“ಬಯೋ” ಔಷಧಿಗಳ ಹೆಸರಿನಲ್ಲಿ ಅಡಿಕೆ ರೈತರ ವಂಚನೆ..? ರೋಗಕ್ಕಿಂತಲೂ ದೊಡ್ಡ ಸವಾಲಾಗಿ ಮೂಡಿದ ಕೆಲವು ಔಷಧಿಗಳು..!, ಆದರೂ ಇಲಾಖೆಗಳು, ಸರ್ಕಾರ ಮೌನ…!

February 23, 2026
9:21 PM
ಅಡಿಕೆ ರೋಗಗಳಿಗೆ “ಬಯೋ” ಔಷಧಿಗಳ ಹೆಸರಿನಲ್ಲಿ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆತಂಕ ಹೆಚ್ಚುತ್ತಿದೆ. ವೈಜ್ಞಾನಿಕ ಅಧ್ಯಯನವಿಲ್ಲದೆ ಮಾರುಕಟ್ಟೆಗೆ ಬರುತ್ತಿರುವ ಉತ್ಪನ್ನಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಡಿಕೆ ಬೆಳೆಗಾರರಿಗೆ ಈಗ ಹೊಸ ಸವಾಲಾಗಿ ಹೊರಹೊಮ್ಮಿರುವುದು ವೈರಸ್ ಅಥವಾ ಶಿಲೀಂದ್ರ ರೋಗಗಳಷ್ಟೇ ಅಲ್ಲ; “ಬಯೋ” ಹೆಸರಿನ ಔಷಧಿಗಳ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ ಮತ್ತು ಸುಳ್ಳು ಭರವಸೆಗಳೇ ಎಂಬ ಗಂಭೀರ ಆತಂಕ ವ್ಯಕ್ತವಾಗಿದೆ. ರೋಗಕ್ಕಿಂತಲೂ ಈ ಔಷಧಿಗಳ ಪ್ರಚಾರ ಮತ್ತು ಜಾಹೀರಾತುಗಳು ರೈತರನ್ನು ಗೊಂದಲಕ್ಕೀಡು ಮಾಡುತ್ತಿದ್ದು, ಆರ್ಥಿಕವಾಗಿ ವಂಚಿಸುವ ಅಪಾಯ ಹೆಚ್ಚುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.

ದುರಂತವೆಂದರೆ, ಈ ಬೆಳವಣಿಗೆಗಳ ಬಗ್ಗೆ ಸಂಬಂಧಿತ ಕೃಷಿ ಇಲಾಖೆಗಳು ಮತ್ತು ಸರ್ಕಾರ ಸ್ಪಷ್ಟ ಮಾರ್ಗದರ್ಶನ ನೀಡದೇ ಮೌನ ವಹಿಸಿರುವುದು ರೈತರಲ್ಲಿ ಮತ್ತಷ್ಟು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ.

Advertisement

ಅಡಿಕೆಗೆ ಔಷಧಿ ಶಿಫಾರಸು ಮಾಡಲು 3 ವರ್ಷಗಳ ಅಧ್ಯಯನ ಅಗತ್ಯ ಇದೆ. ಅಡಿಕೆ ದೀರ್ಘಾವಧಿ ಬೆಳೆಯಾಗಿದೆ. ಯಾವುದೇ ರೋಗ ನಿಯಂತ್ರಣಕ್ಕೆ ಔಷಧಿಯನ್ನು ಶಿಫಾರಸು ಮಾಡಲು ಕನಿಷ್ಠ 3 ವರ್ಷಗಳ ಕಾಲ ಕ್ಷೇತ್ರಮಟ್ಟದ ವೈಜ್ಞಾನಿಕ ಪ್ರಯೋಗ, ವಿವಿಧ ಹವಾಮಾನ ಪರಿಸ್ಥಿತಿಗಳ ಅಧ್ಯಯನ, ಕೃಷಿ ವಿಶ್ವವಿದ್ಯಾಲಯ ಅಥವಾ ICAR ಸಂಸ್ಥೆಗಳ ಮೌಲ್ಯಮಾಪನ ಹಾಗೂ ಸಂಬಂಧಿತ ಕೃಷಿ ಇಲಾಖೆಯ ಅಧಿಕೃತ ಶಿಫಾರಸು ಅಗತ್ಯವಿರುತ್ತದೆ.

