MIRROR EXCLUSIVE | ಅಡಿಕೆ ಬೆಳೆಗೆ ಇನ್ನೊಂದು ರೋಗ | ಮರ್ಕಂಜದಲ್ಲಿ ಕಂಡು ಬಂದಿದೆ ಅಡಿಕೆ ಮರದ ಎಲೆ ಚುಕ್ಕೆ ರೋಗ | ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಭೇಟಿ |

July 27, 2021
10:35 PM
ಅಡಿಕೆ ಬೆಳೆಗಾರರಿಗೆ ಇನ್ನೊಂದು ಆತಂಕ ಎದುರಾಗಿದೆ. ಅಡಿಕೆ ಹಳದಿ ಎಲೆ ರೋಗ , ಅಡಿಕೆ ಬೇರು ಹುಳದ ಜೊತೆಗೆ ಇದೀಗ ಎಲೆಚುಕ್ಕೆ ರೋಗವೂ ಕಂಡುಬಂದಿದೆ. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಯತೀಶ್‌ ಎಂಬವರ ತೋಟದಲ್ಲಿ ಈ ರೋಗ ಕಂಡುಬಂದಿದ್ದು ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ರೋಗದ ನಿಯಂತ್ರಣಕ್ಕಾಗಿ ಪರಿಹಾರ ಮಾರ್ಗಗಳನ್ನೂ ಸೂಚಿಸಿದ್ದಾರೆ.
ಹಳದಿ, ಬೇರು ಹುಳ, ಸೇರಿದಂತೆ ಹಲವಾರು ರೋಗ ಬಾಧೆಯಿಂದ ಕಂಗೆಟ್ಟಿರುವ ಅಡಿಕೆ ಕೃಷಿಗೆ ಮತ್ತೊಂದು ರೋಗ ಬಾಧೆ ಕಂಡು ಬಂದಿದ್ದು ಆತಂಕ ಸೃಷ್ಠಿಸಿದೆ. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಕೆಲವು ಅಡಿಕೆ ತೋಟಗಳಲ್ಲಿ ಈ ರೋಗ ಬಾಧೆ ಕಂಡು ಬಂದಿದೆ. ಅಡಿಕೆ ಸೋಗೆಯ ಕೆಳಭಾಗದಲ್ಲಿ ಸಣ್ಣ ಚುಕ್ಕೆಗಳು ಕಾಣಿಸಿ ಕೊಳ್ಳುತ್ತವೆ.ನಿಧಾನವಾಗಿ ಅವುಗಳ ಗಾತ್ರ ವಿಸ್ತರಿಸಲ್ಪಡುತ್ತದೆ.ನಂತರ ಅದು ಒಣಗಿ ತೂತುಗಳು ಉಂಟಾಗುತ್ತವೆ.ಅಂತಹ ಚುಕ್ಕೆ ,ತೂತುಗಳ ಸಂಖ್ಯೆ ತೀರಾ ಹೆಚ್ಚಾದಾಗ ಸೋಗೆ ಒಣಗಿದಂತೆ ಕಾಣಿಸುತ್ತದೆ.ಅಡಿಕೆ ಮರದ ಕೆಳಭಾಗದ ಸೋಗೆ ಮೊದಲು ಕಾಟಕ್ಕೆ ಈಡಾಗುವುದು.ನಂತರ ಅದರ ಮೇಲಿನ ಸೋಗೆ.ಹೀಗೆ ವಿಸ್ತರಿಸಲ್ಪಡುತ್ತಾ ಹೋಗುತ್ತದೆ.ಯಾವುದೇ ಪರಿಹಾರ ಕ್ರಮ ಕೈಗೊಳ್ಳದೇ ಇದ್ದರೆ ಮರ ಸಾಯಲೂ ಬಹುದು ಎಂಬ ಆತಂಕ ಉಂಟಾಗಿದೆ.ಆಕ್ರಮಣಕಾರಿ ಸ್ವಭಾವದ ಶಿಲೀಂದ್ರ ಕಾಟ ಇದು.ಪಸರಿಸುವುದು ಅತಿ ಶೀಘ್ರವಾಗಿ .ಒಂದು ಕಡೆ ಕಾಣಿಸಿದರೆ ಸುತ್ತಮುತ್ತಲೆಲ್ಲ ಸುಪ್ತವಾಗಿರುವ ಸಾಧ್ಯತೆ ಇದೆ.
ಮರ್ಕಂಜ ಗ್ರಾಮದ ಯತೀಶ ಕಂಜಿಪಿಲಿ ಅವರ ತೋಟದಲ್ಲಿ ಈ ಸಮಸ್ಯೆ ಕಂಡುಬಂದಿತ್ತು, ಹೀಗಾಗಿ ಅವರು ಸಾಮಾಜಿಕ ಜಾಲತಾಣದ ಕೃಷಿ ಗುಂಪುಗಳಲ್ಲಿ  ಈ ಬಗ್ಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ವಿವಿಧ ಅಭಿಪ್ರಾಯಗಳು ಬಂದಿದ್ದವು. ಯತೀಶ ಕಂಜಿಪಿಲಿಯವರ ಈ ತೋಟ ಸುಮಾರು ಆರು ವರ್ಷ ವಯಸ್ಸಿನದ್ದು. ಗಿಡ ನೆಟ್ಟ ಆರಂಭದಲ್ಲಿ ಕೆಲವು ವರ್ಷ ಅಲಸಂಡೆಯನ್ನು ಉಪಬೆಳೆಯಾಗಿ‌ ಬೆಳೆದಿದ್ದರು.ಉತ್ತಮ ಫಸಲೂ ಸಿಕ್ಕಿತ್ತಂತೆ.ಇದೀಗ ತೋಟದ ಅಡಿಕೆ ಗಿಡ ಗಮನಿಸುವಾಗ ಸಾರಜನಕ ಹೆಚ್ಚಳದ ಲಕ್ಷಣ ,ಕಾಂಡ ಒಡೆಯುವಿಕೆ , ಕಾಣಿಸುತ್ತಿತ್ತು. ತಮ್ಮ ತೋಟದ ಈ ಸಮಸ್ಯೆ ಬಗ್ಗೆ  ಸಿಪಿಸಿಐಆರ್‌ ವಿಜ್ಞಾನಿಗಳ ಗಮನಕ್ಕೂ ತಂದಿದ್ದರು. ಈ ವಿಷಯ ತಿಳಿದು ಕೃಷಿಕರು ನೀಡಿರುವ ಮಾಹಿತಿಯ ಹಿನ್ನಲೆಯಲ್ಲಿ ಸಿಪಿಸಿಆರ್ ಐ ವಿಜ್ಞಾನಿಗಳಾದ ಸಸ್ಯ ರೋಗ ಶಾಸ್ತ್ರಜ್ಞ ಡಾ.ಥವಾಪ್ರಕಾಶ್‌ ಪಾಂಡ್ಯನ್‌, ತೋಟಗಾರಿಕೆ ವಿಜ್ಞಾನಿ ಡಾ.ಭವಿಷ್ಯ ,ಕೀಟ ಶಾಸ್ತ್ರಜ್ಞ  ಡಾ.ಶಿವಾಜಿ ತುಬೆ ಅವರ ತಂಡ ಮರ್ಕಂಜದ ವಿವಿಧ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಗದಿಂದ ತೋಟದೊಳಗೆ ತುದಿ ಸತ್ತು ಹೋದ ಅಡಿಕೆ ಗಿಡಗಳನ್ನು ವಿಜ್ಞಾನಿಗಳ ತಂಡ ತುಂಡರಿಸಿದಾಗ  ಒಳಗಡೆ ಒಂದು ಸತ್ತು‌ ,ಕೊಳೆಯುತ್ತಿದ್ದ ಕೆಂಪು ಮೂತಿ ದುಂಬಿ ಮತ್ತು ಇನ್ನೊಂದು ಅದರ ಲಾರ್ವಾ ಪ್ರತ್ಯಕ್ಷವಾಗಿದೆ.
ಆದ್ದರಿಂದ ಒಂದೆಡೆ ಈ ರೋಗ ಕಾಣಿಸಿಕೊಂಡರೆ ಇಡೀ ತೋಟ,ಜೊತೆಗೆ ಸುತ್ತ ಮುತ್ತಲಿನವರೂ ಈ ರೋಗದ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಆರಂಭಿಕ ಹಂತದಲ್ಲಿ ನಿಯಂತ್ರಣಕ್ಕಾಗಿ ಬೋರ್ಡೋ ದ್ರಾವಣವನ್ನು ಅಡಿಕೆ ಸೋಗೆಯ ಕೆಳಭಾಗಕ್ಕೆ ಸಿಂಪರಣೆ ಮಾಡಬೇಕು.ತೀವ್ರವಾಗಿ ಒಣಗಿದ ಸೋಗೆಗಳನ್ನು ಕತ್ತರಿಸಬೇಕು.ರೋಗ ತೀವ್ರತೆ ಹೆಚ್ಚಿರುವ ತೋಟಗಳಿಗೆ ಬೋರ್ಡೋ ಮಿಶ್ರಣವನ್ನು ಗೊನೆಗಳಿಗೆ ಸಿಂಪರಣೆ ಮಾಡುವಾಗ ಎಲೆಗಳಿಗೂ ಸಿಂಪರಣೆ ಮಾಡುವುದು ಒಳಿತು.ರೋಗ ತೀವ್ರತೆ ಹೆಚ್ಚಿರುವ ತೋಟಗಳಲ್ಲು ಸೋಗೆಗಳ ಕೆಳಭಾಗಕ್ಕೆ Hexaconazole (1ml/l) ಸಿಂಪಡಿಸ ಬಹುದು ಎಂದು ವಿಜ್ಞಾನಿಗಳ ತಂಡ ಸಲಹೆ ನೀಡಿದ್ದಾರೆ.
ಅಡಿಕೆ ಕೃಷಿಕರು  ಹಳದಿ ರೋಗ, ಬೇರು ಹುಳದ ಸಮಸ್ಯೆಯಿಂದ ಬಳಲುತ್ತಿರುವಾಗ ಇದೀಗ ಕಂಡುಬಂದಿರುವ ಈ ಸಮಸ್ಯೆಯ ಕಡೆಗೆ ಕೃಷಿಕರು ಗಮನಹರಿಸಬೇಕಿದೆ ಎಂದು ಕೃಷಿಕ ರಮೇಶ್‌ ದೇಲಂಪಾಡಿ ಅವರು  ಹೇಳುತ್ತಾರೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group