ಭಾರತವು ಈ ವರ್ಷ ಮ್ಯಾನ್ಮಾರ್‌ನಿಂದ ಅಡಿಕೆ ಖರೀದಿಯನ್ನು ಪುನರಾರಂಭಿಸಲಿದೆಯೇ..? ಹೀಗೊಂದು ಸುದ್ದಿಯು ಇದೀಗ ಚರ್ಚೆಗೆ ಕಾರಣವಾಗುತ್ತಿದೆ.………ಮುಂದೆ ಓದಿ……..
ಮ್ಯಾನ್ಮಾರ್ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ ಮಾಡಲಿದೆ ಎನ್ನುವ ಆಶಾವಾದ ವ್ಯಕ್ತವಾಗಿದೆ. ಭಾರತದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದು, ಬೆಳೆಯೂ ಕಡಿಮೆ ಇದೆ.ಈ ಕೊರತೆಯನ್ನು ಭರ್ತಿ ಮಾಡಲು ಮ್ಯಾನ್ಮಾರ್ ಅಡಿಕೆ ಖರೀದಿ ನಡೆಯುತ್ತದೆ ಎನ್ನುವುದು ಅಲ್ಲಿನ ಮಾರುಕಟ್ಟೆ ವಿಶ್ಲೇಷಣೆಯಾಗಿದೆ. ಈ ಬಗ್ಗೆ ಮ್ಯಾನ್ಮಾರ್‌ನ ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಮ್ಯಾನ್ಮಾರ್ ನಿಂದ ಚೀನಾವು ಅತಿದೊಡ್ಡ ಅಡಿಕೆ ಖರೀದಿದಾರ. ಕಳೆದ ವರ್ಷ ಭಾರತದ ಬೇಡಿಕೆ ಕಡಿಮೆಯಾಗಿತ್ತು, ಆದರೆ ಈ ವರ್ಷ ಎಂದಿನಂತೆ ಅಡಿಕೆ ವ್ಯಾಪಾರ ಪುನರಾರಂಭವಾಗಲಿದೆ ಎನ್ನುತ್ತದೆ ಅಲ್ಲಿನ ಅಡಿಕೆ ವ್ಯಾಪಾರದ ಮಾರುಕಟ್ಟೆ. ಮ್ಯಾನ್ಮಾರ್ ಸುಮಾರು 230,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆ ಉತ್ಪಾದನೆಯನ್ನು ಮಾಡುತ್ತದೆ.
ಭಾರತವು 1994 ರಿಂದ ಮ್ಯಾನ್ಮಾರ್‌ನಿಂದ ಅಡಿಕೆಯನ್ನು ಆಮದು ಸುಂಕ ಇಲ್ಲದೆಯೇ ಅನುಮತಿಸಿತ್ತು, ಆದರೆ ಅಡಿಕೆ ಆಮದು ಪ್ರಸ್ತುತ 100 ಶೇಕಡಾ ಆಮದು ಸುಂಕಕ್ಕೆ ಒಳಪಟ್ಟಿರುತ್ತದೆ. 2018 ರಲ್ಲಿ, ಇಂಡೋನೇಷ್ಯಾದಿಂದ ಮ್ಯಾನ್ಮಾರ್ ಮೂಲಕ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಕಾರಣದಿಂದ ಭಾರತವು ಅಡಿಕೆ ಮೇಲೆ ಆಮದು ಸುಂಕ ವಿಧಿಸಿತ್ತು. ಆದರೆ ಮ್ಯಾನ್ಮಾರ್-ಭಾರತ ಗಡಿಯಲ್ಲಿ ಅಡಿಕೆ ಕಳ್ಳಸಾಗಣೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಈಗಲೂ ಈ ಕಳ್ಳಸಾಗಾಣಿಕೆ ನಡೆಯುತ್ತಿದೆ. ಆಗಾಗ ಅಡಿಕೆ ವಶಕ್ಕೆ ಪಡೆಯುವ ವರದಿಗಳು ಬೆಳಕಿಗೆ ಬರುತ್ತಿದೆ.