ಹೀಗಿರುವಾಗ, ಯಾವುದೇ ಅಧ್ಯಯನ ವರದಿ ಇಲ್ಲದೆ, ಸಂಬಂಧಿತ ಇಲಾಖೆಗಳ ಶಿಫಾರಸು ಇಲ್ಲದೆ “ಈ ಔಷಧಿ ವೈರಸ್ ಅಥವಾ ರೋಗ ನಿಯಂತ್ರಿಸುತ್ತದೆ” ಎಂದು ಹೇಳುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Advertisement

ಇತ್ತೀಚಿನ ದಿನಗಳಲ್ಲಿ ಕೆಲವು ಕಂಪನಿಗಳು ಮತ್ತು ವ್ಯಕ್ತಿಗಳು “ವೈರಸ್ ಸಂಪೂರ್ಣ ನಿಯಂತ್ರಣ”, “ವೈರಾಣು ರೋಗ ಸಂಪೂರ್ಣ ಗುಣಪಡಿಸುತ್ತದೆ”, “ಒಂದು ಸಿಂಪಡಣೆಯಲ್ಲಿ ಖಚಿತ ಫಲಿತಾಂಶ” ಎಂಬ ಆಕರ್ಷಕ ಜಾಹೀರಾತುಗಳೊಂದಿಗೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.

ಇದಲ್ಲದೆ, ಕೆಲವು ರೈತರಿಂದ ವಿಡಿಯೋ ಸಾಕ್ಷ್ಯಗಳನ್ನು ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಉತ್ಪನ್ನಗಳ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನಗಳೂ ನಡೆಯುತ್ತಿರುವುದನ್ನು ಇಲಾಖೆಗಳು ಗಮನಿಸಿರುವುದಾಗಿ ತಿಳಿದುಬಂದಿದೆ.

Advertisement

ಆದರೆ ತಜ್ಞರ ಪ್ರಕಾರ, ಇಂತಹ ಉತ್ಪನ್ನಗಳಲ್ಲಿ ಬಹುತೇಕವು ವೈಜ್ಞಾನಿಕವಾಗಿ ಸಮಗ್ರ ಪರೀಕ್ಷೆಗೆ ಒಳಪಟ್ಟಿಲ್ಲ. ಕೃಷಿ ವಿಶ್ವವಿದ್ಯಾಲಯ ಅಥವಾ ICAR ಮಾನ್ಯತೆ ಹೊಂದಿಲ್ಲ. ವೈರಸ್ ಅಥವಾ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಎಂಬುದಕ್ಕೆ ದೃಢವಾದ ವೈಜ್ಞಾನಿಕ ಸಾಕ್ಷ್ಯಗಳೂ ಲಭ್ಯವಿಲ್ಲ.

ಇಲಾಖೆಗಳು ಏಕೆ ಮೌನ? ರೈತರ ಪ್ರಶ್ನೆ: ಈ ಬೆಳವಣಿಗೆಗಳ ನಡುವೆ ರೈತರು ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಧ್ಯಯನವಿಲ್ಲದೆ ಔಷಧಿ ಶಿಫಾರಸು ಹೇಗೆ ಸಾಧ್ಯ? ಸಂಬಂಧಿತ ಇಲಾಖೆಗಳು ಸ್ಪಷ್ಟ ಮಾರ್ಗದರ್ಶನ ನೀಡದಿರುವುದೇಕೆ? ಸುಳ್ಳು ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲವೇ? ಈ ಪ್ರಶ್ನೆಗಳು ಇದೀಗ ರೈತ ಸಮುದಾಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿವೆ.

Advertisement

ತಜ್ಞರು ರೈತರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. “100% ರೋಗ ನಿಯಂತ್ರಣ” ಎಂಬ ಜಾಹೀರಾತುಗಳನ್ನು ನಂಬಬಾರದು. ಕೃಷಿ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯದ ಅಧಿಕೃತ ಶಿಫಾರಸು ಇಲ್ಲದೆ ಯಾವುದೇ ಔಷಧಿ ಬಳಸಬಾರದು. ವೈಜ್ಞಾನಿಕ ಪ್ರಮಾಣಿಕತೆ ಇಲ್ಲದ ಉತ್ಪನ್ನಗಳಿಂದ ದೂರವಿರಬೇಕು. ಅನುಮಾನ ಇದ್ದರೆ ತಕ್ಷಣ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು.

ವೈರಾಣು ಮತ್ತು ಇತರ ರೋಗಗಳ ವಿರುದ್ಧ ತೋಟದ ಸ್ವಚ್ಛತೆ ಕಾಪಾಡುವುದು, ಆರೋಗ್ಯಕರ ಸಸಿಗಳನ್ನು ಬಳಸುವುದು, ಕೀಟ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಹಾಗೂ ತಜ್ಞರ ಸಲಹೆ ಪಾಲಿಸುವುದು ಹಾಗೂ ಇತರ ಹಲವು ವೈಜ್ಞಾನಿಕವಾಗಿ ಶಿಫಾರಸು ಮಾಡಿರುವ ಪ್ರಮುಖ ಕ್ರಮಗಳಿವೆ.

Advertisement

ಕೃಷಿ ಇಲಾಖೆಯು ಅಡಿಕೆ ರೋಗಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವುದು, ಸುಳ್ಳು ಜಾಹೀರಾತು ಮಾಡುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ವೈಜ್ಞಾನಿಕ ಮಾಹಿತಿ ನೀಡುವುದು ಅತ್ಯಂತ ಅಗತ್ಯವಾಗಿದೆ. ಇಲ್ಲದಿದ್ದರೆ, ರೋಗಕ್ಕಿಂತಲೂ ಹೆಚ್ಚು ಹಾನಿ ತಪ್ಪು ಮಾಹಿತಿ ಮತ್ತು ಸುಳ್ಳು ಔಷಧಿಗಳಿಂದಲೇ ಉಂಟಾಗುವ ಅಪಾಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವೈರಸ್ ಒಂದು ಸವಾಲು. ಆದರೆ ಸುಳ್ಳು ಪರಿಹಾರಗಳು ಅದಕ್ಕಿಂತಲೂ ದೊಡ್ಡ ಅಪಾಯ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಒಬ್ಬ ಅಡಿಕೆ ಬೆಳೆಗಾರನ ಶ್ರಮ ಒಂದಿಡೀ ವರ್ಷದ ಫಲ. ಈಗ ರೋಗ ಬಾಧೆಗಳ ಭಯ ಹೆಚ್ಚಾಗಿದೆ. ರೋಗ ಬಾಧಿಸಿದರೆ ಇಡೀ ವರ್ಷದ ಆದಾಯ ನಷ್ಟವಾಗುತ್ತದೆ. ಹೀಗಾಗಿ ರೋಗ ಬರುವ ಮೊದಲೇ ಸಿಂಪಡಣೆ ಮಾಡಬೇಕು ಎಂದು ಕೃಷಿಕರು ಆತಂಕಕ್ಕೆ ಒಳಗಾಗಿ ಸಿಕ್ಕ ಸಿಕ್ಕ ಔಷಧಿಗಳ ಸಿಂಪಡಣೆ ಮಾಡುವಂತಾಗಿದೆ. ಅಡಿಕೆ ಬೆಳೆಗಾರರ ಈ ಆತಂಕವನ್ನು ಉದ್ಯಮವಾಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬರುತ್ತಿದೆ. ಹೀಗಾಗಿ ಸರ್ಕಾರದ ಮಧ್ಯಪ್ರವೇಶ ಅಗತ್ಯವಿದೆ ಎಂಬ ಒತ್ತಾಯ ಕೇಳಿಬಂದಿದೆ.

Advertisement

So-called “bio medicines” claiming to cure arecanut diseases and viruses are emerging as a serious concern for farmers in Karnataka. Experts warn that without proper scientific trials, university validation, and official recommendations, such products may mislead and financially exploit farmers. Authorities are urged to intervene, create awareness, and take action against unverified claims to protect the arecanut farming community.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror