Exclusive - Mirror Hunt

ಅಡಿಕೆ ಕೃಷಿ ಭವಿಷ್ಯದಲ್ಲಿ ಎದುರಿಸಬೇಕಾಗುವ ಸವಾಲು ಯಾವುದು….? | ಮಿಶ್ರ ಕೃಷಿಯ ಅನಿವಾರ್ಯತೆ ಏಕೆ..? | ಗಮನದಲ್ಲಿರಲಿ ಅಧ್ಯಯನ ವರದಿ ಹೇಳಿರುವ ಅಂಶ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಕೃಷಿ ಬಣ್ಣ ಬಣ್ಣದ ವಿಡಿಯೋಗಳು ಅನೇಕ ಕೃಷಿಕರನ್ನು ಸೆಳೆದಿದೆ. ಅಡಿಕೆ ಭವಿಷ್ಯ ಏನು ಎಂಬುದರ ಬಗ್ಗೆ ಯೋಚಿಸುವುದಕ್ಕೂ ಸಮಯವಿಲ್ಲದಾಗಿದೆ. ಗುಡ್ಡದಿಂದ ತೊಡಗಿ ಕಾಡಲ್ಲೂ ಅಡಿಕೆ ಕೃಷಿ ವಿಸ್ತರಣೆಗೊಂಡಿದೆ. ಸಹಜವಾಗಿಯೇ ಅಡಿಕೆ ಮಾರುಕಟ್ಟೆ ಬಗ್ಗೆಯೂ ಆತಂಕವನ್ನೂ ಹಲವಾರು ಮಂದಿ ತೋಡಿಕೊಂಡರೂ “ಏನೂ ಆಗದು” ಎನ್ನುವ ಅಭಿಪ್ರಾಯಗಳು ಬಂದಿದ್ದವು. ಇದೀಗ ಅಧ್ಯಯನ ವರದಿಯೊಂದು ಅಡಿಕೆ ಬೆಳೆಗಾರರು ಮತ್ತೆ ಕಣ್ತೆರೆಯುವಂತೆ ಮಾಡಿದೆ. ಅಡಿಕೆ ಮಾರುಕಟ್ಟೆ, ಹವಾಮಾನವು ಅಡಿಕೆ ಬೆಳೆಗಾರರಿಗೆ ಭವಿಷ್ಯದಲ್ಲಿಕಾಡುವ ಬಹುದೊಡ್ಡ ಸವಾಲುಗಳಾಗಿದೆ.ಹೀಗಾಗಿ ಅಡಿಕೆಯ ಜೊತೆಗೆ ಉಪಬೆಳೆ ಅಥವಾ ಇನ್ನೊಂದು ಆದಾಯವನ್ನೂ ಯೋಜಿಸಿಕೊಳ್ಳುವುದು , ಸಮಗ್ರ ಕೃಷಿ ಪದ್ಧತಿಯ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.…..ಮುಂದೆ ಓದಿ….

Advertisement

ಮದ್ರಾಸ್ ಕೃಷಿ ಜರ್ನಲ್‌ನಲ್ಲಿ ಈಚೆಗೆ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಭಾರತದಲ್ಲಿ ಅಡಿಕೆ ಕೃಷಿ ಹಾಗೂ ಸವಾಲುಗಳು, ಅವಕಾಶಗಳು  ಮತ್ತು ಸುಸ್ಥಿರ ವಿಧಾನಗಳ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಮಲತಾ, ಕೆ , ಸೌಂದರ್ಯ, ಎಚ್.ಎಲ್. , ಕೀರ್ತಿ ಶರ್ಮಾ, ಮೇಘನಾ ಸುರೇಶ್ ನಾಯಕ್ ಅವರು ಮಂಡಿಸಿರುವ ಅಧ್ಯಯನ ವರದಿಯಲ್ಲಿ ಅಡಿಕೆ ಬೆಳೆಗಾರರ ಭವಿಷ್ಯದ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ತಿಳಿಸಿದ್ದಾರೆ.

ಭಾರತದಲ್ಲಿ ಕರ್ನಾಟಕದ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲಿ ವಿಶೇಷವಾಗಿ ಅಡಿಕೆ ಬೆಳೆಯುವ ಪ್ರದೇಶಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿನ ವಾತಾವರಣವು ಅಡಿಕೆ ಬೆಳೆಗೆ ಸೂಕ್ತವಾಗಿತ್ತು. ಸುಮಾರು 70-80 ವರ್ಷಗಳ ಹಿಂದೆ ಅಡಿಕೆ ಬೆಳೆಯು ಮಲೆನಾಡು ಭಾಗವನ್ನು ಪ್ರವೇಶಿಸಿದ ನಂತರ ಕೊಳೆರೋಗಕ್ಕೆ ಕೂಡಾ ಔಷಧಿ ಸಿಂಪಡಣೆ ಮಾಡದೆ ಅಡಿಕೆಯನ್ನು ಬೆಳೆಯುತ್ತಿದ್ದ ದಿನಗಳು ಇದ್ದವು. ಕ್ರಮೇಣ ಕೊಳೆರೋಗದ ಔಷಧಿಯಿಂದ ತೊಡಗಿ ಇಂದು ಎಳೆ ಅಡಿಕೆ ಬೀಳದಂತೆಯೂ ವಿವಿಧ ಬಗೆಯ ಔಷಧಿ ಸಿಂಪಡಣೆ ಅನಿವಾರ್ಯ ಎನ್ನುವ ಮಟ್ಟಿಗೆ ಅಡಿಕೆ ಕೃಷಿ ಬಂದಿದೆ. ಅದರ ಜೊತೆಗೆ ವಿವಿಧರೋಗಗಳೂ ಕಾಣಿಸಿಕೊಳ್ಳಲು ಆರಂಭವಾಗಿದೆ. ಹವಾಮಾನವೂ ಕೈಕೊಡುತ್ತಿರುವುದು ಒಂದು ಕಡೆಯಾದರೆ ಮಾರುಕಟ್ಟೆ ಏರಿಳಿತವೂ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಈ ನಡುವೆ ಅಡಿಕೆ ಧಾರಣೆಯ ಕಾರಣದಿಂದ  ಅಡಿಕೆ ಬೆಳೆ ವಿಸ್ತರಣೆಯ ವೇಗವೂ ಹೆಚ್ಚಿದೆ.  ಈ ಮಧ್ಯೆ ಅಡಿಕೆ ಬೆಳೆಗಾರರ ಸವಾಲುಗಳು ಹೆಚ್ಚಾಗಿದೆ. ಇದೇ ವೇಳೆ ನಡೆದ ಅಧ್ಯಯನ ವರದಿಯ ಹಲವು ಅಂಶಗಳನ್ನು ಬೆಳೆಗಾರರ ಮುಂದೆ ಇರಿಸಿದೆ.

ಅಧ್ಯಯನ ವರದಿಯ ಪ್ರಕಾರ,ಅಡಿಕೆ ಕೃಷಿಯು ಹಲವಾರು ಸವಾಲುಗಳನ್ನು ಎದುರಿಸುತ್ತದೆ ಮತ್ತು ಕೆಲವು ಅವಕಾಶಗಳನ್ನು ಎದುರುನೋಡುತ್ತಿದೆ.
ಹವಾಮಾನ ವೈಪರೀತ್ಯಗಳು, ಮಣ್ಣಿನ ಫಲವತ್ತತೆ ಕಡಿಮೆಯಾಗುವುದು ಮತ್ತು ಕೀಟಗಳ ಬಾಧೆ ಇಂದು ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತಿದೆ. ಸಾಂಪ್ರದಾಯಿಕ ಕೃಷಿ ವಿಧಾನಗಳು ಮತ್ತು ಇಂದಿನ ಆಧುನಿಕ ಕೃಷಿ ಜ್ಞಾನಕ್ಕೆ ಕೃಷಿಕರು ಹೆಚ್ಚು ತೆರೆದುಕೊಳ್ಳದೇ ಇರುವುದು ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಏರಿಳಿತದ ಮಾರುಕಟ್ಟೆ ಬೆಲೆಗಳು ಅಡಿಕೆ ಬೆಳೆಗಾರರ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತಿವೆ. ಹಾಗಿದ್ದರೂ, ಅಡಿಕೆ ಕೃಷಿಯಲ್ಲಿ ಭರವಸೆಗಳು ಇವೆ. ಭವಿಷ್ಯದಲ್ಲಿ ಅಡಿಕೆ ಬೆಳೆಯೂ ಉತ್ತಮ ಆದಾಯ ತರುವ ಕೃಷಿಯಾಗಿಯೂ ಉಳಿದುಕೊಳ್ಳಲಿದೆ. ಹೀಗಾಗಿ ಕೃಷಿಕರ ಹಿತದೃಷ್ಟಿಯಿಂದ ಅಡಿಕೆ ಕೃಷಿಯನ್ನು ಉಳಿಸುವುದು ಕೂಡಾ ಅನಿವಾರ್ಯವಾಗಿದೆ.

