ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಕ್ಯಾಂಪ್ಕೋ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ನಡುವೆ ಜಂಟಿಯಾಗಿ ಡಿ.3 ರಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಲ್ಲಿ ಅಡಿಕೆಗೆ ಸಂಬಂಧಿಸಿ 4 ಅಂಶಗಳ ಬಗ್ಗೆ ಸಂಶೋಧನೆ ನಡೆಯಲಿದೆ.
ಈ ಸಂಶೋಧನೆಯಲ್ಲಿ ಜೀವಿ ಮತ್ತು ಜೀವಕಣಗಳ ಮೇಲೆ ಅಡಿಕೆಯಿಂದಾಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ , ಅಡಿಕೆಯಿಂದಾಗುವ ಪರಿಣಾಮಗಳ ಬಗ್ಗೆ “ಡ್ರೊಸೊಫಿಲಾ ” ಎಂಬ ಕೀಟದ ಮೇಲೆ ಸಮಗ್ರ ಅಧ್ಯಯನ , ಜೀವಕೋಶಗಳ ಪ್ರಸರಣಗಳ ಬಗ್ಗೆ ಅಡಿಕೆ ಮತ್ತು ಅರೆಕೋಲಿನ್ ಗಳ ಪ್ರಭಾವಗಳನ್ನುತಿಳಿಯಲು ಜೀಬ್ರಾಮೀನುಗಳ ಬ್ರೂಣಗಳ ಮೇಲೆ ಪ್ರಯೋಗ, ಅಡಿಕೆ ಜಗಿಯುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳ ಸಮಗ್ರ ಅಧ್ಯಯನ ಗಳ ವಿಷಯಗಳಲ್ಲಿ ಸಂಶೋಧನೆ ಮಾಡಲು ನಿಟ್ಟೆವಿಶ್ವವಿದ್ಯಾನಿಲಯಕ್ಕೆ ಕೇಳಲಾಗಿದೆ.
A Memorandum of Understanding was signed jointly between NITTE (Deemed to be University) and CAMPCO and Arecanut Research and Development Foundation. @digicampco pic.twitter.com/edgj54J703
— theruralmirror (@ruralmirror) December 3, 2021
Advertisement
ಅಡಿಕೆಯಿಂದಾಗುವ ಪ್ರಯೋಜನಗಳು, ಅದರ ಮೌಲ್ಯವರ್ಧನೆ, ಔಷಧೀಯ ಉತ್ಪನ್ನಗಳು ಮತ್ತು ಇತರ ವಾಣಿಜ್ಯ ಬಳಕೆಗಳ ಬಗ್ಗೆ ಸಮಗ್ರ ಸಂಶೋಧನೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.