ಕಳೆದ ನಾಲ್ಕೈದು ತಿಂಗಳಿಂದ ಅಡಿಕೆ ಪತ್ರಿಕೆ ನಡೆಸುತ್ತಿರುವ ಅಡಿಕೆ ಚೊಗರು ಅಭಿಯಾನ ಇದೀಗ ಪುಸ್ತಕ ರೂಪದಲ್ಲಿ ದಾಖಲಾಗುತ್ತಿದೆ. ಪತ್ರಿಕೋದ್ಯಮ ರಂಗದ ಅಪರೂಪದ, ವಿಶೇಷ ಪ್ರಯತ್ನವಿದು.
ಒಂದು ಬೆಳೆಯ ಪರ್ಯಾಯ ಬಳಕೆ ಹೆಚ್ಚಿದಷ್ಟೂ ಅದರ ವಾಣಿಜ್ಯಿಕ ಮಹತ್ವ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಅಡಿಕೆ ಬಣ್ಣದ ಬಹೂಪಯೋಗಿ ಸಾಧ್ಯತೆ ಮೇಲೆ ಕೃತಿಯ ಲೇಖಕ, ಅಪ ಸಂಪಾದಕ ಶ್ರೀ ಪಡ್ರೆ ಅವರು ಬೆಳಕು ಚೆಲ್ಲಿದ್ದಾರೆ. ಅನೇಕ ಉತ್ಸಾಹಿಗಳಿಗೆ ಇದು ಖಂಡಿತ ಸ್ಪೂರ್ತಿ ನೀಡಲಿದೆ ಎಂಬ ಆಶಯ ನಮ್ಮದು.
ಪುತ್ತೂರಿನಿಂದ ಸುಳ್ಯ ಮಾರ್ಗದಲ್ಲಿ ಆರು ಕಿ.ಮೀ. ದೂರದಲ್ಲಿ ಪರ್ಪುಂಜ ಎಂಬಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ‘ಸೌಗಂಧಿಕ’ ಒಂದು ವಿಶಿಷ್ಟ ಹಸಿರುತಾಣ. ಕೆಫೆಟೇರಿಯ ಮತ್ತು ನರ್ಸರಿ ಕೂಡ. ಅಲ್ಲಿ ಇದೇ 29, ಭಾನುವಾರ ಬೆಳಿಗ್ಗೆ 11 ಗಂಟೆಗೆ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ಶಿವರಾಂ ಪೈಲೂರು ತಿಳಿಸಿದ್ದಾರೆ.
ಅಡಿಕೆ ಬಣ್ಣ ಬಳಸಿ ತಯಾರಿಸಿದ ಬಟ್ಟೆಗಳು, ಬುಗುರಿಗಳು ಹಾಗೂ ತೊಗರಿಗೆ ಸಂಬಂಧಿಸಿದ ಪೋಸ್ಟರ್ ಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರ ಜಂಟಿಯಾಗಿ ಪುಸ್ತಕವನ್ನು ಪ್ರಕಟಿಸಿವೆ. ತೊಗರಿಗೆ ಸಂಬಂಧಿಸಿದ ಸಮೃದ್ಧ ಮಾಹಿತಿ, ಆಕರ್ಷಕ ವಿನ್ಯಾಸ, ಎಂಟು ವರ್ಣಪುಟ ಈ ಪುಸ್ತಕದ ವಿಶೇಷ.29ರ ಕಾರ್ಯಕ್ರಮ ನಮ್ಮೆಲ್ಲರಿಗೂ ಹೆಮ್ಮೆ, ಅಭಿಮಾನದ ಸಂದರ್ಭ ಇದು. ಹೀಗಾಗಿ ಕೃಷಿಕರೆಲ್ಲರಿಗೂ ಸ್ವಾಗತ ಎಂದು ಶಿವರಾಂ ಪೈಲೂರು ತಿಳಿಸಿದ್ದಾರೆ.
ಗೋಕರ್ಣದಲ್ಲಿ ನಡೆಯಲಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಮೂಲಕ ಆಹಾರದ ಮಹತ್ವ ಹಾಗೂ ಅನ್ನ ವ್ಯರ್ಥ…
ಮಾರುಕಟ್ಟೆಯಲ್ಲಿ ತಿರಸ್ಕೃತವಾಗುವ ಗ್ರೇಡ್-ಬಿ ಮಾವು ಮತ್ತು ತೆಂಗುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ರೈತರಿಗೆ…
2050ರ ವೇಳೆಗೆ ಜಗತ್ತಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ 10 ಕೋಟಿ ಸಿಬ್ಬಂದಿ ಕೊರತೆ…
ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆ ರಾಜ್ಯದ ಅಡಿಕೆ ವ್ಯಾಪಾರಿಗಳಿಗೆ ಹೊಸ ಸಂಕಷ್ಟ ತಂದೊಡ್ಡಿದೆ.…
ದೇಶದಲ್ಲಿ ಮುಂಗಾರು ಚಟುವಟಿಕೆ ದುರ್ಬಲವಾಗಿದ್ದು, ಜೂನ್ 18ರವರೆಗೆ ಮಳೆ ಕೊರತೆ ಶೇ.40ಕ್ಕೆ ಏರಿಕೆಯಾಗಿದೆ.…
ಇ-ವೇ ಬಿಲ್ ಮತ್ತು ಸಾರಿಗೆ ದಾಖಲೆಗಳ ಕೊರತೆಯಿಂದ ₹2.22 ಕೋಟಿ ಮೌಲ್ಯದ 33.6…