Advertisement
MIRROR FOCUS

#Agriculure | ಅಡಿಕೆಗೂ ಬರುತ್ತದೆ ಹವಾಮಾನ ಆಧಾರಿತ ಬೆಳೆವಿಮೆ | ಜುಲೈ ಅಂತ್ಯದೊಳಗೆ ಪ್ರೀಮಿಯಂ ಪಾವತಿಗೆ ಸಿದ್ಧವಾಗಲಿದೆ | ಸಹಕಾರಿ ಸಂಘಗಳಲ್ಲಿ ಇರಲಿದೆ ಒತ್ತಡ…? |

Share

 ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿಯಾಗಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮೆ ಜಾರಿಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿಇನ್ನಷ್ಟೇ ಜಾರಿಯಾಗಬೇಕಿದೆ. ಆಗಸ್ಟ್‌.1 ರಿಂದ ಈ ವಿಮೆ ಜಾರಿಗೆ ಬರುವಂತೆ ಸಿದ್ಧತೆಯಾಗುತ್ತಿದೆ. ಮುಂದಿನ ವಾರ ನೋಟಿಫಿಕೇಶನ್‌ ಬಂದು ನಂತರ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ದಿನ  ನಿಗದಿಯಾಗಬಹುದು. ಕಡಿಮೆ ಅವಧಿಯಲ್ಲಿ ಪ್ರೀಮಿಯಂ ಪಾವತಿಯ ಸಂದರ್ಭ ಸಹಕಾರಿ ಸಂಘಗಳಲ್ಲಿ ಹೆಚ್ಚಿನ ಒತ್ತಡ ಕಂಡುಬರದಂತೆ ಈಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಸಂದರ್ಭ ಬರಬಹುದು.

Advertisement
Advertisement

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಅಡಿಕೆಯ ಬಗ್ಗೆ ಜೂನ್‌ ಅಂತ್ಯವಾದರೂ ಯಾವುದೇ ಪ್ರಸ್ತಾಪ ಇರಲಿಲ್ಲ. ಬಳಿಕ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಬೆಳೆಗಾರ ಸಂಘಟನೆಗಳು ಚರ್ಚೆ ಆರಂಭವಾದವು. ವಾಸ್ತವದಲ್ಲಿ ಬೆಳೆ ವಿಮೆಗೆ ಟೆಂಡರ್‌ ಕರೆದರೂ ವಿಮಾ ಕಂಪನಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಇದೀಗ ಎರಡನೇ ಬಾರಿಗೆ ಕರೆದಿರುವ ಟೆಂಡರ್‌ ನಲ್ಲಿ ವಿಮಾ ಕಂಪನಿ ಭಾಗವಹಿಸಿದೆ. ಹಲವು ಜಿಲ್ಲೆಗಳಲ್ಲಿ ನೀತಿ ನಿಯಮಗಳು ಅಂತಿಮವಾಗಿ ಬೆಳೆ ವಿಮೆ ಜಾರಿಯಾಗಿದೆ.

Advertisement
ತುಮಕೂರು ಜಿಲ್ಲೆಯ ನೋಟಿಫಿಕೇಶನ್

ಆದರೆ ಅಡಿಕೆ , ಮಾವು  ಸಹಿತ   ದೀರ್ಘಾವಧಿ ಇತರ ಕೆಲವು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆಗೆ ಮಾತ್ರಾ ವಿಮಾ ಕಂಪನಿಗಳು ಭಾಗವಹಿಸಿರಲಿಲ್ಲ. ಹೀಗಾಗಿ ಸಮಸ್ಯೆ ಆಗಿತ್ತು. ಇದೀಗ ಮತ್ತೆ ವಿಮಾ ಕಂಪನಿಗಳು ಟೆಂಡರ್‌ ನಲ್ಲಿ ಭಾಗವಹಿಸಿದೆ. ದಕ್ಷಿಣ ಕನ್ನಡ ಸಹಿತ ಕೆಲವು ಜಿಲ್ಲೆಗಳ ಬೆಳೆಗಳೂ ಇದರಲ್ಲಿ ಸೇರಿವೆ. ಇನ್ನಷ್ಟೇ ಅಂತಿಮ ರೂಪ ಪಡೆಯಬೇಕಿದೆ. ಮುಂದಿನ ವಾರದಲ್ಲಿ ಅಂತಿಮವಾಗಿ ನೋಟಿಫೀಕೇಶನ್‌ ಬಂದ ಬಂದ ವಿಮಾ ಪ್ರೀಮಿಯಂ ಪಾವತಿ ದಿನ ನಿಗದಿಯಾಗುತ್ತದೆ. ಜು.31 ರ ಒಳಗಾಗಿ ಪ್ರೀಮಿಯಂ ಪಾವತಿ ಮಾಡಿ ಆ.1 ರಿಂದ ವಿಮೆ ಜಾರಿಯಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಅಡಿಕೆ , ಮಾವು ಸಹಿತ ಇತರ ಬೆಳೆಗಳಿಗೆ ವಿಮೆ ಜಾರಿಯಾಗಿದೆ. ಇನ್ನೂ ಹಲವು ಜಿಲ್ಲೆಗಳಿಗೆ ಬಾಕಿ ಇದೆ.

ಕೃಷಿಕ, ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್‌ ದೇಲಂಪಾಡಿ ಅವರ ಅಭಿಪ್ರಾಯ :

Advertisement

ಪ್ರೀಮಿಯಂ ಪಾವತಿಗೆ ಕಡಿಮೆ ದಿನವಾದಷ್ಟು ಸಹಕಾರಿ ಸಂಘಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರೆಯಾಗುವ ಸಾಧ್ಯತೆ ಇರುತ್ತದೆ. ಸರ್ವರ್‌ ಸಮಸ್ಯೆ, ಪ್ರೀಮಿಯಂ ಪಾವತಿ ವ್ಯವಸ್ಥೆ ಇತ್ಯಾದಿಗಳು ಸಮಸ್ಯೆಯಾಗಬಹುದು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಹಸ್ಯ ಕಥೆಗಳನ್ನು ಹೇಳುವ ಭೀಮ್’ಕುಂಡ್ : ಭೀಮ ನಿರ್ಮಿಸಿದ ಈ ಕೆರೆಯ ವಿಶೇಷತೆ ಏನು ಗೊತ್ತಾ..? ಇದು ಬರೀ ಬಾವಿಯಲ್ಲ…

ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…

17 mins ago

ಭಾರತದಲ್ಲಿ ಕೃಷಿ ಅರಣ್ಯ : ಆದ್ಯತೆ ಮತ್ತು ಪರಿಸರಕ್ಕಾಗುವ ಲಾಭ

ಕೃಷಿ ಅರಣ್ಯಶಾಸ್ತ್ರವು(Agroforestry) ಸಾಂಪ್ರದಾಯಿಕ(Cultural) ಮತ್ತು ಆಧುನಿಕ ಭೂ-ಬಳಕೆಯ(Modern land-use) ವ್ಯವಸ್ಥೆಗಳನ್ನು ವಿವರಿಸುತ್ತದೆ, ಅಲ್ಲಿ ಮರದ…

32 mins ago

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದೆಲಗ : ಕೈ ತೋಟಗಳಲ್ಲಿ ಸಿಗುವ ಸುಲಭೌಷಧಿ

ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…

51 mins ago

ಕರಾವಳಿ ಭಾಗದಲ್ಲಿ ಭಾರಿ ಮಳೆ : ಮಂಗಳೂರಿನ ಸಮುದ್ರ ತೀರದಲ್ಲಿ ಹೈಅಲರ್ಟ್: ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದ

ಕಳೆದ ವರ್ಷ ಮುಂಗಾರು ಮಳೆ(Mansoon Rain) ಕೊಟ್ಟ ಹಿನ್ನೆಲೆ, ಈ ಬಾರಿ ರಾಜ್ಯದ್ಯಂತ…

1 hour ago

ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |

ರಬ್ಬರ್‌ ಆಮದು ತಡೆಯಾದರೆ ಟಯರ್‌ ಉದ್ಯಮ ಹಾಗೂ ರಬ್ಬರ್‌ ಬೆಳೆಗಾರರ ರಕ್ಷಣೆ ಸಾಧ್ಯವಿದೆ…

3 hours ago