ಪುತ್ತೂರು ಮುತ್ತು ಹೆಸರಲ್ಲಿ ಅಡಿಕೆ ಬ್ರಾಂಡಿಂಗ್‌ ಚಿಂತನೆ | ಅಡಿಕೆ ಕಲಬೆರಕೆ ತಡೆಯಲು ಹೊಸ ಪ್ಲಾನ್‌ | ಅಡಿಕೆ ಬೆಳಗಾರರಿಂದ ನಡೆಯುತ್ತಿದೆ ಚಿಂತನೆ |

March 16, 2024
4:47 PM
ಕರಾವಳಿ ಜಿಲ್ಲೆಯ ಗುಣಮಟ್ಟದ ಅಡಿಕೆಯನ್ನು ಬ್ರಾಂಡ್‌ ಮಾಡಲು ಹಾಗೂ ಅಡಿಕೆ ಬೆಳೆಗಾರರನ್ನು ಕಾಪಾಡಲು ಇದೀಗ ಪುತ್ತೂರು ಮುತ್ತು ಎಂಬ ಬ್ರಾಂಡ್‌ ತಯಾರಿಸಲು ಚಿಂತನೆ ನಡೆಯುತ್ತಿದೆ.

ಅಡಿಕೆಗೆ ಬೆಲೆ(Arecanut price) ಏನೋ ಇದೆ. ಆದರೆ ಅದು ಅತಂತ್ರದ್ದು.ಅಡಿಕೆ ಕಳ್ಳ ಸಾಗಾಣಿಕೆ(Arecanut smuggling) ಮಲೆನಾಡು(Malenadu) ಹಾಗೂ ಕರಾವಳಿ(Coastal) ರೈತರ(Farmer) ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ವಿದೇಶದಿಂದ(Foreign) ಬರುವ ಅಕ್ರಮ ಅಡಿಕೆಗಳಿಂದ(Illegal Arecanut) ಇಲ್ಲಿನ ಅಡಿಕೆ ಬೆಲೆ ಕಳೆದುಕೊಳ್ಳುವ ಭೀತಿ ಸದಾ ಬೆಳೆಗಾರರಿಗೆ ಎದುರಾಗುತ್ತಲೇ ಇದೆ.ಅಲ್ಲದೆ ಕರ್ನಾಟಕದಲ್ಲಿ(Karnataka) ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಗೆ ಕಲಬೆರಕೆಯ(mixing) ಸಮಸ್ಯೆ ಎದುರಾಗುತ್ತಿದೆ.ಇದನ್ನು ತಡೆಯಲು ದಕ್ಷಿಣ ಕನ್ನಡದ (Dakshina Kannada) ಪುತ್ತೂರು(Puttur) ಭಾಗದಲ್ಲಿ ಹೊಸ ಯೋಜನೆ ರೂಪಿಸುತ್ತಿದ್ದಾರೆ.

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಅಡಿಕೆಗೆ ಕಲಬೆರಕೆಯ ಮಾಡುವುದನ್ನು ತಡೆಯಲು ವಿಟ್ಲ, ಪುತ್ತೂರು ಹಾಗೂ ಇತರ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯನ್ನು ಪುತ್ತೂರು ಮುತ್ತು ಎಂಬ ಹೆಸರಲ್ಲಿ ಬ್ರಾಂಡಿಂಗ್ ಮಾಡಲು ಚಿಂತನೆ ನಡೆಸಲಾಗಿದೆ.

Advertisement

ದಕ್ಷಿಣ ಕನ್ನಡದ ಅಡಿಕೆಗೆ ಉತ್ತರ ಭಾರತದಲ್ಲಿ ಬೇಡಿಕೆ  : ವಿದೇಶ ಹಾಗೂ ದೇಶದ ಇತರ ಭಾಗದಲ್ಲಿ ಬೆಳೆಯುವ ಅಡಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಂಪ್ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದು ಕಳಪೆ ಗುಣಮಟ್ಟದ ಅಡಿಕೆಯನ್ನು ಜಿಲ್ಲೆಯ ಅಡಿಕೆಯಲ್ಲಿ ಕೆಲವರು ಬೆರಕೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಪಡೆದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕಾಯ್ದುಕೊಂಡಿರುವ ದಕ್ಷಿಣ ಕನ್ನಡದ ಅಡಿಕೆ ಕಳಪೆ ಗುಣಮಟ್ಟದ ಅಡಿಕೆ ಮಿಶ್ರಣದಿಂದ ಗುಣಮಟ್ಟ ಕುಸಿಯುವ ಭೀತಿ ಎದುರಿಸುತ್ತಿದೆ.

ಪುತ್ತೂರು ಮುತ್ತು ಹೆಸರಲ್ಲಿ ಬ್ರಾಂಡ್  : ಹೀಗಾಗಿ ಅಡಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ರೈತ ಸಂಘಟನೆಗಳ ಒಕ್ಕೂಟ ಮಾಸ್ಟರ್‌ಪ್ಲಾನ್ ಮಾಡಲು ತೀರ್ಮಾನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆಯನ್ನು ಪುತ್ತೂರು ಮುತ್ತು ಎನ್ನುವ ಹೆಸರಿನಲ್ಲಿ‌ ಬ್ರಾಂಡ್‌ ಮಾಡಲು ಉದ್ದೇಶಿಸಲಾಗಿದೆ.

Advertisement

ಟೀ, ಮಾವಿಗಿದೆ, ಅಡಿಕೆಗೆ ಏಕಿಲ್ಲ? :ಈಗಾಗಲೇ ಈ ವಿಚಾರವನ್ನು ಅಡಿಕೆ ಬೆಳೆಗಾರರ ಹಿತ‌ ಕಾಯುವ ಕ್ಯಾಂಪ್ಕೋ ಗಮನಕ್ಕೆ‌ ಬೆಳೆಗಾರರು ತಂದಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಕ್ಯಾಂಪ್ಕೋ ಜೊತೆಗೆ ಚರ್ಚೆ ನಡೆಸಿ, ಒಂದು ವೇಳೆ ಕ್ಯಾಂಪ್ಕೋ ಈ ವಿಚಾರದಲ್ಲಿ ಅನಾಸಕ್ತಿ ವಹಿಸಿದರೆ ರೈತ ಒಕ್ಕೂಟದಿಂದಲೇ ಬ್ರಾಂಡ್ ಮಾಡಲು ಉದ್ದೇಶಿಸಲಾಗಿದೆ. ಟೀ, ಮಾವು ಹಾಗೂ ಇತರ ಉತ್ಪನ್ನಗಳಿಗಿರುವಂತೆ ಅಡಿಕೆಗೂ ಬ್ರಾಂಡ್ ಮಾಡುವ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಯುವ ಯೋಜನೆ ಇದೀಗ ಬಲಗೊಳ್ಳುತ್ತಿದೆ ಎನ್ನುತ್ತಾರೆ ರೈತ ಸಂಘ ಸಂಘಟನೆಗಳು ತಿಳಿಸಿವೆ.

– ಅಂತರ್ಜಾಲ ಮಾಹಿತಿ

Advertisement

It has been decided to brand the high quality arecanuts grown in Vitla, Puttur and other parts under the name Puttur Muthu to prevent adulteration of the arecanuts grown in Dakshina Kannada district.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror