ಅಡಿಕೆಯ ಬಳಕೆ 2000 ವರ್ಷಗಳಿಂದ ಇದೆ…! | ಜೀರ್ಣಕ್ರಿಯೆ ವೃದ್ಧಿಗೆ ಅಡಿಕೆ ಸಹಾಯಕ |

October 20, 2022
9:00 PM

ಅಡಿಕೆಯ ಬಗ್ಗೆ ಅನೇಕ ಚರ್ಚೆಗಳ ನಡುವೆಯೂ ಅಧ್ಯಯನ ವರದಿಯ ಪ್ರಕಾರ ಅಡಿಕೆ ಜಗಿಯುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎನ್ನುವ  ವರದಿಯೊಂದು ಬಂದಿದೆ. ಸಾವಿರಾರು ವರ್ಷಗಳಿಂದ ಅಡಿಕೆ ಸೇವನೆ ಜಗತ್ತಿನಲ್ಲಿದೆ. ದಾಖಲೆಗಳ ಪ್ರಕಾರ 2000 ವರ್ಷಗಳಿಂದಲೂ ಅಡಿಕೆಯ ಬಳಕೆ, ಸೇವನೆಯ ಬಗ್ಗೆ ಮಾಹಿತಿ ಇದೆ.

ಅಡಿಕೆ ಹಾಗೂ ವೀಳ್ಯದೆಲೆಯನ್ನು ಜಗಿಯುವುದರಿಂದ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಭಾರತದಲ್ಲಿ ಅಡಿಕೆಯನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ವೀಳ್ಯದೆಲೆ ಹಾಗೂ ಅಡಿಕೆ  ಶಕ್ತಿಯ ಮಟ್ಟವನ್ನು ಹೆಚ್ಚಿಸುವುದರಿಂದ, ನರಮಂಡಲವು ಉತ್ತಮಗೊಳ್ಳುತ್ತದೆ ಎನ್ನುವುದು ಹಿಂದಿನಿಂದಲೂ ಬಂದಿರುವ ಮಾಹಿತಿ.

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವೀಳ್ಯದೆಲೆ ಜಗಿಯುವ ಪದ್ಧತಿ ಸಾವಿರಾರು ವರ್ಷಗಳಿಂದ ಇದೆ. ಆಯುರ್ವೇದವು ವೀಳ್ಯದೆಲೆ ಹಾಗೂ ಅಡಿಕೆ ಜಗಿಯುವುದರಿಂದ ಹಲ್ಲುಗಳು ಮತ್ತು ಒಸಡುಗಳು ಆರೋಗ್ಯಕರವಾಗಿರುತ್ತವೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ. ಆದರೆ ಇನ್ನೊಂದು ವಿಭಾಗವು ಅದನ್ನು ವ್ಯಸನವೆಂದು ಪರಿಗಣಿಸುತ್ತದೆ, ಅಡಿಕೆ ಸೇವನೆ ಹಾನಿಕಾರಕ ಎಂದು ಹೇಳುತ್ತದೆ. ಆದರೆ ಅತಿಯಾದ ಸೇವನೆಯ ಎಲ್ಲಾ ಸಂಗತಿಗಳೂ ಅಪಾಯವನ್ನೇ ಉಂಟು ಮಾಡಿವೆ ಕೂಡಾ. ವೀಳ್ಯದೆಲೆ ಹಾಗೂ ಅಡಿಕೆ ಅನೇಕ ವರ್ಷಗಳಿಂದ ಸಾವಿರಾರು ಜನರು ಬಳಸುತ್ತಿದ್ದರೂ ಯಾವುದೇ ಅಡ್ಡ ಪರಿಣಾಮಗಳು ಆಗಿಲ್ಲ. ಆದರೆ ಇವುಗಳ ಜೊತೆಗೆ ತಂಬಾಕು ಕೂಡಾ ಅಧಿಕ ಪ್ರಮಾಣದಲ್ಲಿ ಸೇವನೆ, ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಅಡಿಕೆ ಸೇವೆಯು ಕೆಲವು ಸಂದರ್ಭಗಳಲ್ಲಿ ಅಡ್ಡ ಪರಿಣಾಮ ಬೀರಿದೆ. ಅಡಿಕೆ ಹಾಗೂ ವೀಳ್ಯದೆಲೆ ಧಾರ್ಮಿಕ ಭಾವನೆಯ ವಿಷಯಗಳು. ಹೀಗಾಗಿ ಇವುಗಳ ಬಳಕೆ ಮಿತಿಯಲ್ಲಿದ್ದರೆ ದೇಹಕ್ಕೂ,ಮನಸ್ಸಿಗೂ ಹೆಚ್ಚು ಪರಿಣಾಮಕಾರಿ ಎನ್ನುವುದು  ಹಿಂದೆಯೇ ಅಧ್ಯಯನ ಮಾಡಿರುವ ವಿಷಯ.