ಅಡಿಕೆ ಕೃಷಿಯನ್ನು ಉಳಿಸಿಕೊಳ್ಳಲು ವೈವಿಧ್ಯಮಯ ಕೃಷಿ ಪದ್ಧತಿಗಳ ಅಳವಡಿಕೆ ಅಗತ್ಯ ಇದೆ.  ಉದಾಹರಣೆಗೆ, ಅಡಿಕೆಯ ಜೊತೆಗೆ ಕಾಳುಮೆಣಸು, ಬಾಳೆ, ಮತ್ತು ಕೋಕೋ, ಮತ್ತು ಸಮಗ್ರ ಕೃಷಿ ವ್ಯವಸ್ಥೆಗಳೊಂದಿಗೆ ಅಂತರ ಬೆಳೆ, ಜಾನುವಾರು ಮತ್ತು ಮೀನು ಸಾಕಣೆಯೊಂದಿಗೆ ಬೆಳೆ ಉತ್ಪಾದನೆಯನ್ನು ಹೆಚ್ಚು ಮಾಡುವುದು, ಆದಾಯ ವೃದ್ಧಿಸಿಕೊಳ್ಳುವುದು ಅಡಿಕೆ ಬೆಳೆಗಾರರಿಗೆ ಭವಿಷ್ಯದ ಯೋಜನೆಗಳಾಗಿರಬೇಕು. ಸಮಗ್ರ ಕೃಷಿ ವ್ಯವಸ್ಥೆಗಳು ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಬಹುದು. ಇಷ್ಟೇ ಅಲ್ಲ, ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವುದುಮತ್ತು ಮಾರುಕಟ್ಟೆ ಸುಸ್ಥಿರತೆ ಕಾಪಾಡಲು,  ಸುಧಾರಿಸುವುದರಿಂದ ಇಳುವರಿಯಲ್ಲಿ ಗುಣಮಟ್ಟ, ಅಡಿಕೆಯ ಗುಣಮಟ್ಟವನ್ನೂ ಕಾಯ್ದುಕೊಂಡು ಆರ್ಥಿಕತೆಯನ್ನು ಹೆಚ್ಚಿಸಬಹುದಾಗಿದೆ. ಒಟ್ಟಾರೆಯಾಗಿ ಈ ಅಧ್ಯಯನವು ಅಡಿಕೆಗೆ ಸಮಗ್ರ ವಿಧಾನದ  ಕೃಷಿ ಪದ್ಧತಿಯ ಅಗತ್ಯವನ್ನು ಒತ್ತಿಹೇಳುತ್ತದೆ.  ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವುದು, ವೈವಿಧ್ಯಮಯ ಕೃಷಿ ಪದ್ಧತಿಗಳ ಅಳವಡಿಕೆ ಭವಿಷ್ಯದ ಅಡಿಕೆ  ಸವಾಲುಗಳನ್ನು ಎದುರಿಸಿ ಸುಸ್ಥಿರ ಕೃಷಿಗೆ ಕಾರಣವಾಗಬಹುದು ಎನ್ನುವುದು ಅಧ್ಯಯನ ವರದಿ ಉಲ್ಲೇಖಿಸಿದೆ.

ಸದ್ಯ, ಅಡಿಕೆ ಕೃಷಿಕರ ಮುಂದಿರುವ ಸವಾಲುಗಳು ಹವಾಮಾನದ ವೈಪರೀತ್ಯ, ತಾಪಮಾನ ಏರಿಳಿತಗಳು ಮತ್ತು ಭಾರೀ ಮಳೆಯಂತಹ ಪರಿಸ್ಥಿತಿಗಳು.
ಪ್ರಮುಖವಾಗಿ ಹವಾಮಾನವು ಬೆಳೆ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹವಾಮಾನದ ಬದಲಾವಣೆ ಕಾರಣದಿಂದಲೂ ಮಣ್ಣಿನ ಫಲವತ್ತತೆ  ಮತ್ತು ಕೀಟಗಳ ಬಾಧೆ ಮತ್ತಷ್ಟು ಉಲ್ಬಣಗೊಳ್ಳುತ್ತಿವೆ. ಕೀಟಗಳ ನಿಯಂತ್ರಣಕ್ಕೆ  ಮತ್ತಷ್ಟು ಸಿಂಪಡಣೆಯು ಹವಾಮಾನವನ್ನು ಇನ್ನಷ್ಟು ಕೆಡಿಸುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಆತಂಕ ಹೆಚ್ಚಾಗಲು ಕಾರಣವೂ ಆಗುತ್ತಿದೆ. ಹೀಗಾಗಿ ಈಗ ಕೃಷಿ ತಂತ್ರಗಳು ಮತ್ತು ಕೃಷಿ ಮಾರುಕಟ್ಟೆ ಮಾಹಿತಿಗಳು, ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಲಾಭದಾಯಕ ವಿಧಾನಗಳು ಅಡಿಕೆ ಕೃಷಿಕರಿಗೆ ಬೇಕಾಗಿದೆ. ಅಡಿಕೆಯ ಅಸ್ಥಿರ ಮಾರುಕಟ್ಟೆ ಬೆಲೆಗಳು
ರೈತರಲ್ಲಿ ಆರ್ಥಿಕ ಅಸ್ಥಿರತೆಗೆ ,  ಅನಿಶ್ಚಿತ ಆರ್ಥಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಇದಕ್ಕಾಗಿಯೇ ಇಂದು ಅಡಿಕೆ ಬೆಳೆಗಾರರು ಅಂತರ ಬೆಳೆ ಮತ್ತು ಸಮಗ್ರ ಕೃಷಿ ವ್ಯವಸ್ಥೆಗಳನ್ನು ಮಾಡಿಕೊಂಡು,ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ.

ಅಡಿಕೆ ಬೆಳೆಯು 14 ಡಿಗ್ರಿ ತಾಪಮಾನದಿಂದ 36 ಡಿಗ್ರಿ ಒಳಗಿನ ತಾಪಮಾನದಲ್ಲಿ ಮಾತ್ರವೇ ಚೆನ್ನಾಗಿ ಬೆಳೆಯುತ್ತದೆ, ಇಳುವರಿ ಲಭ್ಯವಾಗುತ್ತದೆ. ವಿಪರೀತ ತಾಪಮಾನ ಅಥವಾ ವಿಪರೀತವಾದ ಶಿತ ಹವೆಯು ಅಡಿಕೆ ಬೆಳೆಗೆ, ಇಳುವರಿ ಮೇಲೆ ಪರಿಣಾಮ ಬೀರುತ್ತದೆ.  ವಾರ್ಷಿಕವಾಗಿ 750 ಮಿಮೀ ಮಳೆಯಿಂದ  4,500 ಮಿ.ಮೀ. ಮಳೆ ಇರುವ ಪ್ರದೇಶಗಳಲ್ಲಿ ಮಾತ್ರ ಅಡಿಕೆ ಬೆಳೆಗೆ ಸೂಕ್ತವಾಗಿರುತ್ತದೆ. ಇದರ ಹೊರತಾದ ವಾತಾವರಣದಲ್ಲಿ ಅಡಿಕೆಯಲ್ಲಿ ಉತ್ತಮ ಬೆಳೆಯಾಗಲು ಸಾಧ್ಯವಿಲ್ಲ.ಇಂದು ವಾತಾವರಣ ಉಷ್ಣತೆಯ ಏರುಪೇರು ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರಿದೆ. ಕಳೆದ ವರ್ಷದ ಹವಾಮಾನ ಬದಲಾವಣೆಯ ಪರಿಣಾಮಗಳು ಈ ಬಾರಿ ಇಳುವರಿಯ ಮೇಲೆ ಸ್ಫಷ್ಟವಾಗಿ ಗೋಚರವಾಗಿದೆ. ಇಷ್ಟೇ ಅಲ್ಲ, ನವೆಂಬರ್‌ನಿಂದ ಜನವರಿವರೆಗಿನ ಹವಾಮಾನವು ಅಡಿಕೆ ಹೂಬಿಡುವ ಹಾಗೂ ಕಾಯಿಕಟ್ಟುವ ಸಮಯದ ವಾತಾವರಣವು ಮುಂದಿನ ಇಳುವರಿಯ ಮೇಲೂ ಗಂಭೀರವಾದ ಪರಿಣಾಮ ಬೀರುತ್ತದೆ.

ಈ ಅಧ್ಯಯನ ವರದಿಯ ಪ್ರಕಾರ, ಅಡಿಕೆ ಬೆಳೆಗಾರರು ಬೆಳೆ ವಿಸ್ತರಣೆ ಮಾಡುವ ಬದಲಾಗಿ ಮಿಶ್ರಕೃಷಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ.

Climate Change , conditions like temperature fluctuations and heavy rains and market fluctuations are the challenges faced by the Arecanut farmers. In such a situation, the option before the Arecanut growers is integrated farming. In this regard, a study report published in the Madras Agricultural Journal spoke about the necessity of integrated agriculture.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

15 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

15 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

16 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

24 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

1 day ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

1 day ago