Arecanut | ಅಡಿಕೆಯಿಂದ ತಯಾರಾಗುತ್ತಿದೆ ಎನರ್ಜಿ ಡ್ರಿಂಕ್…!‌ |

Advertisement

ವಿಶ್ವದಲ್ಲಿ ಅಡಿಕೆ ಹೆಚ್ಚು ಬೆಳೆಯುವ ದೇಶ ಭಾರತ. ಹಾಗಿದ್ದರೂ ಇಂದಿಗೂ ಅಡಿಕೆ ಹಾನಿಕಾರಕ ಎಂಬ ಹಣೆಪಟ್ಟಿಯಿಂದ ಹೊರಬಂದಿಲ್ಲ. ಸರ್ಕಾರ, ಇಲಾಖೆ, ಅಧಿಕಾರಿಗಳ ನಡುವೆ ತಾಕಲಾಟ ನಡೆಯುತ್ತಲೇ ಇದೆ. ಆದರೆ ಪುಟ್ಟ ದೇಶ ವಿಯೆಟ್ನಾಂನಲ್ಲಿ ಅಡಿಕೆಯಿಂದ ಎನರ್ಜಿ ಡ್ರಿಂಕ್‌ ತಯಾರಾಗಿ ಮಾರಾಟವಾಗುತ್ತಿದೆ . ಒಂದಲ್ಲ ಮೂರು ಬಗೆಯ ಎನರ್ಜಿ ಡ್ರಿಂಕ್‌ ಅಡಿಕೆಯಿಂದಲೇ ತಯಾರಾಗುತ್ತಿದೆ.

Advertisement

ವಿಯೆಟ್ನಾಂ ದೇಶದಲ್ಲಿ ವಿವಿಧ ಬಗೆಯ ಕೃಷಿ ಉತ್ಪನ್ನಗಳು ತಯಾರಾಗುತ್ತಿದೆ. ಅದರಲ್ಲಿ ಅಡಿಕೆಯ ಎನರ್ಜಿ ಡ್ರಿಂಕ್‌ ಕೂಡಾ ಒಂದು. ಎಳೆ ಅಡಿಕೆಯಿಂದ ಈ ಡ್ರಿಂಕ್‌ ತಯಾರು ಮಾಡಲಾಗುತ್ತಿದೆ. 250 ಎಂಎಲ್‌ ನ ಬಾಟಲಿಯಲ್ಲಿ ವಿಯೆಟ್ನಾಂನಲ್ಲಿ ಈ ಡ್ರಿಂಕ್‌ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. 24 ತಿಂಗಳು ಬಾಳ್ವಿಕೆಯನ್ನು ಈ ಡ್ರಿಂಕ್‌ ಹೊಂದಿದೆ.ಕಳೆದ ಒಂದರಡು ವರ್ಷಗಳಿಂದ ಈ ಡ್ರಿಂಕ್‌ ವಿಯೆಟ್ನಾಂ ಮಾರುಕಟ್ಟೆಯಲ್ಲಿ ಹಾಗೂ ಇತರೆಡೆಗೂ ಸರಬರಾಜಾಗುತ್ತಿದೆ.

Advertisement
Advertisement
Advertisement

ಅಡಿಕೆ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದರೂ ಅಡಿಕೆ ತಿನ್ನುವುದು  ಹಾನಿಕಾರಕ ಎಂಬ ಅಪವಾದಗಳು ಕೇಳುತ್ತಲೇ ಇದೆ. ಈಚೆಗೆ ಚೀನಾದಲ್ಲಿ ಯುವ ಗಾಯಕನೊಬ್ಬ ಕ್ಯಾನ್ಸರ್‌ ನಿಂದ ನಿಧನರಾದ ಬಳಿಕ ಅಡಿಕೆ ಹಾನಿಕಾರಕ ಎಂದು ವ್ಯಾಪಕವಾಗಿ ಹಬ್ಬಿತು.

ಆದರೆ ಅಡಿಕೆಯ ಬಳಕೆ ವಿವಿಧ ರೂಪದಲ್ಲಿದೆ. ಅಡಿಕೆಯ ಎನರ್ಜಿ ಡ್ರಿಂಕ್‌ ಈಗ ಹೆಚ್ಚು ಗಮನ ಸೆಳೆದಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ನಿವೇದನ್‌  ಎಂಬವರು ಅಡಿಕೆ ಚಹಾ ತಯಾರಿಸಿ ದೇಶ ವಿದೇಶದ ಗಮನ ಸೆಳೆದಿದ್ದರು. ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಭಾರತದಲ್ಲಿ ಕೂಡಾ ಅತೀ ಅಗತ್ಯವಾಗಿ ಅಧ್ಯಯನಗಳು ನಡೆಯಬೇಕಾಗಿದೆ.

Advertisement
Advertisement
ಅಡಿಕೆಯ ಪರ್ಯಾಯ ಬಳಕೆಯ ಕಡೆಗೆ ಇಂದು ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆಯಿಂದ ಸಾಕಷ್ಟು ಬಗೆಯ ಉತ್ಪನ್ನಗಳನ್ನು ತಯಾರು ಮಾಡಲು ಸಾಧ್ಯವಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಗಮನಹರಿಸಬೇಕಾದ ಅಗತ್ಯ ಇದೆ. ಅಡಿಕೆ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ.
ಶ್ರೀ ಪಡ್ರೆ, ಸಂಪಾದಕರು,ಅಡಿಕೆ ಪತ್ರಿಕೆ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "Arecanut | ಅಡಿಕೆಯಿಂದ ತಯಾರಾಗುತ್ತಿದೆ ಎನರ್ಜಿ ಡ್ರಿಂಕ್…!‌ |"

Leave a comment

Your email address will not be published.


*