ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಅಡಿಕೆ ಪ್ರಸ್ತಾಪ | ಈಶಾನ್ಯ ರಾಜ್ಯಗಳಲ್ಲಿ ಅಡಿಕೆ ಬೆಳೆ ರಕ್ಷಣೆಗೆ ಒತ್ತು | ಸಭೆಯ ಗಮನಸೆಳೆದ ಅರುಣಾಚಲ ಡಿಸಿಎಂ |

September 19, 2021
11:16 AM

ಅಡಿಕೆ ಬೆಳೆಯ ಬಗ್ಗೆ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಿದೆ. ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ ಅವರು, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅರುಣಾಚಲ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿನ ಅಡಿಕೆ  ಬೆಳೆ ರಕ್ಷಣೆಗೆ ಒತ್ತು ನೀಡುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು.

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 45 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ  ಮಾತನಾಡಿದ ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ, ಇಂದು ದೇಶದಲ್ಲಿ ಅಡಿಕೆ ಬೆಳೆ ರೈತರಿಗೆ ಆದಾಯ ತರುವ ಉತ್ತಮ ಬೆಳೆಯಾಗಿದೆ. ಸಣ್ಣ ರೈತರಿಗೂ ಆದಾಯ ಗಳಿಕೆಯ ಬೆಳೆಯಾಗಿದೆ. ಇಲ್ಲಿ ದೊಡ್ಡ ಬೆಳೆಗಾರರೂ ಇದ್ದಾರೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಗೆ ಇಲ್ಲಿ ಅವಕಾಶ ಇದೆ. ಲಭ್ಯ ಇರುವ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಬಹುದಾಗಿದೆ. ಹೀಗಾಗಿ ಅಡಿಕೆಯ ಜಿಎಸ್‌ಟಿ ವ್ಯಾಪ್ತಿಯಿಂದ ಬರುವ ಆದಾಯದಲ್ಲಿ ಬೆಳೆ ರಕ್ಷಣೆಗೆ ಮುಂದಾಗಬೇಕು ಎಂದರು. ಇದಕ್ಕಾಗಿ  ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್‌ಟಿಎನ್) ಮಂಡಳಿಯಲ್ಲಿ ಮಂಡಳಿಯಲ್ಲಿ ರಾಜ್ಯ ಅಧಿಕಾರಿಗಳನ್ನು ಕಡ್ಡಾಯವಾಗಿ ನಾಮನಿರ್ದೇಶನ ಮಾಡಬೇಕು. ರಾಜ್ಯಮಟ್ಟದ ಅಧಿಕಾರಿಗಳು ಮಂಡಳಿಯಲ್ಲಿ ನೇಮಕ ಮಾಡಬೇಕು ಎಂದು ವಿಷಯ ಮಂಡಿಸಿದ್ದರು.

ಇದಕ್ಕಾಗಿ ರಾಜ್ಯದಲ್ಲಿ ಅಧಿಕಾರಿಗಳನ್ನು  ನಾಮನಿರ್ದೇಶನ ಮಾಡಬಹುದು  ಎಂದೂ ವಿಷಯ ಪ್ರಸ್ತಾಪಿಸಿದರು. ಜಿಎಸ್‌ಟಿ ಕೌನ್ಸಿಲ್ ಅರುಣಾಚಲ ಪ್ರದೇಶ ಉಪಮುಖ್ಯಮಂತ್ರಿ ಚೌನಾ ಮೇ  ಅವರ ಸಲಹೆಯನ್ನು ಒಪ್ಪಿಕೊಂಡು ಜಿಎಸ್‌ಟಿ ಕೌನ್ಸಿಲ್ ಅರುಣಾಚಲ ಪ್ರದೇಶದಿಂದ ಸರಕು ಮತ್ತು ಸೇವಾ ತೆರಿಗೆ ಜಾಲ (ಜಿಎಸ್‌ಟಿಎನ್) ಮಂಡಳಿಯಲ್ಲಿ ಮಧ್ಯಮ ಮಟ್ಟದ ಅಧಿಕಾರಿಗಳನ್ನು ನೇಮಿಸಲು ಒಪ್ಪಿಕೊಂಡಿದೆ ಹಾಗೂ ರಾಜ್ಯದಲ್ಲಿ ತನ್ನದೇ ಆದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಭಿಪ್ರಾಯಪಟ್ಟಿತು.

ಜಿಎಸ್‌ಟಿ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಮತ್ತು ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳು ಭಾಗವಹಿಸಿದ್ದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |
March 17, 2025
3:33 PM
by: ಸಾಯಿಶೇಖರ್ ಕರಿಕಳ
ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror