ಕಳೆದ ನಾಲ್ಕೈದು ತಿಂಗಳಿಂದ ಅಡಿಕೆ ಪತ್ರಿಕೆ ನಡೆಸುತ್ತಿರುವ ಅಡಿಕೆ ಚೊಗರು ಅಭಿಯಾನ ಇದೀಗ ಪುಸ್ತಕ ರೂಪದಲ್ಲಿ ದಾಖಲಾಗುತ್ತಿದೆ. ಪತ್ರಿಕೋದ್ಯಮ ರಂಗದ ಅಪರೂಪದ, ವಿಶೇಷ ಪ್ರಯತ್ನವಿದು.
ಒಂದು ಬೆಳೆಯ ಪರ್ಯಾಯ ಬಳಕೆ ಹೆಚ್ಚಿದಷ್ಟೂ ಅದರ ವಾಣಿಜ್ಯಿಕ ಮಹತ್ವ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಅಡಿಕೆ ಬಣ್ಣದ ಬಹೂಪಯೋಗಿ ಸಾಧ್ಯತೆ ಮೇಲೆ ಕೃತಿಯ ಲೇಖಕ, ಅಪ ಸಂಪಾದಕ ಶ್ರೀ ಪಡ್ರೆ ಅವರು ಬೆಳಕು ಚೆಲ್ಲಿದ್ದಾರೆ. ಅನೇಕ ಉತ್ಸಾಹಿಗಳಿಗೆ ಇದು ಖಂಡಿತ ಸ್ಪೂರ್ತಿ ನೀಡಲಿದೆ ಎಂಬ ಆಶಯ ನಮ್ಮದು.
ಪುತ್ತೂರಿನಿಂದ ಸುಳ್ಯ ಮಾರ್ಗದಲ್ಲಿ ಆರು ಕಿ.ಮೀ. ದೂರದಲ್ಲಿ ಪರ್ಪುಂಜ ಎಂಬಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ‘ಸೌಗಂಧಿಕ’ ಒಂದು ವಿಶಿಷ್ಟ ಹಸಿರುತಾಣ. ಕೆಫೆಟೇರಿಯ ಮತ್ತು ನರ್ಸರಿ ಕೂಡ. ಅಲ್ಲಿ ಇದೇ 29, ಭಾನುವಾರ ಬೆಳಿಗ್ಗೆ 11 ಗಂಟೆಗೆ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ಶಿವರಾಂ ಪೈಲೂರು ತಿಳಿಸಿದ್ದಾರೆ.
ಅಡಿಕೆ ಬಣ್ಣ ಬಳಸಿ ತಯಾರಿಸಿದ ಬಟ್ಟೆಗಳು, ಬುಗುರಿಗಳು ಹಾಗೂ ತೊಗರಿಗೆ ಸಂಬಂಧಿಸಿದ ಪೋಸ್ಟರ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಜಂಟಿಯಾಗಿ ಪುಸ್ತಕವನ್ನು ಪ್ರಕಟಿಸಿವೆ. ತೊಗರಿಗೆ ಸಂಬಂಧಿಸಿದ ಸಮೃದ್ಧ ಮಾಹಿತಿ, ಆಕರ್ಷಕ ವಿನ್ಯಾಸ, ಎಂಟು ವರ್ಣಪುಟ ಈ ಪುಸ್ತಕದ ವಿಶೇಷ.29ರ ಕಾರ್ಯಕ್ರಮ ನಮ್ಮೆಲ್ಲರಿಗೂ ಹೆಮ್ಮೆ, ಅಭಿಮಾನದ ಸಂದರ್ಭ ಇದು. ಹೀಗಾಗಿ ಕೃಷಿಕರೆಲ್ಲರಿಗೂ ಸ್ವಾಗತ ಎಂದು ಶಿವರಾಂ ಪೈಲೂರು ತಿಳಿಸಿದ್ದಾರೆ.
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…
ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…