Advertisement
ಪ್ರಮುಖ

ಐಎಆರ್‌ಸಿಯಿಂದ ಹೊಸ ಅಧ್ಯಯನ | ಭಾರತದ ಅಡಿಕೆ ಬೆಳೆಯೇ ಟಾರ್ಗೆಟ್..!?‌ | ಎಚ್ಚರಿಕೆ ವಹಿಸದಿದ್ದರೆ ಭವಿಷ್ಯದಲ್ಲಿ ಅಡಿಕೆ ಬೆಳೆಯ ಮೇಲೆಯೇ ಅಪಾಯ..! |

Share

ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ನೇತೃತ್ವದ ಮತ್ತು ದಿ ಲ್ಯಾನ್ಸೆಟ್ ಆಂಕೊಲಾಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಕ್ಯಾನ್ಸರ್‌ ಪ್ರಕರಣಗಳಲ್ಲಿ ಅಡಿಕೆ ಹಾಗೂ ಹೊಗೆರಹಿತ ತಂಬಾಕು ಕಾರಣ ಎಂದು ಹೇಳಿದೆ. IARC ಯು WHO ದ ಅಂಗಸಂಸ್ಥೆ ಅಥವಾ  ಏಜೆನ್ಸಿಯಾಗಿದ್ದು, ಕ್ಯಾನ್ಸರ್ ಕುರಿತು ಸಂಶೋಧನೆ ನಡೆಸುತ್ತದೆ. ಪ್ರತಿ ಐದು ವರ್ಷಗಳಿಗೊಮ್ಮೆ ವಿಶ್ವ ಕ್ಯಾನ್ಸರ್ ವರದಿಯನ್ನು ಇದು ಪ್ರಕಟಿಸುತ್ತದೆ. ಈ ಬಾರಿಯ ವರದಿಯಲ್ಲಿ ಜಾಗತಿಕವಾಗಿ ಹೊಗೆರಹಿತ ತಂಬಾಕಿನಿಂದ ಉಂಟಾಗುವ 1,20,200 ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ 83,400 ಪ್ರಕರಣಗಳನ್ನು ಭಾರತದಿಂದ ದಾಖಲಿಸಿದೆ. 2022 ರಲ್ಲಿ ಈ ಅಧ್ಯಯನ ನಡೆಸಿದ್ದು ಅಡಿಕೆಯ ಮೇಲೆ ಋಣಾತ್ಮಕ ಅಭಿಪ್ರಾಯವನ್ನು ನೀಡಿದೆ.…..ಮುಂದೆ ಓದಿ….

Advertisement
Advertisement
Advertisement

ತಂಬಾಕು, ಗುಟ್ಕಾ ಹಾಗೂ ಅಡಿಕೆಯಂತಹ ಹೊಗೆರಹಿತ ತಂಬಾಕು ಉತ್ಪನ್ನಗಳ ಹೆಚ್ಚಿನ ಬಳಕೆಯಿಂದ  ದಕ್ಷಿಣ ಏಷ್ಯಾದ ದೇಶಗಳಲ್ಲಿ ಭಾರತವು ಅತಿ ಹೆಚ್ಚು ಬಾಯಿಯ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದೆ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.

Advertisement

ಹೊಗೆರಹಿತ ತಂಬಾಕು ಮತ್ತು ಅಡಿಕೆ ಉತ್ಪನ್ನಗಳು ಪ್ರಪಂಚದಾದ್ಯಂತ ವಿವಿಧ ರೂಪಗಳಲ್ಲಿ ಗ್ರಾಹಕರಿಗೆ ಲಭ್ಯವಿವೆ, ಆದರೆ ಹೊಗೆಯಿಲ್ಲದ ತಂಬಾಕು ಮತ್ತು ಅಡಿಕೆ ಸೇವನೆಯು ಬಾಯಿಯ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗಿದೆ ಎಂದು ಕ್ಯಾನ್ಸರ್ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್ ರುಮ್ಗೇ ಹೇಳಿದ್ದಾರೆ.

