Advertisement
MIRROR FOCUS

ಗೋಣಿ ಗೊನೆ | ಅಡಿಕೆ ಬೆಳೆಗಾರರಿಗೆ ಶ್ರಮ ಉಳಿತಾಯದ ಕೊಯ್ಲು | ಏನಿದು ಗೋಣಿ ಗೊನೆ ? |

Share

ಅಡಿಕೆ ಬೆಳೆಗಾರರಿಗೆ ಈಗ ಶ್ರಮ ಉಳಿತಾಯದ ದಾರಿಗಳ ಅಗತ್ಯವಿದೆ. ಕಾರ್ಮಿಕರ ಕೊರತೆಯ ನಡುವೆ ತಾಂತ್ರಿಕತೆ ಹಾಗೂ ನೈಪುಣ್ಯಗಳೂ ಬೇಕಾಗಿದೆ. ಅಂತಹ ನೈಪುಣ್ಯಗಳಲ್ಲಿ  ಒಂದು ಗೋಣಿ ಗೊನೆ. ಗೋಣಿ ಗೊನೆಯ ಪ್ರಾತ್ಯಕ್ಷಿಕೆ ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಕೌಶಲ್ಯ ಪಡೆ ತರಬೇತಿ ಸಂದರ್ಭ ನಡೆಯಿತು.

Advertisement
Advertisement
Advertisement
Advertisement
Advertisement

ಉತ್ತರ ಕನ್ನಡದ ಕೆಲವು ಭಾಗ ಹಾಗೂ ಶಿವಮೊಗ್ಗದ ಕೆಲವು ಕಡೆ ಅಡಿಕೆ ಕೊಯ್ಲು ಸಂದರ್ಭ ಗೋಣಿ ಗೊನೆಯ ಮೂಲಕ ಅಡಿಕೆ ಹಿಡಿಯುವ ಕೆಲಸ ಮಾಡಲಾಗುತ್ತದೆ. ಅಡಿಕೆ ಕೊಯ್ಲು ಮಾಡುವ ವೇಳೆ ವಿಶೇಷ ವಿನ್ಯಾಸ ಗೋಣಿಯಲ್ಲಿ  ಕೊಯ್ಲು ಮಾಡುವ ಮರದ ಕೆಳ ಭಾಗಕ್ಕೆ ಎಸೆಯಲಾಗುತ್ತದೆ. ಈ ಸಮಯದಲ್ಲಿ ಅಡಿಕೆ ಗೊನೆಯು ಗೋಣಿಗೆ ಬೀಳುವ ಮೂಲಕ ಗೋಣಿಯಲ್ಲಿಯೇ ಅಡಿಕೆ ಉಳಿಯುತ್ತದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಶ್ರಮ ಉಳಿತಾಯವಾಗುತ್ತದೆ. ಅಡಿಕೆ ಹೆಕ್ಕುವ ಸಮಯ ಕಡಿಮೆಯಾಗುತ್ತದೆ ಎನ್ನುವುದು  ಶಿವಮೊಗ್ಗದ ಮಲೆನಾಡು ಅಡಿಕೆ ಸಮುದಾಯ ಸಂಘಟನೆಯ ಸತ್ಯನಾರಾಯಣ ಕೂಳೂರು ಹೇಳುತ್ತಾರೆ.

Advertisement

ಇದೇ ಮಾದರಿಯಲ್ಲಿ ದೊಡ್ಡದಾದ ಬುಟ್ಟಿ ಮಾದರಿಯಲ್ಲಿಯೂ ಅಡಿಕೆ ಕೊಯ್ಲು ವೇಳೆ ಅಡಿಕೆಯನ್ನು ಹಿಡಿಯುವ ಕೆಲಸ ಮಾಡುತ್ತಾರೆ. ಇದರಿಂದಲೂ ಅಡಿಕೆ ಹೆಕ್ಕುವ ಶ್ರಮ ಕಡಿಮೆಯಾಗುತ್ತದೆ ಎನ್ನುವುದು ಈ ಮಾದರಿ ಬಳಕೆ ಮಾಡುವ ಕೃಷಿಕರ ಅಭಿಪ್ರಾಯ.

Advertisement

ಇದೆರಡೂ ಮಾದರಿಗಳಲ್ಲಿ  ತಾಂತ್ರಿಕವಾದ ಮಾಹಿತಿ ಇರಬೇಕಾಗುತ್ತದೆ ಹಾಗೂ ಅಡಿಕೆ ಹಿಡಿಯುವ ಚಾಕಚಕ್ಯತೆಯೂ ಅಗತ್ಯವಾಗಿದೆ. ಆರಂಭದಲ್ಲಿ ಅಭ್ಯಾಸ ಮಾಡಿಕೊಂಡು ನಂತರ ಸಲೀಸಾಗಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ಸತ್ಯನಾರಾಯಣ ಅವರು ಹೇಳುತ್ತಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಅಡಿಕೆ ಬೆಳೆಯುವ ಹಲವು ಪ್ರದೇಶಗಳಲ್ಲಿ  ಇಂದಿಗೂ ಅಡಿಕೆ ಎಳೆದು ಹಾಕಿದ ಬಳಿಕ ಹೆಕ್ಕುವ ಸಂಪ್ರದಾಯ ಇದೆ. ಇದರಿಂದ ಶ್ರಮ ಹೆಚ್ಚಾಗುತ್ತದೆ. ಇದಕ್ಕಾಗಿ  ಈ ಮಾದರಿ ಬಳಕೆ ಮಾಡಿದರೆ ಅಡಿಕೆ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕೃಷಿಕರ ಈ ಅಭ್ಯಾಸ ಮಾಡುತ್ತಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

2 hours ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

23 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

23 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

23 hours ago