Advertisement
MIRROR FOCUS

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

Share

ಭಾರತದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾದ ಅಡಿಕೆಯಲ್ಲಿ  ತಳಿಗಳ ಪ್ರಕಾರ ಆಲ್ಕಲಾಯ್ಡ್‌ಗಳ ಪ್ರಮಾಣದಲ್ಲಿ ಗಮನಾರ್ಹ ವ್ಯತ್ಯಾಸವಿದೆ ಎಂಬುದನ್ನು ಹೊಸ ವೈಜ್ಞಾನಿಕ ಅಧ್ಯಯನ ಬಹಿರಂಗಪಡಿಸಿದೆ. ಐಸಿಎಆರ್–ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI) ನೇತೃತ್ವದಲ್ಲಿ ನಡೆದ ಈ ಸಂಶೋಧನೆಗೆ ಜಾಗತಿಕ ಖ್ಯಾತಿಯ Scientific Reports (Nature Portfolio) ಜರ್ನಲ್‌ನಲ್ಲಿ ಸ್ಥಾನ ದೊರೆತಿದೆ. ಅಧ್ಯಯನವು 2026 ರ ಜುಲೈ 11ರಂದು ಪ್ರಕಟವಾಗಿದೆ.

ಅಧ್ಯಯನದಲ್ಲಿ 15 ಅಡಿಕೆ ತಳಿಗಳನ್ನು ಹೂಬಿಟ್ಟ ನಂತರ 6 ರಿಂದ 12 ತಿಂಗಳವರೆಗೆ ಪರಿಶೀಲಿಸಿ, ಪ್ರಮುಖ ನಾಲ್ಕು ಪೈರಿಡಿನ್ ಆಲ್ಕಲಾಯ್ಡ್‌ಗಳಾದ ಅರೆಕೋಲಿನ್ (Arecoline), ಗುವಾಕೋಲಿನ್ (Guvacoline), ಗುವಾಸಿನ್ (Guvacine) ಮತ್ತು ಅರಿಕೈಡಿನ್ (Arecaidine) ಪ್ರಮಾಣವನ್ನು ವಿಶ್ಲೇಷಿಸಲಾಗಿದೆ.

ಯಾವ ತಳಿಗಳಲ್ಲಿ ಹೆಚ್ಚು? :  ಸಂಶೋಧನೆಯ ಪ್ರಕಾರ ಮಂಗಲ (Mangala), ಸುಮಂಗಲ (Sumangala),  ಮಧುರಮಂಗಲ (Madhuramangala) ತಳಿಗಳಲ್ಲಿ ಬೆಳವಣಿಗೆಯ ವಿವಿಧ ಹಂತಗಳಲ್ಲಿಯೂ ಅರೆಕೋಲಿನ್ ಪ್ರಮಾಣ ಹೆಚ್ಚು ಕಂಡುಬಂದಿದೆ. ಅದರಲ್ಲೂ ಮಂಗಲ ತಳಿ ಬಹುತೇಕ ಎಲ್ಲಾ ಪ್ರಮುಖ ಆಲ್ಕಲಾಯ್ಡ್‌ಗಳಲ್ಲಿ ಅತ್ಯಧಿಕ ಪ್ರಮಾಣವನ್ನು ಹೊಂದಿರುವ ತಳಿಯಾಗಿ ಗುರುತಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಶತಮಂಗಲ (Shatamangala) ಹಾಗೂ ಸಿರ್ಸಿ (Sirsi) ತಳಿಗಳಲ್ಲಿ ಬಹುತೇಕ ಎಲ್ಲಾ ಆಲ್ಕಲಾಯ್ಡ್‌ಗಳ ಪ್ರಮಾಣ ಕಡಿಮೆ ದಾಖಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಅಧ್ಯಯನದ ಪ್ರಕಾರ ಅರೆಕೋಲಿನ್ ಪ್ರಮಾಣವು ಅಡಿಕೆ ಹಣ್ಣಾಗುತ್ತಿದ್ದಂತೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ ಗುವಾಕೋಲಿನ್ ಪ್ರಮಾಣವು 9–10 ತಿಂಗಳ ಹಂತದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ. ಅರಿಕೈಡಿನ್ ಪ್ರಮಾಣವು ಎರಡು ಹಂತಗಳಲ್ಲಿ ಏರಿಳಿತ ತೋರಿಸಿದ್ದು, ಮೋಹಿತ್‌ನಗರ ಹಾಗೂ ಮಂಗಲ ತಳಿಗಳಲ್ಲಿ ಹೆಚ್ಚಿನ ಪ್ರಮಾಣ ಕಂಡುಬಂದಿದೆ.

ಸಂಶೋಧನೆಯ ಮಹತ್ವ :  ಆಲ್ಕಲಾಯ್ಡ್ ವಿಶ್ಲೇಷಣೆಯ ಜೊತೆಗೆ ಸಂಶೋಧಕರು ಅಡಿಕೆಯ ಭೌತ-ರಾಸಾಯನಿಕ ಗುಣಗಳು, ಕೊಬ್ಬಿನ ಆಮ್ಲಗಳ (Fatty acids) ಸಂಯೋಜನೆ, ಆಂಟಿಆಕ್ಸಿಡೆಂಟ್ ಚಟುವಟಿಕೆ ಹಾಗೂ ಒಟ್ಟು ಪಾಲಿಫಿನಾಲ್ ಪ್ರಮಾಣವನ್ನೂ ಮೌಲ್ಯಮಾಪನ ಮಾಡಿದ್ದಾರೆ. ಈ ಅಧ್ಯಯನವು ಭವಿಷ್ಯದಲ್ಲಿ ತಳಿ ಆಯ್ಕೆ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ ಹಾಗೂ ಅಡಿಕೆ ತಳಿ ಸುಧಾರಣಾ (Breeding) ಕಾರ್ಯಕ್ರಮಗಳಿಗೆ ವೈಜ್ಞಾನಿಕ ಆಧಾರ ಒದಗಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮಾತ್ರವಲ್ಲ ಇಂದು ಅಡಿಕೆ ಹಾನಿಕಾರಕ ಎನ್ನುವ ಆರೋಪದ ಸಂದರ್ಭದಲ್ಲೂ ಅಡಿಕೆ ತಳಿಯಿಂದಲೇ ಈ ಅಧ್ಯಯನ ನಡೆಯುತ್ತಿರುವುದು ಸ್ವಾಗತಾರ್ಹವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

A new ICAR-CPCRI study published in Scientific Reports reveals significant genotype-dependent differences in alkaloid content among arecanut varieties. ‘Mangala’ showed the highest concentrations of key alkaloids, while ‘Shatamangala’ and ‘Sirsi’ consistently recorded lower levels, providing valuable insights for breeding and cultivar selection.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

19 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

1 day ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

2 days ago