Arecanut | ಅಡಿಕೆ ಗಿಡದ ಕಾಂಡದ ಬುಡಕ್ಕೆ ಗಾಯವಾದರೆ ಹೀಗಾಗುತ್ತದೆ…!, ಇರಲಿ ಎಚ್ಚರ |

October 25, 2023
4:56 PM
ಅಡಿಕೆ ಗಿಡದ ಬುಡಕ್ಕೆ ಪೆಟ್ಟಾಗಬಾರದು. ಗುದ್ದಲಿ ಪೆಟ್ಟು, ಕಳೆ ಮಿಷನ್ ರೋಪ್ ನ ಪೆಟ್ಟು , ಸೂರ್ಯನ ತೀಕ್ಷ್ಣ ಕಿರಣದ ತಾಪ ಇತ್ಯಾದಿಗಳನ್ನು ಗಿಡ ಸಹಿಸೋಲ್ಲ... ಆದ್ದರಿಂದ ಅಡಿಕೆ ಮರದ ಬುಡದ ಕಳೆ ಹೊಡೆವಾಗ, ಅಗತೆ ಮಾಡುವಾಗ ಜಾಗೃತೆ ಇರಬೇಕು.

ಅಡಿಕೆ ಚಿಕ್ಕ ಸಸಿಮರಗಳ ಬುಡದಲ್ಲಿ ಕಳೆ ಮಿಷನ್ ನಲ್ಲಿ ಕಳೆ ಹೊಡೆಯುವಾಗ ರೋಪ್ ತಾಗಿದ ಪರಿಣಾಮವಾಗಿ ಅಡಿಕೆ ಮರದ ಕಾಂಡದ ಬುಡಕ್ಕೆ ಗಾಯವಾದಲ್ಲಿ ಅದು ಮುಂದಿನ ದಿನಗಳಲ್ಲಿ ಹೀಗೆ ಸುಟ್ಟು ಹೋಗುತ್ತದೆ. ಈ ತರಹ ಸುಟ್ಟು ಕರಕಲಾಗಲು ಇನ್ನೂ ಎರಡು ಕಾರಣಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ……

Advertisement

ಅಡಿಕೆ ಮರದ ಬುಡದಲ್ಲಿ ಗುದ್ದಲಿಯಲ್ಲಿ ಕಡಿದು ಬೇಸಾಯ ಮಾಡುವಾಗ ಗುದ್ದಲಿ ತಾಗಿದರೆ ನಂತರದ ದಿನಗಳಲ್ಲಿ ಆ ಗಾಯ ದೊಡ್ಡ ಆಗಿ ಹೀಗೆ ಸುಟ್ಟುಹೋದಂತಾಗುತ್ತದೆ‌. ಇದು ಅಡಿಕೆ ಸಸಿ ಮರ ಮಾತ್ರವಲ್ಲದೇ ದೊಡ್ಡ ಮರದ ವಿಚಾರದಲ್ಲೂ ಅಷ್ಟೇ ಗುದ್ದಲಿ ಪೆಟ್ಟು ಬುಡದ ಕಾಂಡದ ಆರಂಭಕ್ಕೆ ಬಿದ್ದರೆ ಒಂದು ವರ್ಷದಲ್ಲಿ ಮರವೇ ಸತ್ತು ಹೋಗುವ ಅಪಾಯವಿರುತ್ತದೆ. ಆಕಸ್ಮಾತ್ತಾಗಿ ಮರ ಸಾಯದಿದ್ದಲ್ಲಿ ಬುಡ ಹೀಗೆ ಸುಟ್ಟು ಹೋದಂತಾಗುತ್ತದೆ.

ಅಡಿಕೆ ಮರಕ್ಕೆ ಸಂಜೆಯ ಇಳಿ ಬಿಸಿಲು ಹೊಡೆದಾಗಲೂ ಹೀಗೆಯೇ ಆಗುತ್ತದೆ. ಆದರೆ ಹಾಗೆ ಬಿಸಿಲಿನ ತೀಕ್ಷ್ಣತೆಯಿಂದ ಹೊಡೆವಾಗ ಯಾವುದೋ ಒಂದು ನಿರ್ದಿಷ್ಟ ಭಾಗ ಮಾತ್ರ ಸುಡದು. ಒಂದು ಮೈ ಉದ್ದಕ್ಕೂ ಸುಡುತ್ತದೆ.

ಈ ಚಿತ್ರದಲ್ಲಿ ಸುಟ್ಟ ಗುರುತು ಇಳಿ ಬಿಸಿಲಿನ ತೀಕ್ಷ್ಣತೆಗೆ ಆದದ್ದಲ್ಲ.ಹೀಗೆ ಇಳಿಬಿಸಿಲಿನ ತೀಕ್ಷ್ಣತೆಗೆ ಸುಟ್ಟ ಅಡಿಕೆ ಮರವನ್ನು
ನಮ್ಮ ಮಲೆನಾಡಿನಲ್ಲಿ ಸುಟುಗಲು ಮರ ಅಂತಾರೆ.‌ಹಿಂದೆ ಕೊನೆಗಾರರು ಮರ ಹತ್ತುವ ಕಾಲದಲ್ಲಿ (ಈಗ ದೋಟಿ ಕಾಲ ಅಲ್ವ…? ಹಾಗಾಗಿ) ಇಂತಹ ಸುಟುಗಲು damage ಮರವನ್ನು ಹತ್ತುತ್ತಿರಲಿಲ್ಲ…!!

