ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12 ರಂದು ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆಯುವ ತರಬೇತಿ ಶಿಬಿರದ ಕೊನೆಯ ದಿನ ಪೂರ್ವಾಹ್ನ ನಡೆಯಲಿದೆ.
ಅಡಿಕೆ ಕೊಯ್ಯುವಾಗ ಬಿದ್ದ ಗೊನೆಯಿಂದ ಅಡಿಕೆ ಚದುರಿ ಹರಡಿದರೆ ಅದನ್ನು ಹೆಕ್ಕಲು ತುಂಬ ಆಳುಗಳು ಬೇಕು. ಈ ಸಮಸ್ಯೆ ನಿವಾರಿಸಲು ಉತ್ತರ ಕನ್ನಡ, ಚನ್ನಗಿರಿ ಮೊದಲಾದ ಕಡೆಗಳ ಗೋಣಿಗೊನೆ ಹಾಗೂ ಪಾಟು ಹಾಕುವುದು, ಮತ್ತು ಛಬ್ಬೆ ಹಿಡಿಯುವ ಕ್ರಮವನ್ನು ಅಡಿಕೆ ಬೆಳೆಗಾರರು ಬಹುಕಾಲದಿಂದ ಮಾಡುತ್ತಿದ್ದಾರೆ. ಅದೇ ಮಾದರಿ ದ ಕ ಜಿಲ್ಲೆಯ ಅಡಿಕೆ ಬೆಳೆಗಾರರಿಗೂ ಮಾಡಲು ಸಾಧ್ಯವಿದೆ.
ಈ ವಿಧಾನವನ್ನು ಕರಾವಳಿಯ ಕೃಷಿಕರಿಗೆ ಪರಿಚಯಿಸಲೆಂದೇ ತೀರ್ಥಹಳ್ಳಿಯ ಮಲೆನಾಡು ಕೃಷಿಕರ ಸಮುದಾಯ ಸಂಘದ ಅಧ್ಯಕ್ಷ, ಕೃಷಿಕ ಸತ್ಯನಾರಾಯಣ ಕೂಳೂರು ಕುಶಲಕರ್ಮಿಗಳನ್ನು ಕರೆತರಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿರುವ ತೀರ್ಥಹಳ್ಳಿಯ ಭಾಸ್ಕರ ಶೆಟ್ಟರಿಗೆ ಗೋಣಿಗೊನೆ ಹಿಡಿಯುವುದರಲ್ಲಿ ಮೂರು ದಶಕದ ಅನುಭವ ಇದೆ. ಈ ಭಾಗದಲ್ಲಿ ಬಿದಿರಿನ ದೋಟಿಯಲ್ಲಿ ಗೊನೆ ಕೊಯ್ಯುವಾಗಲೂ ಗೋಣಿಗೊನೆ ವಿಧಾನದಲ್ಲಿ ಅಡಿಕೆ ಉದುರದಂತೆ ನೋಡಿಕೊಳ್ಳಬಹುದು ಎನ್ನುತ್ತಾರೆ ಭಾಸ್ಕರ ಶೆಟ್ಟರು. ತೋಟದಲ್ಲಿ ಕೊಕ್ಕೋ ಮತ್ತಿತರ ಎಡೆ ಬೆಳೆ ಸಾಂದ್ರವಾಗಿ ಇರುವಲ್ಲಿ ಈ ಕ್ರಮ ಕಷ್ಟ.
ಆಸಕ್ತ ಕೃಷಿಕರು ಈ ಪ್ರಾತ್ಯಕ್ಷಿಕೆ ನೋಡಿ ಇಲ್ಲೂ ಈ ಶ್ರಮ ಉಳಿಸುವ ಉಪಾಯವನ್ನು ಅಳವಡಿಸಿಕೊಳ್ಳಬಹುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…