ಜ.12 : ವಿಟ್ಲದಲ್ಲಿ ಅಡಿಕೆ ಗೋಣಿಗೊನೆ ಪ್ರಾತ್ಯಕ್ಷಿಕೆ

January 10, 2022
9:22 AM

ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12  ರಂದು ವಿಟ್ಲ ಸಿಪಿಸಿಆರ್‌ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ತರಬೇತಿ ಶಿಬಿರದ ಕೊನೆಯ ದಿನ ಪೂರ್ವಾಹ್ನ ನಡೆಯಲಿದೆ.

Advertisement
Advertisement
Advertisement

Advertisement

ಅಡಿಕೆ ಕೊಯ್ಯುವಾಗ ಬಿದ್ದ ಗೊನೆಯಿಂದ ಅಡಿಕೆ ಚದುರಿ ಹರಡಿದರೆ ಅದನ್ನು ಹೆಕ್ಕಲು ತುಂಬ ಆಳುಗಳು ಬೇಕು. ಈ ಸಮಸ್ಯೆ ನಿವಾರಿಸಲು ಉತ್ತರ ಕನ್ನಡ, ಚನ್ನಗಿರಿ ಮೊದಲಾದ ಕಡೆಗಳ  ಗೋಣಿಗೊನೆ ಹಾಗೂ ಪಾಟು ಹಾಕುವುದು,   ಮತ್ತು ಛಬ್ಬೆ ಹಿಡಿಯುವ ಕ್ರಮವನ್ನು ಅಡಿಕೆ ಬೆಳೆಗಾರರು ಬಹುಕಾಲದಿಂದ ಮಾಡುತ್ತಿದ್ದಾರೆ. ಅದೇ ಮಾದರಿ ದ ಕ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಮಾಡಲು ಸಾಧ್ಯವಿದೆ.

Advertisement

    

ಈ ವಿಧಾನವನ್ನು ಕರಾವಳಿಯ ಕೃಷಿಕರಿಗೆ ಪರಿಚಯಿಸಲೆಂದೇ ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಸಂಘದ ಅಧ್ಯಕ್ಷ, ಕೃಷಿಕ ಸತ್ಯನಾರಾಯಣ ಕೂಳೂರು ಕುಶಲಕರ್ಮಿಗಳನ್ನು ಕರೆತರಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿರುವ ತೀರ್ಥಹಳ್ಳಿಯ ಭಾಸ್ಕರ ಶೆಟ್ಟರಿಗೆ ಗೋಣಿಗೊನೆ ಹಿಡಿಯುವುದರಲ್ಲಿ ಮೂರು ದಶಕದ ಅನುಭವ ಇದೆ. ಈ ಭಾಗದಲ್ಲಿ ಬಿದಿರಿನ ದೋಟಿಯಲ್ಲಿ ಗೊನೆ ಕೊಯ್ಯುವಾಗಲೂ ಗೋಣಿಗೊನೆ ವಿಧಾನದಲ್ಲಿ ಅಡಿಕೆ ಉದುರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಭಾಸ್ಕರ ಶೆಟ್ಟರು. ತೋಟದಲ್ಲಿ ಕೊಕ್ಕೋ ಮತ್ತಿತರ ಎಡೆ ಬೆಳೆ ಸಾಂದ್ರವಾಗಿ ಇರುವಲ್ಲಿ ಈ ಕ್ರಮ ಕಷ್ಟ.

Advertisement

          ಆಸಕ್ತ ಕೃಷಿಕರು ಈ ಪ್ರಾತ್ಯಕ್ಷಿಕೆ ನೋಡಿ ಇಲ್ಲೂ ಈ ಶ್ರಮ ಉಳಿಸುವ ಉಪಾಯವನ್ನು ಅಳವಡಿಸಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror