ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ತರಬೇತಿ ಶಿಬಿರ ಶುಕ್ರವಾರ ಉಳುವಾರು ರಾಧಾಕೃಷ್ನ ಅವರ ಅಡಿಕೆ ತೋಟದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಿಂದ ದೋಟಿ ಖರೀದಿ ಹಾಗೂ ಸಾಲ ಯೋಜನೆಯನ್ನು ನೀಡಲು ಚಿಂತನೆ ನಡೆಸಲಾಗುವುದು ಎಂದರು.
ಪೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಹಾಗೂ ಸಿಂಪಡಣೆಯಲ್ಲಿ ಈಗ ಮಹಿಳೆಯರೂ ಆಸಕ್ತರು. ಅರಂತೋಡು ತೊಡಿಕಾನ ಸಹಕಾರಿ ಸಂಘ ಆಶ್ರಯದಲ್ಲಿ ನಡೆದ ತರಬೇತಿ ಶಿಬಿರ ನಡೆಯಿತು. #ಅಡಿಕೆ #arecanut #FiberPole #agriculture pic.twitter.com/uKv9hpci1M
— theruralmirror (@ruralmirror) March 26, 2022
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವತಿಯಿಂದ ಸಾಯ ಎಂಟರ್ ಪ್ರೈಸಸ್ ಪುತ್ತೂರು ಇವರ ಸಹಯೋಗದೊಂದಿಗೆ ನಡೆದ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರವನ್ನು ಕೃಷಿಕ ದೀಪಕ್ ಕುತ್ತಮೊಟ್ಟೆ ಉದ್ಘಾಟಿಸಿದರು. ಈ ಸಂದರ್ಭ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಾಯ ಎಂಟರ್ ಪ್ರೈಸಸ್ ನ ಗೋವಿಂದ ಪ್ರಕಾಶ್, ತರಬೇತುದಾರರಾದ ಮೂರೂರು ಕಲ್ಲಬ್ಬೆಯ ಆರ್ ಜಿ ಹೆಗಡೆ, ರಮೇಶ್ ಭಟ್ ಉಪಸ್ಥಿತರಿದ್ದರು.
ಮೂರೂರು ಕಲ್ಲಬ್ಬೆ ಗ್ರಾಮದ ಆರ್ ಜಿ ಹೆಗಡೆ ಹಾಗೂ ರಮೇಶ್ ಭಟ್ ಕಾರ್ಬನ್ ಫೈಬರ್ ದೋಟಿಯಲ್ಲಿ ಸುಲಭವಾಗಿ ಅಡಿಕೆ ಕೊಯ್ಲು ಹಾಗೂ ಸಿಂಪಡಣೆ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಶಿಬಿರದಲ್ಲಿ 10 ಮಂದಿ ತರಬೇತಿ ಪಡೆದರು.30 ಕ್ಕೂ ಅಧಿಕ ಕೃಷಿಕರು ಭಾಗವಹಿಸಿದರು. ಮಹಿಳೆಯರು ಕೂಡಾ ಶಿಬಿರದಲ್ಲಿ ಭಾಗವಹಿಸಿದರು. ಸಹಕಾರಿ ಸಂಘದ ಮೂಲಕ ವೈಯಕ್ತಿಕ ಅಥವಾ ರೈತ ಗುಂಪು ರಚಿಸಿ ಸಹಕಾರಿ ಸಂಘದಿಂದ ದೋಟಿ ಖರೀದಿಗೆ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗಿದೆ.