ವಿವಿಧ ದೇಶಗಳಲ್ಲಿ ಅಡಿಕೆ ಹಾನಿಕಾರಕ ಸೇರಿದಂತೆ ವಿವಿಧ ಆಪಾದನೆಗಳ ಮೂಲಕ ಅಡಿಕೆ ಬೆಳೆ ನಿಯಂತ್ರಣ ಕಡೆಗೆ ಚಿಂತನೆ ಮಾಡುತ್ತಿದ್ದಾರೆ. ಆದರೆ ನೇಪಾಳವು ಅಲ್ಲಿನ ಕೃಷಿಕರ ಹಿತದೃಷ್ಟಿಯಿಂದ ಅಡಿಕೆ ಕೃಷಿಯನ್ನು ಉತ್ತೇಜನ ಮಾಡಲು ಹಾಗೂ ಅಡಿಕೆ ರಫ್ತು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.…..ಮುಂದೆ ಓದಿ….
ನೇಪಾಳದ ಆರ್ಥಿಕ ವ್ಯವಹಾರಗಳು ಮತ್ತು ಆಡಳಿತ ಸಮಿತಿಯು ಅಡಿಕೆ ರಫ್ತು ಹಾಗೂ ನಿರ್ವಹಣೆಯ ಬಗ್ಗೆ ವಿಶೇಷವಾದ ಸಭೆ ನಡೆಸಿ ಅಡಿಕೆ ಆಮದು ಹಾಗೂ ರಫ್ತು ಬಗ್ಗೆ ಚರ್ಚೆ ನಡೆಸಿ, ಅಡಿಕೆ ಉತ್ಪಾದನೆ ಮತ್ತು ಸರಬರಾಜು ಎರಡನ್ನೂ ಉತ್ತೇಜಿಸುವ ಅಗತ್ಯದ ಬಗ್ಗೆ ಮಾತುಕತೆ ನಡೆಸಿದೆ.
ಅಡಿಕೆ ಉತ್ಪಾದನೆ ಮತ್ತು ಆಮದು ಹೆಚ್ಚಳವು ದೇಶದ ಆದಾಯ ಸಂಗ್ರಹಕ್ಕೆ ಕೊಡುಗೆ ನೀಡುತ್ತದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಝಾಪಾದಲ್ಲಿ ಅಡಿಕೆ ಸಂಸ್ಕರಣೆಗೆ ಸಾಕಷ್ಟು ಹಣ ನಿಗದಿಪಡಿಸಲಾಗಿದೆ.ಈಗ ನೇಪಾಳವು ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತದೆ ಎಂದು ನೇಪಾಳದ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವ ದಾಮೋದರ್ ಭಂಡಾರಿ ಸಭೆಯಲ್ಲಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಇದರ ಜೊತೆಗೇ, ದೇಶದಲ್ಲಿಯೇ ಆಹಾರ ಧಾನ್ಯಗಳ ಉತ್ಪಾದನೆಯನ್ನು ಕೂಡಾ ಹೆಚ್ಚಿಸುವ ಅಗತ್ಯವನ್ನು ಅವರು ಹೇಳಿದರು.
ಸದ್ಯ ನೇಪಾಳದ 15 ಪ್ರದೇಶಗಳು ಅಡಿಕೆ ಉತ್ಪಾದನೆಗೆ ಉತ್ತಮವಾದ ವಾತಾವರಣವನ್ನು ಹೊಂದಿದೆ. ಸದ್ಯ ಝಾಫಾ ಸೇರಿದಂತೆ 4 ಜಿಲ್ಲೆಗಳಲ್ಲಿ ಮಾತ್ರವೇ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಅಡಿಕೆ ರಫ್ತು ಹಾಗೂ ಆದಾಯ ಸಂಗ್ರಹದಲ್ಲಿ ಅಡಿಕೆಯ ಕೊಡುಗೆಯ ಜೊತೆಗೆ ಸರ್ಕಾರವು ರಫ್ತು ಮಾಡಬಹುದಾದ ದೇಶಗಳ ಬಗ್ಗೆಯೂ ಅನ್ವೇಷಣೆ ಮಾಡಬೇಕು ಎಂದೂ ಸಭೆಯಲ್ಲಿ ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಫ್ತು ಮಾಡುವ ವೇಳೆ ನೇಪಾಳದ ಅಡಿಕೆಯನ್ನಷ್ಟೇ ರಫ್ತು ಮಾಡಲು ಸೂಕ್ತವಾದ ವ್ಯವಸ್ಥೆಯೂ ಅಗತ್ಯ ಇದೆ ಎಂದು ರೈತ ಮುಖಂಡರು ಹೇಳಿದ್ದಾರೆ.ಇಲ್ಲದಿದ್ದರೆ ಇದೇ ವಿಚಾರವೂ ಮುಂದೆ ಚರ್ಚೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.