ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಡಿಆರ್‌ಐ(The Department of Revenue Intelligence) ವಶಕ್ಕೆ ಪಡೆದಿದೆ. ಆರೋಪಿ ರವಿಕುಮಾರ್ ಎಂಬವರನ್ನು ಸೋಮವಾರ ಮಧುರೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೇ ವೇಳೆ 4 ಕೋಟಿ ಮೌಲ್ಯದ 65 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇಗೆರೆ ದಾಳಿ ನಡೆಸಿದ ಡಿಆರ್‌ಐ , ಟ್ಯುಟಿಕೋರಿನ್‌ನಲ್ಲಿ ನಾಲ್ಕು 40 ಕಂಟೈನರ್‌ಗಳನ್ನು ತಡೆಹಿಡಿಯಿತು. ಇಂಡೋನೇಷ್ಯಾದ ಜಕಾರ್ತಾದಿಂದ ಹತ್ತಿ ಉತ್ಪನ್ನದ ನೆಪದಲ್ಲಿ ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿತ್ತು. ತಪಾಸಣೆಯ ವೇಳೆ ಹತ್ತಿಯ ಒಳಗಡೆ ಅಡಿಕೆ ಪತ್ತೆಯಾಗಿದೆ. 65 ಮೆಟ್ರಿಕ್ ಟನ್ ತೂಕದ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಬಳಿಕ ಲಾಜಿಸ್ಟಿಕ್ಸ್ ಕಂಪನಿಯ ಮಾಲೀಕರಾಗಿರುವ ರವಿಕುಮಾರ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು.
ಮಾಹಿತಿ ಪ್ರಕಾರ, ಕೆಲವು ಅಧಿಕಾರಿಗಳು ಈ ಕಳ್ಳಸಾಗಾಣಿಕೆಯ ಚಟುವಟಿಕೆಗೆ ನೆರವಾಗುತ್ತಿದ್ದಾರೆ. ಅವರ ಸಹಾಯದಿಂದಲೇ ಆಮದು ವಸ್ತುಗಳನ್ನು ತಪ್ಪಾಗಿ ನಮೂದಿಸಿ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿದೆ. ಇದೀಗ ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಮೂಲ ತಿಳಿಸಿದೆ ಎಂದು TOI ವರದಿ ಮಾಡಿದೆ.
DRI (The Department of Revenue Intelligence) has arrested the main accused who was smuggling arecanut.