ಹಿಂದಿನವರು ಅಡಿಕೆ ತೋಟ ಮಾಡುವ ಜಾಗವನ್ನು ನೈಋತ್ಯ ಮಾರುತದ ದಿಕ್ಕು, ಇಳಿಬಿಸಿಲಿನ ತೀವ್ರತೆಯ ಬಿಸಿಲು ಹೊಡೆಯದಿರುವ ನೈಸರ್ಗಿಕ ಕಾಡು ಇಲ್ಲ ಪರ್ವತ ಗಳ ಮರೆ ಇರುವ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು . ಇಂತಹ ಭೂಮಿಯ ಅಡಿಕೆ ಕೃಷಿಯನ್ನು “ಸಾಂಪ್ರದಾಯಿಕ ಅಡಿಕೆ ಕೃಷಿ ” ಎನ್ನುವದು.

ಈ ತರಹ ಮರ ಸುಟ್ಟರೆ ವಾಸಿಯಾಗೋಲ್ಲ. ಇದಕ್ಕೆ ಯಾವುದೇ ಔಷಧವಿಲ್ಲ. ಇಳಿ ಬಿಸಿಲಿಗೆ ಕೆಲವರು ಸೋಗೆ ಹಾಳೆ ಕಟ್ಟಿದರೆ ಇನ್ನು ಕೆಲವರು ಸುಣ್ಣ ಹೊಡಿತಾರೆ. ಆದರೆ ಐವತ್ತು ಅರವತ್ತು ಅಡಿ ಎತ್ತರ ಬೆಳೆವ ಅಡಿಕೆ ಮರ ಕ್ಕೆ ಎಷ್ಟು ಎತ್ತರದ ತನಕ ಸುಣ್ಣ ಹೊಡೆಯಲು ಸಾದ್ಯ….? ಇದಕ್ಕೆ ಪಗಡೆ ಸಾಲು ಎಂಬ ಮಾದರಿಯ ಅಡಿಕೆ ಸಸಿ ಯನ್ನು ನೆಡುವ ಯೋಜನೆ ರೂಪಿಸಿ ಈ ಇಳಿ ಸಂಜೆಯ ಸೂರ್ಯನ ತೀಕ್ಷ್ಣ ಬಿಸಿಲು ಆರಂಭದ ಮರಕ್ಕೆ ಮಾತ್ರ ಬೀಳುವಂತೆ ತಡೆಯುತ್ತಾರೆ‌.

ಈ ಕಾಂಡಕ್ಕೆ ಆದ ಈ ಗಾಯದ ಸುಟ್ಟ ಗುರುತಿನ ಕರಕಲು ಕಲೆಯಿಂದ ಮರ ತಕ್ಷಣ ಕ್ಕೆ ಸಾಯೋಲ್ಲ…!! ಆದರೆ
ಫಸಲು ಮಾಮೂಲಿ ಮರಕ್ಕಿಂತ ತುಸು ಹೆಚ್ಚೇ ಬರುತ್ತದೆ.ಆದರೆ ಯಾವತ್ತೋ ಒಂದು ದೊಡ್ಡ ಮಳೆ ಗಾಳಿ ಬಂದಾಗ ಮರ ಆ ಸುಟ್ಟ ಜಾಗಕ್ಕೆ ಮುರಿದು ಬಿದ್ದು ಹೋಗುವ ಸಾಧ್ಯತೆ ಹೆಚ್ಚು…

ಅಡಿಕೆ ಮರ hard  ಆದರೂ ಅಡಿಕೆ ಮರದ ಈ ಭಾಗ ಅತ್ಯಂತ ಮೃದು. ಈ‌ ಭಾಗಕ್ಕೆ ಗುದ್ದಲಿ ಪೆಟ್ಟು, ಕಳೆ ಮಿಷನ್ ರೋಪ್ ನ ಪೆಟ್ಟು , ಸೂರ್ಯನ ತೀಕ್ಷ್ಣ ಕಿರಣದ ತಾಪ ಇತ್ಯಾದಿಗಳನ್ನು ಸಹಿಸೋಲ್ಲ… ಆದ್ದರಿಂದ ಅಡಿಕೆ ಮರದ ಬುಡದ ಕಳೆ ಹೊಡೆವಾಗ, ಅಗತೆ ಮಾಡುವಾಗ ಜಾಗೃತೆ ಇರಬೇಕು.

ಬರಹ :
ಪ್ರಬಂಧ ಅಂಬುತೀರ್ಥ
Precautionary measures to be taken in Arecanut cultivation.
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ
ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ
ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ
May 5, 2025
12:02 PM
by: The Rural Mirror ಸುದ್ದಿಜಾಲ
ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?
May 5, 2025
6:52 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group