Advertisement

“ಪ್ರಪಂಚದಾದ್ಯಂತ 120,000 ಕ್ಕೂ ಹೆಚ್ಚು ಜನರು ಬಾಯಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಅದು ಹೊಗೆರಹಿತ ತಂಬಾಕು ಅಥವಾ ಅಡಿಕೆ ಬಳಸುವುದರಿಂದ ಉಂಟಾಗಿರುವುದು ಹೆಚ್ಚಾಗಿದೆ. ಹೀಗಾಗಿ  ಆರೋಗ್ಯ ರಕ್ಷಣೆಯ ಮೇಲೆ  ಪ್ರಭಾವ ಬೀರುವ  ಹೊಗೆರಹಿತ ತಂಬಾಕು ಮತ್ತು ಅಡಿಕೆ ಸೇವನೆಯನ್ನು ಕಡಿಮೆ ಮಾಡಲು ತಡೆಗಟ್ಟುವ  ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ, ”ಎಂದು ಡಾ.ಹ್ಯಾರಿಯೆಟ್ ರುಮ್ಗೇ ಹೇಳಿದ್ದಾರೆ.

IARC ಅಧ್ಯಯನವು 2022 ರಲ್ಲಿ 3,89,800 ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ 1,20,200 ಹೊಗೆರಹಿತ ತಂಬಾಕು ಮತ್ತು ಅಡಿಕೆ ಸೇವನೆಯಿಂದ ಉಂಟಾಗಿದೆ ಎಂದು ದಾಖಲಿಸಿದೆ. ಹೀಗಾಗಿ ಹೊಗೆರಹಿತ ತಂಬಾಕು ಮತ್ತು ಅಡಿಕೆ ಬಳಕೆಯನ್ನು ತಡೆಯುವ ಮೂಲಕ ಎಲ್ಲಾ ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು (31%) ತಪ್ಪಿಸಬಹುದು ಎಂದೂ ವರದಿ ಉಲ್ಲೇಖಿಸಿದೆ. ಹೊಗೆರಹಿತ ತಂಬಾಕು ಮತ್ತು ಅಡಿಕೆ ಬಳಕೆಯಿಂದ ಉಂಟಾಗುವ ಎಲ್ಲಾ ಬಾಯಿಯ ಕ್ಯಾನ್ಸರ್ ಪ್ರಕರಣಗಳಲ್ಲಿ 95% ಕ್ಕಿಂತ ಹೆಚ್ಚು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸಿದೆ. ಭಾರತದಲ್ಲಿ 83,400 ಪ್ರಕರಣ, ಭಾರತದ ನಂತರ ಬಾಂಗ್ಲಾದೇಶ (9,700), ಪಾಕಿಸ್ತಾನ (8,900), ಚೀನಾ (3,200), ಮ್ಯಾನ್ಮಾರ್ (1,600), ಶ್ರೀಲಂಕಾ (1,300), ಇಂಡೋನೇಷ್ಯಾ (990), ಮತ್ತು ಥೈಲ್ಯಾಂಡ್ (785) ಪ್ರಕರಣಗಳು ದಾಖಲಾಗಿದೆ.

Advertisement

ಜಾಗತಿಕವಾಗಿ, ಅಂದಾಜು 300 ಮಿಲಿಯನ್ ಜನರು ಹೊಗೆರಹಿತ ತಂಬಾಕು ಬಳಸುತ್ತಾರೆ ಮತ್ತು 600 ಮಿಲಿಯನ್ ಜನರು ಅಡಿಕೆ ಬಳಸುತ್ತಾರೆ. ದಕ್ಷಿಣ-ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರ ಹೆಚ್ಚಿನ ದೇಶಗಳಲ್ಲಿ ಅಡಿಕೆ ಬಳಕೆಯಲ್ಲಿದೆ. ಹೊಗೆರಹಿತ ತಂಬಾಕು ಮತ್ತು ಅಡಿಕೆ ಉತ್ಪನ್ನಗಳು ಗ್ರಾಹಕರಿಗೆ ವಿವಿಧ ರೂಪಗಳಲ್ಲಿ ಲಭ್ಯವಿದೆ.

ಬಾಂಗ್ಲಾದೇಶದಲ್ಲಿ, ತಂಬಾಕಿನೊಂದಿಗೆ ಅಡಿಕೆ ಸೇವನೆಯು 67% ಬಾಯಿಯ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ.  ಭಾರತದಲ್ಲಿ, ಅಡಿಕೆ 30% ಮತ್ತು ತಂಬಾಕಿನೊಂದಿಗೆ ಅಡಿಕೆ ಸೇವನೆಯು 28%  ಕಾರಣವಾಗಿದೆ ಎಂದು ವರದಿ ಹೇಳಿದೆ.

Advertisement

ಈಗಾಗಲೇ ತಂಬಾಕು ಧೂಮಪಾನದ ನಿಯಂತ್ರಣವು ಸುಧಾರಿಸಿದೆ, ಹೊಗೆರಹಿತ ತಂಬಾಕು ಸೇವನೆಯ ತಡೆಗಟ್ಟುವಿಕೆ ಸ್ಥಗಿತಗೊಂಡಿದೆ ಮತ್ತು ಅಡಿಕೆ ಇನ್ನೂ ನಿಯಂತ್ರಣವಾಗಿಲ್ಲ ಎಂದು ಕ್ಯಾನ್ಸರ್‌ ವಿಭಾಗದ ವೈದ್ಯ ಡಾ.ಹ್ಯಾರಿಯೆಟ್ ರುಮ್ಗೇ ವರದಿಯ ಕೊನೆಯಲ್ಲಿ ಶಿಫಾರಸು ಮಾಡಿದ್ದಾರೆ.

ಇಡೀ ವರದಿಯಲ್ಲಿ 2022 ರಲ್ಲಿ  ಭಾರತದಿಂದಲೇ ಹೆಚ್ಚು ಜನರ ಸ್ಯಾಂಪಲ್‌ ಹಾಗೂ ಅಭಿಪ್ರಾಯ ಪಡೆಯಲಾಗಿದೆ. ಅಂದರೆ ಭಾರತದಲ್ಲಿ ಅಡಿಕೆ ಬೆಳೆ ವಿಸ್ತರಣೆ ಹಾಗೂ ಧಾರಣೆ ಏರಿಕೆಯ ನಡುವೆ ಅಡಿಕೆ ಬೆಳೆ ನಿಯಂತ್ರಣ ಹಾಗೂ ನಿರ್ಬಂಧ ಮಾಡುವ ತಂತ್ರದ ಭಾಗವೇ ಎಂಬ ಶಂಕೆಯೂ ಇದೆ. ಈ ಹಿಂದೆ ಅಡಿಕೆ ಹಾನಿಕಾರಕ ಎಂದು WHO ವರದಿಯ ಬಳಿಕ ಇಂದಿಗೂ ಅಡಿಕೆ ಹಾನಿಕಾರಕವಲ್ಲ ಎಂದು ಸಾಬೀತು ಮಾಡಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ನಡೆದ ಅಧ್ಯಯನದಲ್ಲೂ ಅಡಿಕೆಯೂ ಹಾನಿಕಾರಕ ಎಂದು ಉಲ್ಲೇಖಿಸಲಾಗಿದೆಯಲ್ಲದೆ, ಈ ಬಾರಿ ಅಡಿಕೆಯನ್ನೂ ನಿಯಂತ್ರಣ ಮಾಡಬೇಕು ಎಂದೂ ಶಿಫಾರಸು ಮಾಡಲಾಗಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದ ಅಡಿಕೆ ಬೆಳೆಯ ಮೇಲೆ ತೂಗುಗತ್ತಿ ಇದೆ. (Source :WHO-IARC Repot )

Advertisement

The study led by the International Agency for Research on Cancer (IARC) and published in The Lancet Oncology journal showed that India logged 83,400 of the 120,200 oral cancer cases globally caused by smokeless tobacco (chewed, sucked, inhaled, applied locally, or ingested) and areca nut (seed of the areca palm) in 2022.

Advertisement

Arecanuts have been a traditional staple in rural India for generations, commonly utilized in religious ceremonies and practices. There is no evidence to suggest that consuming Arecanuts in their natural form is harmful. In fact, Arecanuts are also incorporated in Ayurvedic medicine. Despite this long history of safe consumption, recent reports have raised concerns among farmers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

18 hours ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

1 day ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

2 days ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

2 days ago

ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…

2 days ago

ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?

ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…

2 days ago