಿದ್ದಾರೆ. ಹೀಗಾಗಿ ಅಡಿಕೆ ಕೂಡಾ ಅಕ್ರಮವಾಗಿ ಸಾಗಾಟವಾಗಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನ್ನು ತಪ್ಪಿಸಿ ಸಣ್ಣ ಪ್ರಮಾಣದಲ್ಲಿ ಅಡಿಕೆ ಅಸ್ಸಾಂ ಮೂಲಕ ಭಾರತದೊಳಕ್ಕೆ ಪ್ರವೇಶ ಮಾಡಿದರೂ ಭಾರೀ ಪ್ರಮಾಣದಲ್ಲಿ ಅಡಿಕೆ ಭಾರತದೊಳಕ್ಕೆ ಈಗ ಪ್ರವೇಶಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತದ ಅಡಿಕೆ ಧಾರಣೆ ಮೇಲೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ.

ಕಳೆದ ಕೆಲವು ದಿನಗಳಲ್ಲಿ ಅಸ್ಸಾಂ ಗಡಿ ಭದ್ರತಾ ಪಡೆಯುವ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕಳ್ಳಸಾಗಣೆ ಮಾಡಲು ಉದ್ದೇಶಿಸಿರುವ ವಿವಿಧ ಸರಕುಗಳನ್ನು ವಶಪಡಿಸಿಕೊಂಡಿದೆ. ಅದರಲ್ಲಿ ಅಡಿಕೆಯೂ ಸೇರಿದೆ. ಈಚೆಗೆ  ಕಳ್ಳಸಾಗಣೆ ಚಟುವಟಿಕೆಗಳು ಅಸ್ಸಂ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಈ ಕಾರಣದಿಂದ ಅಧಿಕಾರಿಗಳು ಆಗಾಗ ಧಾಳಿ ಮಾಡುತ್ತಿದ್ದಾರೆ. ಇದೇ ವೇಳೆ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ 324 ಗ್ರಾಂ ಹೆರಾಯಿನ್  ವಶಪಡಿಸಿಕೊಂಡಿದೆ. ಇದುವರೆಗೆ ವಶಪಡಿಸಿಕೊಂಡ ವಸ್ತುವಿನ ಅಂದಾಜು  ಮೌಲ್ಯ 1,45,80,000 ರೂಪಾಯಿ ಎಂದು ಇಲಾಖೆ ಹೇಳಿದೆ.

ಅಸ್ಸಾಂ ಮೂಲಕ ಭಾರತದೊಳಕ್ಕೆ ಅಡಿಕೆ ಪ್ರವೇಶ ಕಷ್ಟವಾಗುತ್ತಿದೆ. ಆದರೆ ಅಡಿಕೆ ಬೇಡಿಕೆ ಹೆಚ್ಚಿದೆ. ಹಾಗಿದ್ದರೂ ಅಡಿಕೆ ಧಾರಣೆ ಏಕೆ ಏರುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಸದ್ಯ ಮಾರ್ಚ್‌ ಅಂತ್ಯದ ತಿಂಗಳಾದ್ದರಿಂದ ಹಣದ ಓಡಾಟವಾಗುತ್ತಿಲ್ಲ. ಈ ಕಾರಣದಿಂದ ಅಡಿಕೆ ಬೇಡಿಕೆ ಇದ್ದರೂ ಹಣದ ಕೊರತೆ ಮಾರುಕಟ್ಟೆ ವಲಯಕ್ಕೆ ಕಾಡಿದೆ. ಎಪ್ರಿಲ್‌ ಆರಂಭದ ನಂತರ ಧಾರಣೆ ಏರಿಕೆಯಾಗುತ್ತದೆ. ಈ ಬಾರಿ ಹಂತ ಹಂತವಾಗಿಯೇ ಅಡಿಕೆ ಮಾರುಕಟ್ಟೆ ಏರಿಕೆಯತ್ತ ಹಾಗೂ ವಿಪರೀತವಾಗಿ ಅಡಿಕೆ ಧಾರಣೆ ಏರಿಕೆಯಾಗದಂತೆ , ಸ್ಥಿರತೆ ಕಡೆಗೆ ಹೆಚ್ಚು ಗಮನ ನೀಡಲು ಮಾರುಕಟ್ಟೆ ವಲಯ ಚಿಂತನೆ ನಡೆಸಿದೆ. ಆದರೆ ಖಾಸಗಿ ವ್ಯಾಪಾರಿಗಳು ದಿಢೀರನೆ ಅಡಿಕೆ ಮಾರುಕಟ್ಟೆ ಏರಿಕೆ ಅಥವಾ ಇಳಿಕೆ ಮಾಡಿದರೆ ಬೆಳೆಗಾರರು ಒಮ್ಮೆಲೇ ಅಡಿಕೆಯನ್ನು ಮಾರುಕಟ್ಟೆಗೆ ತಂದರೆ ಸಮಸ್ಯೆಯಾಗಲಿದೆ ಎನ್ನುವುದು  ಮಾರುಕಟ್ಟೆ ತಜ್ಞರ ಅಭಿಮತ.ʼ

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ 63 ಕೆರೆಗಳು ಭರ್ತಿ
May 22, 2025
9:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group