ಅಡಿಕೆ ಆರೋಗ್ಯಕ್ಕೆ ಪೂರಕ – ಬೆಳೆಗಾರರಿಗೆ ಧೈರ್ಯ ತುಂಬಿದ ಕ್ಯಾಂಪ್ಕೊ

September 24, 2020
9:09 PM
ವಿಶ್ವದ ಇತಿಹಾಸದಲ್ಲಿಅಡಿಕೆಯ ಬಳಕೆ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ದೇಶ-ವಿದೇಶಗಳಲ್ಲಿ ಅಡಿಕೆಯನ್ನು ಬೇರೆ ಬೇರೆರೂಪದಲ್ಲಿ ಸೇವಿಸುತ್ತಾರೆ. ಎಂದಿಗೂ ಅಡಿಕೆ ಆರೋಗ್ಯದ ಮೇಲೆ ಪರಿಣಾಮ ಬೀರಿಲ್ಲ ಎಂದು ಕ್ಯಾಂಪ್ಕೋ ಹೇಳಿದೆ.

Advertisement
Advertisement

ಇತಿಹಾಸದ ಪ್ರಕಾರ ಕ್ರಿಸ್ತಪೂರ್ವ ಕಾಲದಿಂದಲೇ ಜನರು ಅಡಿಕೆ ಜಗಿಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಇದು ಭಾರತೀಯ ಪುರಾಣಗಳಲ್ಲೂ ವೇದ್ಯವಾಗಿರುವಂತಹ ವಿಚಾರವಾಗಿದೆ. ಆದರೆ ಬಹಳ ಹಿಂದಿನಿಂದಲೂ ಅಡಿಕೆಯು ಹಾನಿಕಾರಕವೆಂಬ ವಾದವು ಕೇಳಿಬರುತ್ತಿದ್ದು, ಇದು ಅಡಿಕೆ ಕೃಷಿಕರನ್ನು ಚಿಂತೆಗೀಡು ಮಾಡಿದೆ.

ಅಡಿಕೆಯು ಹಾನಿಕಾರಕವೆಂಬ ವಾದವು ಯಾವಾಗ ಹುಟ್ಟಿತೋ ಅಂದಿನಿಂದಲೂ ಅಡಿಕೆಯು ಹಾನಿಕಾರಕವಲ್ಲ, ಆದರೆ ಅಡಿಕೆಯಲ್ಲಿ ಕ್ಯಾನ್ಸರ್ ಗುಣಪಡಿಸುವ ಔಷಧೀಯ ತತ್ವಗಳಿವೆ ಎಂಬ ಬಗ್ಗೆ ವಾದಗಳು ಮತ್ತು ಸಂಶೋಧನೆಗಳು ನಡೆದೇ ಇವೆ ಮತ್ತು ಪ್ರತೀ ಸಂಶೋಧನೆಗಳಲ್ಲೂ ಇದುಆರೋಗ್ಯಕ್ಕೆ ಪೂರಕವೆಂದೇ ಸಾಬೀತಾಗಿದೆ. ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಪ್ರಸಿದ್ಧ ಸಂಶೋಧಕರು ಹಾಗೂ ಸಂಶೋಧನಾಲಯಗಳು ಈ ಬಗ್ಗೆ ಸಂಶೋಧನೆಗಳನ್ನು ನಡೆಸಿದ್ದು, ಅಡಿಕೆಯು ಕ್ಯಾನ್ಸರ್ ಜೀವಕಣಗಳನ್ನು ನಿರ್ಜೀವಗೊಳಿಸುವ ಶಕ್ತಿಯನ್ನು ಹೊಂದಿದೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದ್ದು, ಕೇವಲ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಸಾಧ್ಯತೆಯಿಲ್ಲಎಂಬುದಾಗಿ ಸಂಶೋಧಕರು ಪ್ರತಿಪಾದಿಸಿದ್ದಾರೆ.

ಅಡಿಕೆಯು ಅನಘ್ರ್ಯ ಔಷಧೀಯ ಗುಣಗಳನ್ನು ಹೊಂದಿದ್ದು, ಮನುಷ್ಯನ ಮತ್ತು ಪ್ರಾಣಿಗಳ ಹಲವಾರು ಖಾಯಿಲೆಗಳಿಗೆ ಉತ್ತಮ ಔಷಧವನ್ನಾಗಿ ಬಳಸಬಹುದಾಗಿದೆ. 1974ರಲ್ಲಿ ಇಂಡಿಯನ್‍ ಇನ್ಸ್ಟಿಟ್ಯೂಟ್‍ ಆಫ್ ಸೈನ್ಸ್ ಇಲ್ಲಿನ ವಿಜ್ಞಾನಿಗಳು ಅಡಿಕೆ‌ ಕ್ಯಾನ್ಸರ್ ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. 2016ರಲ್ಲಿ ಅಮೇರಿಕಾದ ಖ್ಯಾತ ಎಮೆರಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಿಂದ ಅಡಿಕೆಕ್ಯಾನ್ಸರ್‌  ಗುಣಪಡಿಸುವಲ್ಲಿ ರಾಮಬಾಣವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಇದಲ್ಲದೆ ಅಡಿಕೆಗೆ ಸಕ್ಕರೆ ಖಾಯಿಲೆ, ಕೊಬ್ಬು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಶಕ್ತಿಯಿದ್ದು, ಅಲ್ಜಿಮರ್, ಮರೆಗುಳಿತನ ಗುಣಪಡಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ.

ಪ್ರಾಣಿಗಳಲ್ಲಿನ ಹೊಟ್ಟೆಹುಳದ ನಾಶ, ಚರ್ಮರೋಗ ನಿವಾರಣೆ, ಗಾಯಗಳನ್ನು ಗುಣಪಡಿಸಲು ಅಡಿಕೆ ಉಪಯುಕ್ತ ಔಷಧಿಯಾಗಿದ್ದು, ವಿಷಜಂತುಗಳ ಕಡಿತದಿಂದ ಆಗುವ ಅಪಾಯಗಳನ್ನು ತಡೆಗಟ್ಟುವವಿಷಹಾರಿಯಾಗಿಯೂ ಬಳಸಬಹುದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಈ ವಿಚಾರವನ್ನು ಬಹಳ ಮೊದಲೇ ಚೀನಾದಲ್ಲಿ ಸಂಶೋಧನೆ ಮಾಡಿದ್ದು ಚೀನಾದ‘ಮೆಟೀರಿಯ ಮೆಡಿಕಾ’ಔಷಧೀಯ ಪುಸ್ತಕದಲ್ಲಿ ಈ ಎಲ್ಲಾ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

Advertisement

ಅಡಿಕೆಯು ಹಾನಿಕಾರಕವೆಂಬ ವಾದ ತೀರಾ ಅವೈಜ್ಞಾನಿಕವಾಗಿದ್ದು, ಇದು ಅಡಿಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ. ಪ್ರಸ್ತುತ, ರಾಜ್ಯದ ಕೆಲವು ಪ್ರತಿಷ್ಠಿತ ಆಯುರ್ವೇದಿಕ್ ಪ್ರಯೋಗಾಲಯಗಳಲ್ಲಿ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಕ್ಯಾಂಪ್ಕೊ ಸಹಕಾರದೊಂದಿಗೆ ಸಂಶೋಧನೆಗಳು  ನಡೆಯುತ್ತಿದೆ ಎಂದು ಕ್ಯಾಂಪ್ಕೊ ಪ್ರಕಟಣೆ ತಿಳಿಸಿದೆ.

ಅಡಿಕೆ ಕೃಷಿಕರು ಯಾವುದೇ ಕಾರಣಕ್ಕೂ ಚಿಂತಿತರಾಗುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೊ ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group