ಈ ವರ್ಷ ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಡಿಕೆ ಆಮದು..?

February 26, 2025
11:11 PM
ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ ಮಾಡಲಿದೆ ಎನ್ನುವ ಆಶಾವಾದ ವ್ಯಕ್ತವಾಗಿದೆ. ಭಾರತದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದು, ಬೆಳೆಯೂ ಕಡಿಮೆ ಇದೆ.ಈ ಕೊರತೆಯನ್ನು ಭರ್ತಿ ಮಾಡಲು ಮ್ಯಾನ್ಮಾರ್‌ ಅಡಿಕೆ ಖರೀದಿ ನಡೆಯುತ್ತದೆ ಎನ್ನುವುದು ಅಲ್ಲಿನ ಮಾರುಕಟ್ಟೆ ವಿಶ್ಲೇಷಣೆಯಾಗಿದೆ.(Source:GNL)

ಭಾರತವು ಈ ವರ್ಷ ಮ್ಯಾನ್ಮಾರ್‌ನಿಂದ ಅಡಿಕೆ ಖರೀದಿಯನ್ನು ಪುನರಾರಂಭಿಸಲಿದೆಯೇ..? ಹೀಗೊಂದು ಸುದ್ದಿಯು ಇದೀಗ ಚರ್ಚೆಗೆ ಕಾರಣವಾಗುತ್ತಿದೆ.………ಮುಂದೆ ಓದಿ……..

ಮ್ಯಾನ್ಮಾರ್‌ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ ಮಾಡಲಿದೆ ಎನ್ನುವ ಆಶಾವಾದ ವ್ಯಕ್ತವಾಗಿದೆ. ಭಾರತದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದು, ಬೆಳೆಯೂ ಕಡಿಮೆ ಇದೆ.ಈ ಕೊರತೆಯನ್ನು ಭರ್ತಿ ಮಾಡಲು ಮ್ಯಾನ್ಮಾರ್‌ ಅಡಿಕೆ ಖರೀದಿ ನಡೆಯುತ್ತದೆ ಎನ್ನುವುದು ಅಲ್ಲಿನ ಮಾರುಕಟ್ಟೆ ವಿಶ್ಲೇಷಣೆಯಾಗಿದೆ. ಈ ಬಗ್ಗೆ ಮ್ಯಾನ್ಮಾರ್‌ನ ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಮ್ಯಾನ್ಮಾರ್‌ ನಿಂದ ಚೀನಾವು ಅತಿದೊಡ್ಡ ಅಡಿಕೆ ಖರೀದಿದಾರ. ಕಳೆದ ವರ್ಷ ಭಾರತದ ಬೇಡಿಕೆ ಕಡಿಮೆಯಾಗಿತ್ತು, ಆದರೆ ಈ ವರ್ಷ ಎಂದಿನಂತೆ ಅಡಿಕೆ ವ್ಯಾಪಾರ ಪುನರಾರಂಭವಾಗಲಿದೆ ಎನ್ನುತ್ತದೆ ಅಲ್ಲಿನ ಅಡಿಕೆ ವ್ಯಾಪಾರದ ಮಾರುಕಟ್ಟೆ. ಮ್ಯಾನ್ಮಾರ್ ಸುಮಾರು 230,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆ ಉತ್ಪಾದನೆಯನ್ನು ಮಾಡುತ್ತದೆ.

ಭಾರತವು 1994 ರಿಂದ ಮ್ಯಾನ್ಮಾರ್‌ನಿಂದ ಅಡಿಕೆಯನ್ನು  ಆಮದು ಸುಂಕ ಇಲ್ಲದೆಯೇ  ಅನುಮತಿಸಿತ್ತು, ಆದರೆ ಅಡಿಕೆ ಆಮದು ಪ್ರಸ್ತುತ 100 ಶೇಕಡಾ ಆಮದು ಸುಂಕಕ್ಕೆ ಒಳಪಟ್ಟಿರುತ್ತದೆ. 2018 ರಲ್ಲಿ, ಇಂಡೋನೇಷ್ಯಾದಿಂದ ಮ್ಯಾನ್ಮಾರ್ ಮೂಲಕ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ ಎನ್ನುವ ಕಾರಣದಿಂದ ಭಾರತವು ಅಡಿಕೆ ಮೇಲೆ ಆಮದು ಸುಂಕ ವಿಧಿಸಿತ್ತು. ಆದರೆ ಮ್ಯಾನ್ಮಾರ್-ಭಾರತ ಗಡಿಯಲ್ಲಿ ಅಡಿಕೆ ಕಳ್ಳಸಾಗಣೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಈಗಲೂ ಈ ಕಳ್ಳಸಾಗಾಣಿಕೆ ನಡೆಯುತ್ತಿದೆ. ಆಗಾಗ ಅಡಿಕೆ ವಶಕ್ಕೆ ಪಡೆಯುವ ವರದಿಗಳು ಬೆಳಕಿಗೆ ಬರುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror