ಅಡಿಕೆ ತಿಂದು ಉಗುಳುವ ವಸ್ತು. ಭಾರತದ ಹಲವು ಕಡೆಗಳಲ್ಲಿ ಪಾರಂಪರಿಕವಾಗಿ ಬೆಳೆಯುವ, ಬೆಳೆದಿರುವ ಅಡಿಕೆ ಇಂದಿಗೂ ಅದೇ ಮಾದರಿಯಲ್ಲಿ ಬೆಳೆಯಲಾಗುತ್ತಿದೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಅಡಿಕೆಯ ಬಗ್ಗೆ ಋಣಾತ್ಮಕ ಭಾವನೆ ಹೆಚ್ಚುತ್ತಿದೆ. ಭಾರತದಲ್ಲಿ ಸದ್ಯ ಅಡಿಕೆ ಮಾರುಕಟ್ಟೆಗೆ ಯಾವುದೇ ಆತಂಕ ಇಲ್ಲದಿದ್ದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಡಿಕೆಯ ಬಗ್ಗೆ ವ್ಯಾಪಕವಾದ ತಪ್ಪು ಸಂದೇಶ ನೀಡಲಾಗುತ್ತಿದೆ. ಚೀನಾದಲ್ಲಿ ಅಡಿಕೆಯನ್ನು “ಸಾವಿನ ಹಣ್ಣು” ಎಂದು ಕರೆಯಲಾಗಿದೆ.
ಇದೇ ವೇಳೆ ಭಾರತದಲ್ಲಿ ಅಡಿಕೆ ಬೆಳೆ ವಿಸ್ತರಣೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಕ್ಯಾಂಪ್ಕೋ ಮಹಾಸಭೆಯಲ್ಲಿ ಸದಸ್ಯ ರಾಜಾರಾಮ ಭಟ್ ಅವರೂ ಇದೇ ಆತಂಕವನ್ನು ವ್ಯಕ್ತಪಡಿಸಿದ್ದರು. ತಮಿಳುನಾಡು, ಆಂದ್ರಪ್ರದೇಶದ ಕಡೆಗೆ ಲಕ್ಷಾಂತರ ಗಿಡಗಳು ರವಾನೆಯಾಗಿರುವುದು ಆತಂಕ ಎಂದು ಹೇಳಿದ್ದರು. ಈ ಆತಂಕದ ನಡುವೆಯೇ ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಅಡಿಕೆಯ ಬಗ್ಗೆ ಋಣಾತ್ಮಕ ಭಾವನೆ ಬಿತ್ತಲಾಗುತ್ತಿದೆ.
ಚೀನಾದಲ್ಲಿ ಇತ್ತೀಚೆಗೆ ಬಾಯಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಚೀನಾದ ಗಾಯಕಿಯೊಬ್ಬರು ಸಾಯುವ ಕೆಲ ಸಮಯದ ಮೊದಲು ಅಡಿಕೆ ತಿನ್ನಬೇಡಿ ಎಂದು ಹೇಳಿದ್ದರು. ಅಡಿಕೆಯಿಂದಲೇ ಕ್ಯಾನ್ಸರ್ ಹರಡಿದೆ ಎನ್ನುವುದು ಅಧ್ಯಯನದ ವಿಷಯವಾದರೂ ಕ್ಯಾನ್ಸರ್ ರೋಗಿಯೇ ಹೀಗೆ ಹೇಳಿರುವುದು ಭಾರೀ ಚರ್ಚೆಯ ವಿಷಯವಾಗಿದೆ. ಕಾರ್ಸಿನೋಜೆನ್ ಒಳಗೊಂಡಿರುವ ಕಾರಣ ಇದನ್ನು “ಸಾವಿನ ಹಣ್ಣು” ಎಂದು ಚೀನಾದಲ್ಲಿ ಕರೆಯಲಾಗಿದ್ದರೂ, ಚೀನಾದಲ್ಲಿ ಅಡಿಕೆ ಸೇವನೆಯು ಸ್ವಲ್ಪ ಹೆಚ್ಚೇ ಇದೆ. ಆದರೆ ದೊಡ್ಡ ಪ್ರಮಾಣದ ಮಾರಾಟ ನಿಯಂತ್ರಣವು ಇತ್ತೀಚೆಗೆ ಪ್ರಾರಂಭವಾಗಿದೆ. ಅಡಿಕೆ ತಿನ್ನುವುದು ಉತ್ತೇಜಕ ಮತ್ತು ಜೀರ್ಣಕಾರಿ ಪರಿಣಾಮವನ್ನು ಹೊಂದಿದೆ. ಆದರೆ ಕೆಲವು ಕಾರಣಗಳಿಂದ ಚೀನಾ ಸರ್ಕಾರವು ಇತ್ತೀಚೆಗೆ ಅಡಿಕೆ ಉತ್ಪನ್ನದ ಮೇಲೆ ವ್ಯಾಪಕವಾದ ಮಾರಾಟ ನಿರ್ಬಂಧಗಳನ್ನು ವಿಧಿಸಿದೆ. ಅಡಿಕೆಯಲ್ಲಿ ಒಳಗೊಂಡಿರುವ ಕಾರ್ಸಿನೋಜೆನ್ ಇದಕ್ಕೆ ಕಾರಣ. ಅಡಿಕೆಯಲ್ಲಿನ ಅರೆಕೋಲಿನ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟ ವರ್ಗ 1 ಕಾರ್ಸಿನೋಜೆನ್ ಆಗಿದೆ ಎಂದು ಚೀನಾ ಹೇಳಿಕೊಂಡಿದೆ. ಚೀನಾದ ಹುನಾನ್ ಪ್ರಾಂತ್ಯದಲ್ಲಿ 8,000 ಬಾಯಿ ಕ್ಯಾನ್ಸರ್ ರೋಗಿಗಳ ಸಮೀಕ್ಷೆಯು 90% ರಷ್ಟು ಅಡಿಕೆಯನ್ನು ಸೇವಿಸಿದೆ ಎಂದು ಕಂಡುಹಿಡಿದಿದೆ. ಹೀಗಾಗಿ ಚೀನಾ ಈಗ ಅಡಿಕೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನ ಮಾಡುತ್ತಿರುವುದು ಗಮನಿಸಬೇಕಾದ ಅಂಶ.ಈ ಹಿಂದೆ ಚೀನಾ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಡಿಕೆಯ ಜಾಹೀರಾತನ್ನು ನಿಷೇಧಿಸಿತ್ತು.
ಇದೆಲ್ಲದರ ನಡುವೆಯೂ ಅಡಿಕೆಯನ್ನು ಆರೋಗ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತಿದೆ. ಕೊರಿಯಾದಲ್ಲಿ ಅಡಿಕೆಯನ್ನು ಗಿಡಮೂಲಿಕೆ ಔಷಧಿ ಎಂದು ವರ್ಗೀಕರಿಸಲಾಗಿದೆ. ಹೀಗಾಗಿ 2018 ರಿಂದ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧಗಳಿಲ್ಲದೆ 67 ಟನ್ ಗಳಷ್ಟು ಅಡಿಕೆಯನ್ನೂ ಆಮದು ಮಾಡಿಕೊಂಡಿದೆ.
ಭಾರತದಲ್ಲೂ ಅಡಿಕೆಯನ್ನು ವಿವಿಧ ಕಡೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಆದರೆ ಬೇಡಿಕೆ ಹಾಗೂ ಸರಬರಾಜಿನಲ್ಲಿ ವ್ಯತ್ಯಾಸ ಇರುವುದರಿಂದ ಸದ್ಯ ಧಾರಣೆ ಉತ್ತಮವಾಗಿ. ಇನ್ನಷ್ಟು ವ್ಯಾಪಕವಾಗಿ ಅಡಿಕೆ ವಿಸ್ತರಣೆಯಾದರೆ ಅಡಿಕೆ ಮಾರುಕಟ್ಟೆಯಲ್ಲೂ ಆತಂಕ ಇದೆ. ಇದಕ್ಕಾಗಿ ಅಡಿಕೆ ಬೆಳೆ ವಿಸ್ತರಣೆ ಕಡಿಮೆಯಾಗಬೇಕು ಎನ್ನುವ ಅಭಿಪ್ರಾಯವೊಂದು ಆರಂಭವಾಗಿದೆ. ಕ್ಯಾಂಪ್ಕೋ ಮಹಾಸಭೆಯಲ್ಲೂ ಸದಸ್ಯ ರಾಜಾರಾಮ ಭಟ್ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಅಲ್ಲಿಯೂ ಅಡಿಕೆ ಖರೀದಿ ಕೇಂದ್ರ ತೆರೆಯಬೇಕಾದೀತು, ಆದರೆ ಪಾರಂಪರಿಕವಾಗಿ ಅಡಿಕೆ ಬೆಳೆಯುವ ನಾಡಿನ ಕತೆ ಏನು ಎಂಬುದು ಆತಂಕ ಎಂದು ರಾಜಾರಾಮ ಭಟ್ ಕ್ಯಾಂಪ್ಕೋ ಮಹಾಸಭೆಯಲ್ಲಿ ಉಲ್ಲೇಖಿಸಿದ್ದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…