Advertisement
MIRROR FOCUS

ಶ್ರೀಲಂಕಾ ಅಡಿಕೆ ಆಮದು ಗೊಂದಲ | ಅಡಿಕೆ ಆಮದು ಸಾಧ್ಯವಿಲ್ಲ- ಇದು ಸುಳ್ಳು ಮಾಹಿತಿ | ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ ಕ್ಯಾಂಪ್ಕೋ ಹಾಗೂ ಕೃಷಿ ಸಚಿವೆ | ಅಡಿಕೆ ಧಾರಣೆ 5 ರೂಪಾಯಿ ಏರಿಕೆ ಮಾಡಿದ ಕ್ಯಾಂಪ್ಕೋ |

Share

ಕಳೆದ ಎರಡು ದಿನಗಳಿಂದ ಶ್ರೀಲಂಕಾದಿಂದ 5 ಲಕ್ಷ ಟನ್‌  ಅಡಿಕೆ ಆಮದು ಮಾಡಿಕೊಳ್ಳುವ ಎರಡು ಕಂಪನಿಗಳ ಒಪ್ಪಂದವು ಚರ್ಚೆಯಾಗುತ್ತಿದೆ. ಈ ನಡುವೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು  ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ. ಅಡಿಕೆ ಆಮದು ಆಗುವುದಿಲ್ಲ, ಇದೆಲ್ಲಾ ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ.

Advertisement
Advertisement

ಬಿಳಿನೆಲೆ ಬಳಿಯ ಸಿಪಿಸಿಆರ್‌ಐ ಕಿದುವಿನಲ್ಲಿ ನಡೆದ ಕೃಷಿಕರ ಸಮಾವೇಶದಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಈ ಬಾರಿ ಅಡಿಕೆ ಆಮದು ಆಗಿದೆ. ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಳ್ಳದಾರಿಯ ಮೂಲಕವೇ ಆಗಿದೆ. ಆದರೆ ಕಾನೂನು ಮಾರ್ಗದಲ್ಲಿಯೇ ಅಡಿಕೆ ಆಮದು ಆದರೆ ಜಿಎಸ್ಟಿ ಸಹಿತ ಆಮದಾಗುತ್ತದೆ, ಆಗ ಆಮದು ದರ ನಿಗದಿಯಾದ  351 ದರಕ್ಕಿಂತ ಹೆಚ್ಚಿನ ದರದಲ್ಲಿ ಆಮದಾಗುವ ಕಾರಣದಿಂದ ಇಲ್ಲಿನ ಮಾರುಕಟ್ಟೆ ಮೇಲೆ ಪರಿಣಾಮವಾಗದು. ಜಿಎಸ್ಟಿ ಇಲ್ಲದೆ ನಡೆಯುವ ಅಡಿಕೆ ವ್ಯವಹಾರದಿಂದ ಸಹಕಾರಿ ಸಂಸ್ಥೆಗಳಿಗೆ ಸಂಕಷ್ಟವಾಗುತ್ತದೆ, ಈ ಬಗ್ಗೆ ಪ್ರಧಾನಿಗಳ ಗಮನಕ್ಕೂ ಮಾಹಿತಿಯನ್ನು ಕ್ಯಾಂಪ್ಕೋ ತಲಪಿಸಿದೆಎಂದ ಕಿಶೋರ್‌ ಕುಮಾರ್ ಕೊಡ್ಗಿ,ಶ್ರೀಲಂಕಾದಿಂದ 5 ಲಕ್ಷ ಟನ್‌ ಅಡಿಕೆ ಆಮದು ಎಂಬ ಸುದ್ದಿಯಾಗಿದೆ. ಇದು ಸ್ವಲ್ಪ ಗೊಂದಲವೂ ಆಗಿದೆ. ಆದರೆ ಇದು ಸುಳ್ಳಾಗಿದೆ. ಈ ಸುದ್ದಿಗಳ ನಡುವೆಯೇ ಕ್ಯಾಂಪ್ಕೋ 5 ರೂಪಾಯಿ ಧಾರಣೆಯನ್ನು ಏರಿಕೆ ಮಾಡಿದೆ. ಆಮದು ಸಂಕಷ್ಟ ಇದ್ದರೆ ಏರಿಕೆ ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ. ಯಾವುದೇ ಕಾರಣಕ್ಕೂ ಬೆಳೆಗಾರರು ಭಯಗೊಳ್ಳಬೇಡಿ ಎಂದರು. ರೈತರಿಗೆ ಗೊಂದಲ ಬೇಡ ಎಂದರು. ಮಾರುಕಟ್ಟೆ ದರ ಹಿತವಾಗಿರುವ ಬೆಳೆಗಾರರ ನೆರವೂ ಅಗತ್ಯವಾಗಿದೆ. ಅಡಿಕೆಯನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡಬೇಡಿ, ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಮಾರಾಟ ಮಾಡುವ ಮೂಲಕ ಅಡಿಕೆ ಮಾರುಕಟ್ಟೆಯನ್ನೂ ಸ್ಥಿರಗೊಳಿಸಲು ಸಾಧ್ಯ ಎಂದರು.ದರದ ಸ್ಥಿರತೆ ವ್ಯತ್ಯಾಸ ಇರುತ್ತದೆ. ಇದು ಮಾರುಕಟ್ಟೆ ಸಹಜ ಪ್ರಕ್ರಿಯೆ.

Advertisement

ಇಂದು  ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಬಯಲು ಸೀಮೆಗೂ ಅಡಿಕೆ ವಿಸ್ತರಣೆಯಾಗಿದೆ. ನೂರಾರು ಅಡಿಕೆ ಕೊಳವೆ ಬಾವಿ ಕೊರೆದು ಅಡಿಕೆ ಬೆಳೆಸಲಾಗುತ್ತದೆ. ಇದು ದುರಂತಕ್ಕೆ ಸಾಕ್ಷಿಯಾಗಿದೆ. ಭತ್ತ, ಕಬ್ಬು ಪ್ರದೇಶದಲ್ಲೂ ಅಡಿಕೆಯಾಗುತ್ತಿದೆ. ಕುಡಿಯಲು ನೀರಿಲ್ಲದೇ ಇರುವ ಜಾಗದಲ್ಲೂ ಟ್ಯಾಂಕರ್‌  ನೀರು ತಂದು ಅಡಿಕೆ ಬೆಳೆಯಲಾಗುತ್ತದೆ. ಅಡಿಕೆ ಬೆಳೆ ಧಾರಣೆ ಕಡಿಮೆಯಾಗುತ್ತದೆ ಎನ್ನುವ ಗೊಂದಲದ ನಡುವೆ ಪರ್ಯಾಯ ಬೆಳೆಯತ್ತಲೂ ಕೃಷಿಕರು ಮನಸ್ಸು ಮಾಡಬೇಕು. ಅಡಿಕೆಯಲ್ಲಿ ಮಿಶ್ರ ಬೆಳೆಯೂ ಅಗತ್ಯ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಎಚ್ಚರಿಸಿದರು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಡಿಕೆ ಧಾರಣೆ ಇಳಿಕೆಯಾಗದಂತೆ ಸರ್ಕಾರ ಎಚ್ಚರ ವಹಿಸಿದೆ. ಅಡಿಕೆ ಆಮದು ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗ ಬೇರೆ ದೇಶದಿಂದ ಅಡಿಕೆ ಆಮದಾಗಲು ಸಾಧ್ಯವೇ ಇಲ್ಲ.‌ ಭೂತಾನ್‌ನಿಂದ ಅಡಿಕೆ ಆಮದು ಮಾಡಲು ಅಂದು ಒಪ್ಪಿತ್ತು. ಭೂತಾನ್ ದೇಶ ಸಂಕಷ್ಟದಲ್ಲಿದೆ ಎಂದು ಅಲ್ಲಿನ ಸರ್ಕಾರ ಮನವಿ ಮಾಡಿತ್ತು, ಹೀಗಾಗಿ ಒಂದು ವರ್ಷಕ್ಕೆ ಸೀಮಿತವಾಗಿ ಆಮದಾಗಿತ್ತು. ಈ ದೇಶಕ್ಕೆ ಹೋಲಿಸಿದರೆ ಅತೀ ಕಡಿಮೆ ಹಸಿ ಅಡಿಕೆ  ಆಮದಾಗಿತ್ತು. ಈ ವರ್ಷ ಮತ್ತೆ ಬೇಡಿಕೆ ಇಟ್ಟಾಗ ತಿರಸ್ಕರಿಸಲಾಗಿತ್ತು. ಈಗ ಭೂತಾನ್‌ ಅಡಿಕೆ ಆಮದು ಮಾಡಲಾಗುತ್ತಿಲ್ಲ.  ಶ್ರೀಲಂಕಾದಿಂದ ಕೂಡಾ ಅಡಿಕೆ ಆಮದು ಆಗುವುದು ಇಲ್ಲ. ಈಗ ಈ ಸುದ್ದಿ ಹರಡಿರುವುದು ಯಾವುದೇ ವ್ಯಾಪಾರಿಗಳ ತಂತ್ರವಾಗಿದೆ. ಆಮದು ಸುದ್ದಿ ಹರಡಿಸಿ ಧಾರಣೆ ಕುಸಿತ ಮಾಡಿ ಅಡಿಕೆ ಖರೀದಿ ಮಾಡುವ ತಂತ್ರವಾಗಿದೆ.ಅನಾವಶ್ಯಕವಾದ ಗೊಂದಲ ಉಂಟಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Advertisement

CAMPCO President Kishore Kumar Kodgi and Union Minister Shobha Karandlaje said that Arecanut cannot be imported, this is all false information.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ

ಮುಂಗಾರು ಮಳೆ(Manson) ಆರಂಭವಾಗುತ್ತಿದ್ದಂತೆ ಸಾಂಕ್ರಮಿಕ ರೋಗಗಳು(Infectious disease) ಆರಂಭವಾಗುವುದು ಮಾಮೂಲು. ಅದರಲ್ಲೂ ಮಳೆ(Rain)…

5 hours ago

ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ

ಪ್ರಧಾನಿ ಮೋದಿ(PM Modi) ಬೇರೆ ಬೇರೆ ವಿಚಾರದಲ್ಲಿ ಉಳಿದ ರಾಜಕಾರಣಿಗಳಿಗಿಂತ(Politician) ಭಿನ್ನ. ಈ…

5 hours ago

ಇಂದು ಅಂತಾರಾಷ್ಟ್ರೀಯ ಕುಟುಂಬ ದಿನ : ಅಂದಿನ ಕೂಡು ಕುಟುಂಬ ಇಂದಿನ ವಿಭಕ್ತ ಕುಟುಂಬ

ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World)…

5 hours ago

ಸಿಎಎ ಅಡಿಯಲ್ಲಿ 14 ಜನರಿಗೆ ಮೊದಲ ಬಾರಿಗೆ ಪೌರತ್ವ : 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಗೃಹ ಸಚಿವಾಲಯವು(Union Home Ministry) ಸಿಎಎ(CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ…

6 hours ago

ಗ್ರಾಹಕನಿಗೆ ಶಾಕ್‌ ಕೊಟ್ಟ ವಿದ್ಯುತ್‌ ಇಲಾಖೆ : ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಕಂಡು ವ್ಯಕ್ತಿ ಕಂಗಾಲು

ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್‌ ಉಚಿತ(Free Current). ಇಂಥ…

8 hours ago

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?

ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…

14 hours ago