ಅಡಿಕೆ ಹಾಗೂ ವೀಳ್ಯದೆಲೆ ದಕ್ಷಿಣ ಏಷ್ಯಾದ ದೇಶಗಳಲ್ಲಿ ವರ್ಷಗಳಿಂದಲೂ  ಜನಪ್ರಿಯವಾಗಿದೆ. ಆಯುರ್ವೇದವು ಇದನ್ನು ಪುಣ್ಯಔಷಧಿ ಎಂದು ಕರೆದಿದೆ. ಸಮಾಜದಲ್ಲಿ ಅಡಿಕೆ ಸೇವನೆ ಮನ್ನಣೆಯೂ ಇದೆ. ಹಿಂದೂ ಧರ್ಮದಲ್ಲಿ ದೈವಿಕ ಮತ್ತು ಮಂಗಳಕರ ಅಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಧಾರ್ಮಿಕ ಸಮಾರಂಭಗಳು, ಪೂಜೆಗಳು, ಹವನಗಳು, ಪೂಜೆಯ ಸಮಯದಲ್ಲಿ  ಅವಶ್ಯಕವಾಗಿದೆ. ಇದನ್ನು ದೇವರ ಆಹಾರದ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಇದರ ಬಳಕೆಯು ಮಂಗಳಕರ ನಂಬಲಾಗಿದೆ.

ಸುಮಾರು 2 ಸಾವಿರ ವರ್ಷಗಳಿಂದ ಅಡಿಕೆ ಹಾಗೂ ವೀಳ್ಯದೆಲೆ ಬೆಳೆದು ಜಗಿಯಲಾಗುತ್ತದೆ. ಭಾರತದಲ್ಲಿ, ಮಲೇಷ್ಯಾ, ಕಾಂಬೋಡಿಯಾ, ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಅಡಿಕೆ-ವೀಳ್ಯದೆಲೆ ಜಾನಪದ, ಆಚರಣೆಗಳು ಮತ್ತು ದೈನಂದಿನ ಜೀವನದ ಸಾಮಾಜಿಕ ಸಂವಹನಗಳ ಅವಿಭಾಜ್ಯ ಅಂಗವಾಗಿ ಉಳಿದಿದೆ, ಅದೇ ರೀತಿಯಲ್ಲಿ ಪಶ್ಚಿಮದಲ್ಲಿ ಜನರು ಒಟ್ಟಿಗೆ ಕುಳಿತು ಅಡಿಕೆ ಜಗಿಯುವ ಸಂಪ್ರದಾಯವೂ ಇದೆ. ಆದರೆ  ಪಾಶ್ಚಿಮಾತ್ಯ ದೇಶಗಳು ವೀಳ್ಯದೆಲೆ ಜಗಿಯುವುದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದವು ಹಾಗೂ ಅವುಗಳಿಗೆ ಆದ್ಯತೆ ನೀಡಲಿಲ್ಲ. ಅವರು ಅದನ್ನು ಹಾನಿಕಾರಕ ಎಂದು ಕರೆದವು, ಹೀಗಾಗಿ ಇಂದು ಜಗತ್ತಿನಾದ್ಯಂತ ಅಡಿಕೆ ಹಾನಿಕಾರಕ ಎಂದು ಬಿಂಬಿಸಲಾಗುತ್ತಿದೆ.

ಅಡಿಕೆಯ ಎಲ್ಲಾ  ಉತ್ತಮ ಗುಣಲಕ್ಷಣಗಳ ಹೊರತಾಗಿಯೂ ಅಡಿಕೆಯ ಕೆಲವು ಗುಣಗಳು ನಕಾರಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮಿತ ಸೇವನೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದರೆ, ಅಧಿಕ ಸೇವನೆ, ವ್ಯಸನವಾದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಅತಿಯಾದ ಸೇವನೆಯು ಹಲ್ಲು ಮತ್ತು ಒಸಡುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದು ರಕ್ತದೊತ್ತಡವನ್ನು ಏರುಪೇರು ಮಾಡುತ್ತದೆ ಮತ್ತು ಅಲರ್ಜಿಯನ್ನು ಉಂಟುಮಾಡುತ್ತದೆ ಎನ್ನುವ ವರದಿಗಳೂ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-05-2026 | ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ – ಮೇ 30ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ
May 22, 2026
1:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror