ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ವೆಬಿನಾರ್ ಆಯೋಜಿಸಿತ್ತು. ವೆಬಿನಾರ್‌ನಲ್ಲಿ ಭಾರತ ಸೇರಿದಂತೆ ಇತರ ದೇಶಗಳು ಪ್ರತಿನಿಧಿಗಳ ಮಂಡಿಸಿರುವ ಅಂಶಗಳ ಸಂಕ್ಷಿಪ್ತ ಸಾರಾಂಶವನ್ನು ನೀಡಲಾಗಿದೆ. ವೆಬಿನಾರ್‌ನಲ್ಲಿ WHO ಪ್ರದೇಶದಲ್ಲಿ 2025–2030 ಅಡಿಕೆ ಬಳಕೆ ನಿಯಂತ್ರಣದ ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಮಾಹಿತಿ ನೀಡಲಾಗಿದೆ. ಹೀಗಾಗಿ ಮುಂದೆಯೂ ಈ ಚರ್ಚೆ ನಡೆಯಲಿದೆ. ಈ ಚರ್ಚೆ ಆರೋಗ್ಯದ ರಕ್ಷಣೆಯೋ…? ಅಡಿಕೆ ಬೆಳೆಗಾರರಿಗೆ ಸವಾಲೋ..? ಎಂಬುದು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ.
ಆದರೆ, ಅಡಿಕೆ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಬೆಳೆ. ಲಕ್ಷಾಂತರ ಸಣ್ಣ–ಮಧ್ಯಮ ರೈತರ ಬದುಕು ಈ ತೋಟಗಾರಿಕೆ ಬೆಳೆ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬಳಕೆಯಿಂದ ಉಂಟಾಗುವ ಆರೋಗ್ಯ ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳು, ಕೃಷಿ ವಲಯಕ್ಕೂ ಹೊಸ ಆತಂಕದ ಸೂಚನೆ ನೀಡುತ್ತಿವೆ. ಆರೋಗ್ಯ ನೀತಿಗಳು ನೇರವಾಗಿ ಕೃಷಿ ನೀತಿಗಳಾಗಿಲ್ಲದಿದ್ದರೂ, ಅವುಗಳ ಪರಿಣಾಮ ಮಾರುಕಟ್ಟೆ, ಬಳಕೆ ಮತ್ತು ಬೇಡಿಕೆಗೆ ತಟ್ಟದೇ ಇರುವುದಿಲ್ಲ ಎನ್ನುವುದು ನಿಶ್ಚಿತ. ಆದ್ದರಿಂದ ರೈತರು, ವ್ಯಾಪಾರಿಗಳು ಹಾಗೂ ನೀತಿ ರೂಪಿಸುವವರು ಈ ಚರ್ಚೆಗಳನ್ನು ಮುಂದೆಯೂ ಎಚ್ಚರಿಕೆಯಿಂದ ಗಮನಿಸುವುದು ಅವಶ್ಯಕವಾಗಿದೆ. WHO ಯಾವುದೇ ನಿಯಮಗಳನ್ನು ಜಾರಿಗೆ ಮಾಡುವುದಿಲ್ಲ, ಆಯಾ ಸರ್ಕಾರಗಳೇ ನಿಯಮಗಳನ್ನು ಜಾರಿ ಮಾಡುತ್ತವೆ. ಯಾವುದೇ ಸರ್ಕಾರಗಳು WHO ನಿಯಮ ಒಮ್ಮೆಲೇ ಜಾರಿಗೆ ಮಾಡುವುದಿಲ್ಲ, ಆದರೆ ಈ ನಿಯಮವನ್ನು ತಳ್ಳ ಹಾಕುವುದೂ ಇಲ್ಲ. ಹೀಗಾಗಿ ಅಡಕತ್ತರಿಯಲ್ಲೇ ಕೃಷಿಕರ ಬದುಕು ಇರುವುದು ನಿಶ್ಚಿತ.
2025–2030 ಕಾರ್ಯತಂತ್ರ ಚೌಕಟ್ಟು ಇದು :ವೆಬಿನಾರ್‌ನಲ್ಲಿ ಉಲ್ಲೇಖವಾದಂತೆ WHO ದಕ್ಷಿಣ–ಪೂರ್ವ ಏಷ್ಯಾ ಪ್ರದೇಶದ 2025–2030 ಕಾರ್ಯತಂತ್ರ ಚೌಕಟ್ಟು ಕುರಿತು ವಿಶೇಷ ಪರಿಚಯ ನೀಡಲಾಗುತ್ತದೆ. ಈ ಚೌಕಟ್ಟಿನಲ್ಲಿ Smokeless tobacco ನಿಯಂತ್ರಣ, nicotine products ವಿರುದ್ಧ ಕ್ರಮ, ಅಡಿಕೆ ಬಳಕೆಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ಇವುಗಳೆಲ್ಲವೂ ಸೇರಿವೆ. ಹೀಗಾಗಿ ಇಲ್ಲಿ ಆರೋಗ್ಯದ ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಡಿಕೆ ಕೃಷಿ ಮತ್ತು ಮಾರುಕಟ್ಟೆಯ ಮೇಲೆ ಪರೋಕ್ಷ ಒತ್ತಡ ತರುವುದಿಲ್ಲವೇ? ಎಂಬುದು ಮಾತ್ರಾ.
ಅಡಿಕೆ ಬಳಕೆಯ ಆರೋಗ್ಯ ಅಪಾಯಗಳ ಕುರಿತು ವೈಜ್ಞಾನಿಕ ಚರ್ಚೆ ಅಗತ್ಯವಿದೆ. ಆದರೆ ಅದೇ ವೇಳೆ, ಅಡಿಕೆ ಕೃಷಿ ಮೇಲೆ ಅವಲಂಬಿತ ರೈತರ ಬದುಕು, ಗ್ರಾಮೀಣ ಆರ್ಥಿಕತೆ ಮತ್ತು ಪರ್ಯಾಯ ವ್ಯವಸ್ಥೆಗಳ ಪ್ರಶ್ನೆಯೂ ಅಷ್ಟೇ ಮಹತ್ವದದು. ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ರೈತ ಪ್ರತಿನಿಧಿಗಳ ಧ್ವನಿ, ಪರ್ಯಾಯ ಬೆಳೆಗಳ ಚರ್ಚೆ, ಹಾಗೂ ಕ್ರಮೇಣ ರೂಪಾಂತರ ಎಂಬ ಅಂಶಗಳು ಇಲ್ಲದಿದ್ದರೆ, ಆರೋಗ್ಯ ನೀತಿ ಅನಿರೀಕ್ಷಿತ ಕೃಷಿ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ, ಇದಿಷ್ಟೇ ಇರುವ ಆತಂಕಗಳು. ಈ ಆತಂಕ ಅಡಿಕೆ ಬೆಳೆಗಾರರ ಗಮನದಲ್ಲೂ ಇರಬೇಕು. ಸಂದರ್ಭ ಬಂದಾಗಲೆಲ್ಲಾ ಅಡಿಕೆ ಬೆಳೆಗಾರರು, ಈ ಸಂಕಷ್ಟದಿಂದ ದೂರವಾಗಲು ಆಡಳಿತವನ್ನು ಒತ್ತಾಯಿಸುತ್ತಲೇ ಇರಬೇಕಾದ ಅಗತ್ಯ ಇದೆ. ಏಕೆಂದರೆ ಕೃಷಿಕ ಯಾವತ್ತೂ ಕೃಷಿಕನಾಗಿಯೇ ಇರುತ್ತಾನೆ. ಪ್ರತಿನಿಧಿ ಅಥವಾ ಸರ್ಕಾರದ ಅವಧಿ ಕೇವಲ 5 ವರ್ಷಗಳು ಮಾತ್ರಾ ಎಂಬುದೂ ಅಡಿಕೆ ಬೆಳೆಗಾರರ ಗಮನದಲ್ಲಿರಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈಗ ಅಡಿಕೆ ಅಮೇರಿಕಾ ಕಡೆಗೂ ಸಾಗುವ ಸೂಚನೆಗಳು ಇವೆ. ಒಂದು ವೇಳೆ ಅಮೇರಿಕಾಕ್ಕೂ ಅಡಿಕೆ ಸಾಗುವ ಸಂದರ್ಭ ಬಂದರೆ ಅಡಿಕೆಯಲ್ಲಿರುವ ಔಷಧಿಯ ಅಂಶಗಳು ಮಾತ್ರೆಯ ರೂಪದಲ್ಲೋ, ಔಷಧಿಯ ರೂಪದಲ್ಲೋ ಬರುವ ಸಾಧ್ಯತೆ ಇದೆ. ಏಕೆಂದರೆ ಈ ಹಿಂದೆ ತೆಂಗಿನೆಣ್ಣೆಯೂ ಅದೇ ಮಾದರಿಯಲ್ಲಿ ಬದಲಾದ್ದು ಕೂಡಾ ಗಮನಿಸಬೇಕಾದ ಅಂಶ. ಅಡಿಕೆಯ ಔಷಧಿ, ಆಹಾರ ಪದಾರ್ಥಗಳು ಕೂಡಾ ಮಹತ್ವ ಪಡೆಯುವ ಸಾಧ್ಯತೆ ಹಾಗೂ ನಿರೀಕ್ಷೆಯೊಂದಿಗೆ ಕಳೆದ ತಿಂಗಳು ನಡೆದ ವೆಬಿನಾರ್ ಚರ್ಚೆಗಳು ಇಲ್ಲಿಗೆ ಮುಕ್ತಾಯವಾಗುತ್ತಿದೆ.
ಇದನ್ನೂ ಓದಿ…
‘ಇಲ್ಲಿ ಆಗಲ್ಲ’ ಅನ್ನೋದನ್ನು ಮುರಿದ ರೈತ – ಬಿಸಿಲು ನಾಡಿನ ಸ್ಟ್ರಾಬೆರಿ ಕಥೆ
ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ….
WHO ಅಡಿಕೆ ನೀತಿ ಚರ್ಚೆ | ಆರೋಗ್ಯ ರಕ್ಷಣೆಯೋ, ರೈತರಿಗೆ ಹೊಸ ಸವಾಲೋ? https://t.co/ySRyQarHyb
— theruralmirror (@ruralmirror) February 8, 2026




