ಅಡಿಕೆ ಕೊಯ್ಲು ಹಾಗೂ ಸಿಂಪಡಣೆಗೆ ಕಾರ್ಬನ್ ಫೈಬರ್ ದೋಟಿ ತರಬೇತಿ ಶಿಬಿರವು ಸುಳ್ಯ ತಾಲೂಕಿನ ಕೊಲ್ಲಮೊಗ್ರು ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ನಡೆಯಿತು.
ಶಿಬಿರವನ್ನು ಕೃಷಿಕ ನಿತಿನ್ ಮಲ್ಲಾರ ಹಾಗೂ ಸಹಕಾರಿ ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ ಅವರ ತೋಟದಲ್ಲಿ ನಡೆಯಿತು. ತರಬೇತುದಾರರಾಗಿ ಮೂರುರು ಕಲ್ಲಬ್ಬೆಯ ಆರ್ ಜಿ ಹೆಗಡೆ ಹಾಗೂ ರಾಜೇಶ್ ಭಟ್ ಆಗಮಿಸಿದರು. ಅಡಿಕೆ ಕೊಯ್ಲು, ಅಡಿಕೆ ಸಿಂಪಡಣೆಯು ಫೈಬರ್ ದೋಟಿಯ ಮೂಲಕ ಸೂಕ್ತವಾಗಿ ಹಾಗೂ ಸುಲಭವಾಗು ನಡೆಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
#ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆ ತರಬೇತಿ ಶಿಬಿರ. ಪೈಬರ್ ದೋಟಿ ಮೂಲಕ. ಪ್ರಾಯೋಗಿಕ ವಿವರಣೆ ಆರ್ ಜಿ ಹೆಗಡೆ ಅವರಿಂದ. @kageri250 @ShobhaBJP @JnanendraAraga @AgriGoI @icarindia @nalinkateel pic.twitter.com/y3nkOuAEBR
— theruralmirror (@ruralmirror) March 23, 2022
ಶಿಬಿರವನ್ನು ಕೃಷಿಕ ಭವಾನಿಶಂಕರ ಪಿಂಡಿಮನೆ ಹಾಗೂ ಸುರೇಂದ್ರನಾಥ ಮಲ್ಲಾರ ಉದ್ಘಾಟಿಸಿದರು. ಈ ಸಂದರ್ಭ ಕೃಷಿಕರಾದ ಹರ್ಷಕುಮಾರ್ ದೇವಜನ, ಮಣಿಕಂಠ ಕೊಳಗೆ, ಹರಿಹರ ಕೊಲ್ಲಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಶೇಷಪ್ಪ ಗೌಡ, ಕೃಷಿಕ ಕೇಶವ ಭಟ್ ಕಟ್ಟ ಮೊದಲಾದವರಿದ್ದರು.