ಅಡಿಕೆಗೊಂದು ಮೂಗು…..! | ಅಡಿಕೆ ಕೊಯ್ಲು ವೇಳೆ ಗಮನಿಸಬೇಕಾದ ಅಂಶ…. |

ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು ಪ್ರಮುಖವಾದ ಘಟ್ಟ. ನುರಿತ ಕಾರ್ಮಿಕರು ಈ ಕಾರ್ಯಕ್ಕೆ ಅಗತ್ಯ. ಈಚೆಗೆ ನುರಿತ ಕಾರ್ಮಿಕರ ಕೊರತೆ ಇರುವುದು ನಿಜ. ಇದೇ ವೇಳೆ ಅಡಿಕೆ ಕೊಯ್ಲಿನ ತಾಂತ್ರಿಕ ಕೌಶಲ್ಯ ಅಡಿಕೆ ಬೆಳೆಗಾರರಿಗೂ ಅಗತ್ಯವಿದೆ. ಅಂತಹ ತಾಂತ್ರಿಕ ಮಾಹಿತಿಗಳಲ್ಲಿ ಅಡಿಕೆ ಗೊನೆಯ ಮೂಗೂ ಒಂದು. ಅದರ ವಿವರ ಇಲ್ಲಿದೆ…

Advertisement
Advertisement

Advertisement

ಈಚೆಗೆ ವಿಟ್ಲದ ಸಿಪಿಸಿಆರ್‌ ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ ಹಾಗೂ ಸಿಪಿಸಿಆರ್‌ಐ ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ಅಡಿಕೆ ಕೌಶಲ್ಯ ಪಡೆಯ ಅಡಿಕೆ ಕೊಯ್ಲು ತರಬೇತಿ ಶಿಬಿರ ನಡೆಯಿತು. ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದರಲ್ಲಿ ವಿಶೇಷವಾಗಿ ಅಡಿಕೆ ಕೊಯಿಲು ವೇಳೆ ಪ್ರಮುಖವಾಗಿ ಗಮನಿಸಬೇಕಾದ ಅಡಿಕೆ ಗೊನೆಯ ಮೂಗಿನ ಬಗ್ಗೆ ತರಬೇತುದಾರ ಆರ್‌ ಜಿ ಹೆಗಡೆ (ರಾಮಚಂದ್ರ ಹೆಗಡೆ) ಅವರು ಅಡಿಕೆ ಗೊನೆಯ ಮೂಗಿನ ಬಗ್ಗೆ ಹಾಗೂ ಕೊಯ್ಲು ಸುಲಭದ ಬಗ್ಗೆ ಮಾಹಿತಿ ನೀಡಿದರು.

Advertisement

ಅಡಿಕೆ ಗೊನೆಗೆ ಮೂಗು ಎಂಬುದಿದೆ. ಈಗಾಗಲೇ ಅಡಿಕೆ ಕೊಯಿಲು ಮಾಡುವ ಮಂದಿಗೆ ಈ ಬಗ್ಗೆ ಯಾವುದೇ ಮಾಹಿತಿ ಅಗತ್ಯವಿಲ್ಲ. ಆದರೆ ಹೊಸದಾಗಿ ಕಲಿಯುವ ಹಾಗೂ ಅಡಿಕೆ  ಬೆಳೆಗೆ ಬಂದಿರುವ ಹೊಸದಾದ ಕೃಷಿಕರಿಗೆ ಈ ಮಾಹಿತಿಯ ಕೊರತೆ ಇದೆ. ಅಡಿಕೆ ಗೊನೆಯ ಮೂಗಿಗೆ ದೋಟಿಯನ್ನು ಅಥವಾ ಕೊಕ್ಕೆಯನ್ನು ಹಾಕಿದರೆ ಅಡಿಕೆ ಕೊಯ್ಲು ಸುಲಭವಾಗುತ್ತದೆ ಹಾಗೂ ಕತ್ತಿಯನ್ನು ಕೂಡಾ ಅಡಿಕೆ ಗೊನೆಯ ನಡುವೆ ದಾಟಿಸಲೂ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಅಡಿಕೆಗೊಂದು ಮೂಗು…..! | ಅಡಿಕೆ ಕೊಯ್ಲು ವೇಳೆ ಗಮನಿಸಬೇಕಾದ ಅಂಶ…. |"

Leave a comment

Your email address will not be published.


*