ಅಡಿಕೆ ಬೆಳೆ ವಿಸ್ತರಣೆ | ಚರ್ಚೆಯ ನಡುವೆ ಆತಂಕ ವ್ಯಕ್ತಪಡಿಸಿದ ಸಚಿವರು |

December 22, 2022
10:10 AM

ರಾಜ್ಯದಲ್ಲಿ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ಅಡಿಕೆ ಬೆಳೆ ವಿಸ್ತಾರವಾಗುತ್ತಿರುವ ಬಗ್ಗೆ ಸಚಿವ ಅರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು. ಅಡಿಕೆ ಬೆಳೆ ಪ್ರದೇಶವನ್ನು ಗಮನಿಸಿದರೆ ಮುಂದೊಂದು ದಿನ ಬೆಲೆ ಕುಸಿದು ಬೀಳುವ ಆತಂಕವಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು.

ರಾಜ್ಯದಲ್ಲಿ ಅಡಿಕೆಯ ಸದ್ಯದ ಮಾರುಕಟ್ಟೆಯ ಧಾರಣೆಯ ಕಾರಣದಿಂದ ಅಡಿಕೆ ಬೆಳೆ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದೆ. ಆದರೆ ಇದು ಬಹು ಅಪಾಯಕಾರಿ ಎನ್ನುವುದನ್ನು ಈಗಾಗಲೇ ಹಲವಾರು ಮಂದಿ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ಈಗಾಗಲೇ ಕಂಡುಬಂದಿರುವ ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಾರದೆ ಕೃಷಿಕರು ಕಂಗಾಲಾಗಿದ್ದಾರೆ. ಈ ನಡುವೆಯೇ ಅಡಿಕೆಯ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗೆ ವಿಜ್ಞಾನಿಗಳಿಗೂ ಮೂಲಭೂತ ವ್ಯವಸ್ಥೆಗಳ ಕೊರತೆ ಇದೆ.  ಹೀಗಾಗಿ ಬೆಳೆ ವಿಸ್ತರಣೆಯಾದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳೂ ಹೆಚ್ಚಾಗಲಿದೆ ಎನ್ನುವುದನ್ನೂ ಹಲವು ತಜ್ಞರು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅಡಿಕೆಗೆ ಯಥೇಚ್ಛವಾಗಿ ನೀರು ಬೇಕಾಗುತ್ತದೆ, ಮಲೆನಾಡು ಹೊರತುಪಡಿಸಿ ಇತರ ಕಡೆಗಳಲ್ಲು ಅಡಿಕೆ ಬೆಳೆ ವ್ಯಾಪಕ ವಿಸ್ತರಣೆಯು ಅಂತರ್ಜಲ ಕೊರತೆಗೂ ಕಾರಣವಾಗುವುದು ಅಲ್ಲದೆ ಹಲವು ಅಧ್ಯಯನಗಳೂ ಅಂತಹ ಕಡೆಗಳಲ್ಲಿ ಆಗಬೇಕಾಗಿದೆ.

ಪಾರಂಪರಿಕವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾದ ದಕ್ಷಿಣ ಕನ್ನಡ, ಕಾಸರಗೋಡು, ಮಲೆನಾಡು ಭಾಗಗಳಾದ ಉತ್ತರಕನ್ನಡ , ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಸದ್ಯ ಪರ್ಯಾಯ ಬೆಳೆ ಬಗ್ಗೆ ಮಾತನಾಡುವಾಗ  ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇಲ್ಲಿ ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಜೊತೆಯಾಗಿದ್ದರೂ ಆಹಾರ ಬೆಳೆ ಈಗ ಕಷ್ಟವಾಗಿದೆ.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror