ಮಿಜೋರಾಂ ರಾಜ್ಯಾದ್ಯಂತ ಸುಮಾರು 30,000 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಕಳೆದ ವರ್ಷ ಸುಮಾರು 2 ಲಕ್ಷ ಕ್ವಿಂಟಾಲ್ ಅಡಿಕೆ ಕೊಯ್ಲು ಮಾಡಲಾಗಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯದ ಹಲವು ಕಡೆಗಳಲ್ಲಿ ಅಡಿಕೆ ಬೆಳಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸರ್ಕಾರವೇ ವಿವಿಧ ರೀತಿಯಲ್ಲಿ ಅಡಿಕೆ ಕೃಷಿಗೆ ಬೆಂಬಲ ನೀಡುತ್ತಿದೆ. ಸುಮಾರು 30,000 ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ ಎಂದು ಮಿಜೋರಾಂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರ ಜೊತೆಗೆ, ಸರಿಯಾದ ಮಾರುಕಟ್ಟೆ ಸಂಪರ್ಕ ವ್ಯವಸ್ಥೆಯ ಮೂಲಕ ಅಡಿಕೆ ಮಿಜೋರಾಂನ ಆರ್ಥಿಕತೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಡಿಕೆ ಬೆಳೆ ಉತ್ತಮ ಲಾಭವನ್ನು ನೀಡುತ್ತಿರುವುದರಿಂದ ರಾಜ್ಯ ಸರ್ಕಾರವು ತೋಟಗಳ ವಿಸ್ತರಣೆಯನ್ನು ಪ್ರೋತ್ಸಾಹಿಸಿದೆ ಎಂದು ಲಾಲ್ದುಹೋಮಾ ಹೇಳಿದ್ದಾರೆ. ಈ ವರ್ಷ ಉತ್ತಮ ಇಳುವರಿಯ ನಿರೀಕ್ಷೆ ಇದ್ದು, ಇದುವರೆಗೆ ತ್ರಿಪುರ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರು ಈ ವರ್ಷ ಇದುವರೆಗೆ 50 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಡಿಕೆ ಕೊಯ್ಲು ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಅಡಿಕೆ ಬೆಳೆಗೆ ಪ್ರೋತ್ಸಾಹದ ನಿಟ್ಟಿನಲ್ಲಿ ಅಡಿಕೆ ಕೃಷಿಯನ್ನು ಸಾಲದ ಘಟಕದ ಅಡಿಯಲ್ಲಿ ಮತ್ತು ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಪ್ರಮುಖ ಹ್ಯಾಂಡ್ ಹೋಲ್ಡಿಂಗ್ ಯೋಜನೆಯಡಿಯಲ್ಲಿಯೂ ತೆಗೆದುಕೊಳ್ಳಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಲು ಮತ್ತು ಮಾರುಕಟ್ಟೆಯನ್ನು ಬೆಂಬಲಿಸಲು ಅಸ್ಸಾಂ ಗಡಿಯಲ್ಲಿ ಮಿಜೋರಾಂ ಸರ್ಕಾರ ಅಡಿಕೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ. ಇನ್ನೂ ಎರಡು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಅಡಿಕೆಯ ಜೊತೆಗೆ ರಬ್ಬರ್ ಬೆಳೆಯನ್ನು ಕೂಡಾ ವಿಸ್ತರಣೆ ಮಾಡಲಾಗುತ್ತಿದೆ. ಅಡಿಕೆ ಬೆಳೆಯ ಜೊತೆಗೆ ಉಪಬೆಳೆಗೂ ಈಗ ಆದ್ಯತೆ ನೀಡಲಾಗುತ್ತಿದ್ದು ಪೊರಕೆಯಂತಹ ಸಣ್ಣ ಉದ್ಯಮಗಳೂ ಸ್ಥಾಪನೆಯಾಗುತ್ತಿದೆ.
ಈ ನಡುವೆ ಕಳ್ಳಸಾಗಾಣಿಕೆಯ ಮೂಲಕ ಮ್ಯಾನ್ಮಾರ್‌ನಿಂದ ಬರುತ್ತಿರುವ ಅಡಿಕೆಯ ತಡೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಮ್ಯಾನ್ಮಾರ್ ಅಡಿಕೆ ಕಾರಣದಿಂದ ಈಶಾನ್ಯ ರಾಜ್ಯಗಳ ಅಡಿಕೆಯ ಧಾರಣೆ ಮೇಲೆ ಪರಿಣಾಮ ಬೀರುವುದರಿಂದ ಅಡಿಕೆ ತಡೆಗೆ ಪ್ರಯತ್ನ ನಡೆಯುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.


